ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನಸ್ವಾಮಿಯಲ್ಲಿ ವಿಶ್ವಕಪ್ ಸಿದ್ಧತೆ ಆರಂಭ

Published 10 ಆಗಸ್ಟ್ 2023, 17:38 IST
Last Updated 10 ಆಗಸ್ಟ್ 2023, 17:38 IST
ಅಕ್ಷರ ಗಾತ್ರ

ಬೆಂಗಳೂರು: ಅಕ್ಟೋಬರ್‌ನಲ್ಲಿ ಆರಂಭವಾಗಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಕೆಲವು ಪಂಧ್ಯಗಳು ನಡೆಯಲಿರುವ ಚಿನ್ನಸ್ವಾಮಿ ಕ್ರೀಡಾಂಗಣಗಳು ಸಿದ್ಧತೆಗಳು ನಡೆದಿವೆ.

ಈ ಕ್ರೀಡಾಂಗಣದಲ್ಲಿ ಒಟ್ಟು ಐದು ಪಂದ್ಯಗಳು ನಡೆಯಲಿವೆ.

‘ಕೆಲವು ದಿನಗಳ ಹಿಂದೆ ಐಸಿಸಿ ನಿಯೋಗವು ಭೇಟಿ ನೀಡಿ ಕ್ರೀಡಾಂಗಣ ಪರಿಶೀಲನೆ ಮಾಡಿತ್ತು. ಇದೀಗ ಕೆಲವು ನವೀಕರಣ ಕಾರ್ಯವನ್ನು ಆರಂಭಿಸಲಾಗಿದೆ. ಕೆಲವು ಸ್ಟ್ಯಾಂಡ್‌ಗಳ ಮೇಲ್ಚಾವಣಿಗೆ   ಹೊಸ ಶೀಟ್‌ಗಳನ್ನು ಅಳವಡಿಸಲಾಗುತ್ತಿದೆ. ಹಾಳಾಗಿರುವ ಆಸನಗಳನ್ನು ತೆಗೆದು ಹಾಕಿ ಹೊಸದನ್ನು ಹಾಕಲಾಗುತ್ತಿದೆ. ಪ್ರೇಕ್ಷಕರಿಗಾಗಿ ಶೌಚಾಲಯಗಳ ನವೀಕರಣ ಕೂಡ ನಡೆಯುತ್ತಿದೆ‘ ಎಂದು ಕೆಎಸ್‌ಸಿಎ ಅಧ್ಯಕ್ಷ ರಘುರಾಮ್ ಭಟ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT