ಮಂಗಳವಾರ, ಮೇ 24, 2022
26 °C

IND vs ENG: ದಿನದಾಟ ಅಂತ್ಯಕ್ಕೆ ಇಂಗ್ಲೆಂಡ್‌ 53–3, ಇನ್ನೂ ಬೇಕಿದೆ 429 ರನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

IND vs ENG

ಚೆನ್ನೈ: ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ಕೊನೆಯ ಅವಧಿಯಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ 3 ವಿಕೆಟ್ ಕಳೆದುಕೊಂಡು 53 ರನ್ ಗಳಿಸಿದೆ.

ಭಾರತ ನೀಡಿರುವ 482 ರನ್‌ ಗುರಿ ಬೆನ್ನತ್ತಿರುವ ಇಂಗ್ಲೆಂಡ್‌ಗೆ ಆರಂಭದಲ್ಲೇ ಅಕ್ಷರ್ ಪಟೇಲ್ ಹಾಗೂ ಆರ್.ಅಶ್ವಿನ್ ಆಘಾತ ನೀಡಿದ್ದಾರೆ. ಪರಿಣಾಮವಾಗಿ ಇಂಗ್ಲೆಂಡ್ ತಂಡವು ಉಳಿದ ಎರಡು ದಿನಗಳಲ್ಲಿ, ಬಾಕಿ ಇರುವ 7 ವಿಕೆಟ್‌ಗಳೊಂದಿಗೆ 429 ರನ್ ಗಳಿಸಬೇಕಿದೆ. ಬೌಲರ್‌ಗಳಿಗೆ ನೆರವಾಗುವ ಪಿಚ್‌ನಲ್ಲಿ ಇಂಗ್ಲೆಂಡ್ ಈ ಗುರಿಯನ್ನು ಬೆನ್ನಟ್ಟಿ ಗೆಲುವು ಸಾಧಿಸುವುದು ಅನುಮಾನ ಎಂದು ಕ್ರಿಕೆಟ್ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಓದಿ: 

ಅಕ್ಷರ್ ಪಟೇಲ್ 9 ಓವರ್ ಎಸೆದು 15 ರನ್‌ ನೀಡಿ 3 ವಿಕೆಟ್ ಕಬಳಿಸಿದ್ದಾರೆ. ಇದರಲ್ಲಿ ಮೂರು ಮೇಡನ್ ಓವರ್‌ಗಳಿವೆ. ಅಶ್ವಿನ್ ಅವರು 8 ಓವರ್ ಎಸೆದು 28 ರನ್‌ ನೀಡಿ 1 ವಿಕೆಟ್ ಪಡೆದಿದ್ದಾರೆ. ಒಂದು ಮೇಡನ್ ಓವರ್ ಮಾಡಿದ್ದಾರೆ. ಇಶಾಂತ್ ಶರ್ಮಾ 2 ಓವರ್ ಎಸೆದು 6 ರನ್ ನೀಡಿದ್ದು, 1 ಮೇಡನ್ ಓವರ್ ಮಾಡಿದ್ದಾರೆ.

ಇಂಗ್ಲೆಂಡ್ ಪರ ರೋರಿ ಬರ್ನ್ಸ್ 25, ಡಾಮ್ ಸಿಬ್ಲಿ 3, ಜ್ಯಾಕ್ ಲೀಚ್ 0 ರನ್‌ ಗಳಿಸಿ ಔಟಾಗಿದ್ದಾರೆ. ಡ್ಯಾನ್ ಲಾರೆನ್ಸ್ 19 ಹಾಗೂ ಜೋ ರೂಟ್ 2 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

ಭಾರತಕ್ಕೆ ಭಾರಿ ಮುನ್ನಡೆ

ಮೊದಲ ಇನ್ನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ ಶತಕದ ನೆರವಿನಿಂದ 329 ರನ್‌ ಗಳಿಸಿದ್ದ ಟೀಮ್ ಇಂಡಿಯಾ ಆರ್.ಅಶ್ವಿನ್ ಅವರ ಬೌಲಿಂಗ್‌ ಮೋಡಿಯಿಂದ (5 ವಿಕೆಟ್) ಇಂಗ್ಲೆಂಡ್‌ ಅನ್ನು 134ಕ್ಕೆ ಆಲೌಟ್ ಮಾಡುವಲ್ಲಿ ಸಫಲವಾಗಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ಅಶ್ವಿನ್ ಅವರ ಆಕರ್ಷಕ ಶತಕ (106) ಹಾಗೂ ನಾಯಕ ವಿರಾಟ್ ಕೊಹ್ಲಿ ಅವರ ಅರ್ಧಶತಕದ (62) ನೆರವಿನಿಂದ 286 ರನ್‌ ಗಳಿಸಿ ಆಲೌಟ್ ಆಗಿದೆ. ಇದರೊಂದಿಗೆ ಎದುರಾಳಿ ತಂಡಕ್ಕೆ 482 ರನ್‌ಗಳ ದೊಡ್ಡ ಮೊತ್ತದ ಗುರಿ ನೀಡಿದೆ.

ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು