ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ20 ವಿಶ್ವಕಪ್‌ಗೆ ತಂಡಗಳ ವಿಂಗಡಣೆ: ಒಂದೇ ಗುಂಪಿನಲ್ಲಿ ಭಾರತ Vs ಪಾಕಿಸ್ತಾನ

ಅಕ್ಷರ ಗಾತ್ರ

ದುಬೈ: ಭಾರತ ಆತಿಥ್ಯ ವಹಿಸಲಿರುವ ಮುಂಬರುವ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾಗವಹಿಸುವ ತಂಡಗಳ ಗುಂಪುಗಳ ವಿಂಗಡಣೆಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಘೋಷಿಸಿದೆ.

ಭಾರತ ಹಾಗೂ ಪಾಕಿಸ್ತಾನ ತಂಡಗಳು ಒಂದೇ ಗುಂಪಿನಲ್ಲಿ ಕಾಣಿಸಿಕೊಂಡಿರುವುದು ಅಭಿಮಾನಿಗಳ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. 'ಸೂಪರ್ 12'ರ ಹಂತದಲ್ಲಿ 'ಗುಂಪು 2'ರಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ.

ಭಾರತದಲ್ಲಿ ಕೋವಿಡ್ ಕಾರಣಗಳಿಂದಾಗಿ ಬಿಸಿಸಿಐ, ಪುರುಷರ ಟ್ವೆಂಟಿ-20 ವಿಶ್ವಕಪ್ ಆಯೋಜನೆಯನ್ನು ದುಬೈ ಹಾಗೂ ಒಮಾನ್‌ಗೆ ಸ್ಥಳಾಂತರಗೊಳಿಸಿತ್ತು. ಈ ಬಹುನಿರೀಕ್ಷಿತ ಟೂರ್ನಿಯು ಅಕ್ಟೋಬರ್ 17ರಿಂದ ನವೆಂಬರ್ 14ರ ವರೆಗೆ ಆಯೋಜನೆಯಾಗಲಿದೆ.

'ರೌಂಡ್ 1'ರಲ್ಲಿ ಒಟ್ಟು ಎಂಟು ತಂಡಗಳಿವೆ.ಇದನ್ನು ತಲಾ ನಾಲ್ಕು ತಂಡಗಳಂತೆ ಎರಡು ಗುಂಪುಗಳಲ್ಲಿ ವಿಂಗಡಿಸಲಾಗಿದೆ. 'ಗುಂಪು ಎ'ನಲ್ಲಿ ಶ್ರೀಲಂಕಾ, ಐರ್ಲೆಂಡ್, ಹಾಲೆಂಡ್ ಮತ್ತು ನಮೀಬಿಯಾ ತಂಡಗಳು ಕಾಣಿಸಿಕೊಂಡಿದೆ. ಹಾಗೆಯೇ 'ಗುಂಪು ಬಿ'ನಲ್ಲಿ ಬಾಂಗ್ಲಾದೇಶ, ಸ್ಕಾಟ್ಲೆಂಡ್, ಪಪುವಾ ನ್ಯೂ ಗಿನಿ ಮತ್ತು ಒಮಾನ್ ತಂಡಗಳಿವೆ.

'ಗುಂಪು ಎ' ಹಾಗೂ 'ಗುಂಪು ಬಿ' ವಿಭಾಗದಲ್ಲಿ ಅಗ್ರ ಎರಡು ಸ್ಥಾನಗಳನ್ನು ಪಡೆಯುವ ತಂಡಗಳು 'ಸೂಪರ್ 12'ರ ಹಂತಕ್ಕೆ ತೇರ್ಗಡೆ ಹೊಂದಲಿವೆ.

'ಸೂಪರ್ 12'ರ ಹಂತವನ್ನು ತಲಾ ಆರು ತಂಡಗಳಂತೆ 'ಗುಂಪು 1' ಮತ್ತು 'ಗುಂಪು 2' ವಿಭಾಗಗಳಾಗಿ ವಿಂಗಡಿಸಲಾಗಿದೆ. 'ಗುಂಪು 1'ರಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ವೆಸ್ಟ್‌ಇಂಡೀಸ್ ಮತ್ತು 'ಗುಂಪು ಎ'ರ ವಿಜೇತ ತಂಡ ಮತ್ತು 'ಗುಂಪು ಬಿ' ವಿಭಾಗದ ರನ್ನರ್-ಅಪ್ ತಂಡಗಳು ಕಾಣಿಸಿಕೊಳ್ಳಲಿವೆ.

ಅದೇ ರೀತಿ 'ಗುಂಪು 2'ರಲ್ಲಿ ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್, ಅಫ್ಗಾನಿಸ್ತಾನ, 'ಗುಂಪು ಬಿ' ವಿಭಾಗದ ವಿಜೇತ ತಂಡ ಮತ್ತು 'ಗುಂಪು ಎ' ವಿಭಾಗದ ರನ್ನರ್-ಅಪ್ ತಂಡಗಳು ಸ್ಥಾನ ಪಡೆಯಲಿವೆ.

ಐಸಿಸಿ ಟ್ವೆಂಟಿ-20 ವಿಶ್ವಕಪ್ತಂಡಗಳ ವಿಂಗಡಣೆ ಇಂತಿದೆ:

ರೌಂಡ್ 1

ಗುಂಪು ಎ: ಶ್ರೀಲಂಕಾ, ಐರ್ಲೆಂಡ್, ಹಾಲೆಂಡ್, ನಮೀಬಿಯಾ
ಗುಂಪು ಬಿ: ಬಾಂಗ್ಲಾದೇಶ, ಸ್ಕಾಟ್ಲೆಂಡ್, ಪಪುವಾ ನ್ಯೂ ಗಿನಿ, ಒಮಾನ್

ಸೂಪರ್ 12

ಗುಂಪು 1: ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ವೆಸ್ಟ್‌ಇಂಡೀಸ್, ಎ1 ಮತ್ತು ಬಿ2.
ಗುಂಪು 2: ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್, ಅಫ್ಗಾನಿಸ್ತಾನ, ಎ2 ಮತ್ತು ಬಿ1.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT