ಅಹಮದಾಬಾದ್: ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಗುಜರಾತ್ನ ಎಡಗೈ ಸ್ಪಿನ್ನರ್ ಸಿದ್ದಾರ್ಥ್ ದೇಸಾಯಿ ಇನಿಂಗ್ಸ್ವೊಂದರಲ್ಲಿ ಒಂಬತ್ತು ವಿಕೆಟ್ಗಳ ಅಮೋಘ ಸಾಧನೆ ಮಾಡಿದ್ದಾರೆ.

ಇದು ರಣಜಿ ಟ್ರೋಫಿ ಟೂರ್ನಿಯ ಇತಿಹಾಸದಲ್ಲೇ ಮೂರನೇ ಶ್ರೇಷ್ಠ (ಇನಿಂಗ್ಸ್) ಬೌಲಿಂಗ್ ಪ್ರದರ್ಶನವಾಗಿದೆ. ಅಲ್ಲದೆ ರಣಜಿಯಲ್ಲಿ ಗುಜರಾತ್ ಬೌಲರ್ನ ಅತ್ಯುತ್ತಮ ಸಾಧನೆಯಾಗಿದೆ.

ಅಹಮದಾಬಾದ್ನಲ್ಲಿ ಉತ್ತರಾಖಂಡದ ವಿರುದ್ಧ ಇಂದು (ಗುರುವಾರ) ಆರಂಭವಾಗಿರುವ ಎಲೈಟ್ 'ಸಿ' ಗುಂಪಿನ ರಣಜಿ ಪಂದ್ಯದಲ್ಲಿ ಸಿದ್ದಾರ್ಥ್ ಈ ದಾಖಲೆ ಬರೆದಿದ್ದಾರೆ.

ಇನ್ನೊಂದು ವಿಕೆಟ್ ಗಳಿಸಿದ್ದರೆ ಸಿದ್ದಾರ್ಥ್ಗೆ ಎಲ್ಲ 10 ವಿಕೆಟ್ ಗಳಿಸುವ ಅವಕಾಶ ಇತ್ತು. ಆದರೆ ಕೊನೆಯ ವಿಕೆಟ್ ವಿಶಾಲ್ ಜೈಸ್ವಾಲ್ ಪಾಲಾಯಿತು. ಇದರಿಂದಾಗಿ ವಿಶಿಷ್ಟ ದಾಖಲೆ ಬರೆಯುವ ಅವಕಾಶದಿಂದ ಸ್ವಲ್ಪದರಲ್ಲೇ ವಂಚಿತರಾದರು.

ಸಿದ್ದಾರ್ಥ್ ಸ್ಪಿನ್ ಮೋಡಿಗೆ ನಲುಗಿದ ಉತ್ತರಾಖಂಡ 30 ಓವರ್ಗಳಲ್ಲಿ 111 ರನ್ಗಳಿಗೆ ಸರ್ವಪತನವನ್ನು ಕಂಡಿತು.

ಸಿದ್ದಾರ್ಥ್ 15 ಓವರ್ಗಳಲ್ಲಿ 36 ರನ್ನಿಗೆ ಒಂಬತ್ತು ವಿಕೆಟ್ಗಳನ್ನು ಕಬಳಿಸಿದರು. ಇದರಲ್ಲಿ ಐದು ಮೇಡನ್ ಓವರ್ ಸೇರಿತ್ತು.

ರಣಜಿ ಟ್ರೋಫಿ ಇತಿಹಾಸದಲ್ಲೇ ಶ್ರೇಷ್ಠ ಬೌಲಿಂಗ್ ಪ್ರದರ್ಶನ (ಇನಿಂಗ್ಸ್):

ಅಂಶುಲ್ ಕಂಬೋಜ್ (ಹರಿಯಾಣ): 49/10 (ಕೇರಳ ವಿರುದ್ಧ, 2024)

ಅಂಕಿತ್ ಚವನ್ (ಮುಂಬೈ): 23/9 (ಪಂಜಾಬ್ ವಿರುದ್ಧ, 2012)

ಸಿದ್ದಾರ್ಥ್ ದೇಸಾಯಿ (ಗುಜರಾತ್): 36/9 (ಉತ್ತರಾಖಂಡ ವಿರುದ್ಧ 2025)
.Ranji Trophy: ಕೌಶಿಕ್, ಅಭಿಲಾಷ್ ಮಾರಕ ದಾಳಿ; ಪಂಜಾಬ್ ತತ್ತರ, 55ಕ್ಕೆ ಆಲೌಟ್.Ranji Trophy: ರಣಜಿ ಅಂಗಳದಲ್ಲಿಯೂ ಮಂಕಾದ ತಾರೆಗಳು!.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.