ಮಂಗಳವಾರ, ಮಾರ್ಚ್ 9, 2021
18 °C

ಮಹಿಗೆ ಶುಭಾಶಯಗಳ ಮಹಾಪೂರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲೀಡ್ಸ್‌: ಭಾರತ ತಂಡದ ಹಿರಿಯ ಆಟಗಾರ ಮಹೇಂದ್ರ ಸಿಂಗ್‌ ಧೋನಿ, ಭಾನುವಾರ 38ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ಭಾರತಕ್ಕೆ ಏಕದಿನ ವಿಶ್ವಕಪ್‌ ಗೆದ್ದುಕೊಟ್ಟ ‘ಮಹಿ’ಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.

ಧೋನಿ ಅವರು ಪತ್ನಿ ಸಾಕ್ಷಿ, ಮಗಳು ಜೀವಾ ಮತ್ತು ಭಾರತ ತಂಡದ ಕೆಲ ಆಟಗಾರರ ಜೊತೆ ಶನಿವಾರ ತಡರಾತ್ರಿ ಮೂರು ಕೇಕ್‌ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ರಿಷಭ್‌ ಪಂತ್‌ ಜೊತೆ ನೃತ್ಯ ಮಾಡಿ ಸಂಭ್ರಮಿಸಿದ್ದಾರೆ.

ಈ ಚಿತ್ರ ಮತ್ತು ವಿಡಿಯೊವನ್ನು ಸಾಕ್ಷಿ ಅವರು ಇನ್‌ಸ್ಟಾಗ್ರಾಂನಲ್ಲಿ ಹಾಕಿದ್ದಾರೆ.

‘ಹುಟ್ಟು ಹಬ್ಬದ ಶುಭಾಶಯಗಳು ಮಹಿ ಅಣ್ಣ. ನಮಗೆಲ್ಲರಿಗೂ ನೀವು ಹಿರಿಯ ಸಹೋದರನಿದ್ದಂತೆ. ಎಂದೆಂದಿಗೂ ನೀವೇ ನನ್ನ ಕ್ಯಾಪ್ಟನ್‌’ ಎಂದು ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಟ್ವೀಟ್‌ ಮಾಡಿದ್ದಾರೆ.

ಕ್ರಿಕೆಟಿಗರಾದ ಹರಭಜನ್‌ ಸಿಂಗ್‌, ವೀರೇಂದ್ರ ಸೆಹ್ವಾಗ್, ವಿವಿಎಸ್‌ ಲಕ್ಷ್ಮಣ್‌, ಮೊಹಮ್ಮದ್‌ ಕೈಫ್‌, ಪ್ರಗ್ಯಾನ್‌ ಓಜಾ, ವೃದ್ಧಿಮಾನ್‌ ಸಹಾ, ಆರ್‌.ಪಿ.ಸಿಂಗ್‌, ರವಿಚಂದ್ರನ್‌ ಅಶ್ವಿನ್‌, ಕೇದಾರ್‌ ಜಾಧವ್‌ ಅವರೂ ಟ್ವಿಟರ್‌ನಲ್ಲಿ ಶುಭ ಹಾರೈಸಿದ್ದಾರೆ.

ನಟರಾದ ಮೋಹನ್‌ಲಾಲ್‌, ಸುನೀಲ್‌ ಶೆಟ್ಟಿ, ಧನುಷ್‌, ಸಾಯಿ ಧರ್ಮತೇಜ ಅವರೂ ಶುಭ ಕೋರಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು