ಬ್ರಿಸ್ಟಲ್ (ಪಿಟಿಐ): ಎಂಟನೇ ಕ್ರಮಾಂಕದ ಸ್ನೇಹ್ ರಾಣಾ (80; 154 ಎಸೆತ, 13 ಬೌಂಡರಿ) ಕೆಚ್ಚೆದೆಯಿಂದ ಗಳಿಸಿದ ಅರ್ಧಶತ ಭಾರತ ಮಹಿಳಾ ತಂಡದ ಕೈ ಹಿಡಿಯಿತು.

ಸ್ನೇಹ್ ಮತ್ತು 10ನೇ ಕ್ರಮಾಂಕದ ತಾನಿಯಾ ಭಾಟಿಯಾ ಅವರ ಅಮೋಘ ಆಟದಿಂದಾಗಿ ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧ ಇಲ್ಲಿ ನಡೆದ ಏಕೈಕ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಳ್ಳು ವಲ್ಲಿ ಮಿಥಾಲಿ ರಾಜ್ ಬಳಗ ಯಶಸ್ವಿಯಾಯಿತು.

ಫಾಲೊ ಆನ್ಗೆ ಒಳಗಾಗಿದ್ದ ಭಾರತ ಎರಡನೇ ಇನಿಂಗ್ಸ್ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ಮೊದಲ ಇನಿಂಗ್ಸ್ನಲ್ಲಿ ಅರ್ಧಶತಕ ಗಳಿಸಿದ್ದ ಶೆಫಾಲಿ ವರ್ಮಾ (63; 83 ಎಸೆತ, 11 ಬೌಂಡರಿ, 1 ಸಿಕ್ಸರ್) ಎರಡನೇ ಇನಿಂಗ್ಸ್ನಲ್ಲೂ ದಿಟ್ಟ ಆಟವಾಡಿದರು. ಮೂರನೇ ಕ್ರಮಾಂಕದ ದೀಪ್ತಿ ಶರ್ಮಾ (54; 168 ಎ, 8 ಬೌಂ) ಕೂಡ ಅರ್ಧಶತಕ ಸಿಡಿಸಿದರು.

ಮಧ್ಯಮ ಕ್ರಮಾಂಕ ಕುಸಿತ ಕಂಡಾಗ ತಂಡ ಇನಿಂಗ್ಸ್ ಸೋಲಿನ ಸುಳಿಯಲ್ಲಿ ಸಿಲುಕಿತ್ತು. ದೀಪ್ತಿ ಮತ್ತು ಪೂನಂ ರಾವತ್ (39 104 ಎ, 5 ಬೌಂ) 72 ರನ್ಗಳ ಜೊತೆಯಾಟದ ಮೂಲಕ ತಂಡವನ್ನು ಇನಿಂಗ್ಸ್ ಸೋಲಿನಿಂದ ಪಾರು ಮಾಡಿದರು.

ಆದರೂ ಸೋಲಿನ ಆತಂಕ ಕಾಡಿತ್ತು. ಆದರೆ ಪೂಜಾ ವಸ್ತ್ರಕಾರ್, ಸ್ನೇಹ್, ಶಿಖಾ ಪಾಂಡೆ ಮತ್ತು ತಾನಿಯಾ ಭಾಟಿಯಾ ತಂಡವನ್ನು ಪಾರು
ಮಾಡಿ ದರು.

ಗುರುವಾರ ಒಂದು ವಿಕೆಟ್ ಕಳೆದು ಕೊಂಡು 83 ರನ್ ಗಳಿಸಿದ್ದ ಭಾರತ ತಂಡಕ್ಕೆ ಇನಿಂಗ್ಸ್ ಸೋಲಿನಿಂದ ತಪ್ಪಿ
ಸಿಕೊಳ್ಳಲು ಮತ್ತೆ 83 ರನ್ ಬೇಕಾಗಿತ್ತು. ಶೆಫಾಲಿ ವರ್ಮಾ ಔಟಾದಾಗ ಒತ್ತಡ ಹೆಚ್ಚಾಯಿತು.

ದೀಪ್ತಿ ಮತ್ತು ಪೂನಂ ರಾವತ್ ಭೋಜನ ವಿರಾಮದ ವರೆಗೆ ಭರವಸೆ ತುಂಬಿದರು. ಮಿಥಾಲಿ ರಾಜ್ ಮತ್ತು ಹರ್ಮನ್ಪ್ರೀತ್ ಕೌರ್ ಎರ ಡಂಕಿಯನ್ನೂ ದಾಟದೆ ಮರಳಿದಾಗ ಸೋಲು ಖಚಿತ ಎಂದಾಯಿತು. ನಂತರ ಪರಿಸ್ಥಿತಿ ಸಂಪೂರ್ಣ ಬದಲಾಯಿತು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಇಂಗ್ಲೆಂಡ್: 9ಕ್ಕೆ 396 ಡಿಕ್ಲೇರ್; ಭಾರತ: 231; ಎರಡನೇ ಇನಿಂಗ್ಸ್: ಭಾರತ (ಫಾಲೊ ಆನ್, ಶುಕ್ರವಾರ 24.3 ಓವರ್ಗಳಲ್ಲಿ 1ಕ್ಕೆ 83): 121 ಓವರ್ಗಳಲ್ಲಿ 8ಕ್ಕೆ 344 (ಶೆಫಾಲಿ ವರ್ಮಾ 63, ದೀಪ್ತಿ ಶರ್ಮಾ 54, ಪೂನಂ ರಾವತ್ 39, ಸ್ನೇಹ್ ರಾಣಾ ಔಟಾಗದೆ 80, ಶಿಖಾ ಪಾಂಡೆ 18, ತಾನಿಯಾ ಭಾಟಿಯಾ ಔಟಾಗದೆ 44; ಕ್ಯಾಥರಿನ್ ಬ್ರೂಂಟ್ 49ಕ್ಕೆ1, ಸೋಫಿ ಎಕ್ಲೆಸ್ಟೋನ್ 118ಕ್ಕೆ4, ಹೀಥರ್ ನೈಟ್ 41ಕ್ಕೆ1, ನತಾಲಿ ಶೀವರ್ 21ಕ್ಕೆ2)
ಫಲಿತಾಂಶ: ಪಂದ್ಯ ಡ್ರಾ. ಪಂದ್ಯದ ಶ್ರೇಷ್ಠ ಆಟಗಾರ್ತಿ: ಶೆಫಾಲಿ ವರ್ಮಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.