ಆಸ್ಟ್ರೇಲಿಯಾ ನೆಲದಲ್ಲಿ ಭಾರತ ಅಂಡರ್-19 ತಂಡ ತನ್ನ ಪ್ರಾಬಲ್ಯ ಮುಂದುವರೆಸಿದೆ. ಏಕದಿನ ಟೂರ್ನಮೆಂಟ್ನಲ್ಲಿ ಗೆಲುವು ಸಾಧಿಸಿದ್ದ ಟೀಂ ಇಂಡಿಯಾ, ಇದೀಗ ಆಸಿಸ್ ಅಂಡರ್–19 ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕೂಡ ಇನಿಂಗ್ಸ್ ಹಾಗೂ 58 ರನ್ಗಳ ಬೃಹತ್ ಗೆಲುವು ದಾಖಲಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ತನ್ನ ಮೊದಲ ಇನಿಂಗ್ಸ್ನಲ್ಲಿ 243 ರನ್ಗಳಿಗೆ ಆಲೌಟ್ ಆಯಿತು. ಇದಕ್ಕೆ ಉತ್ತರವಾಗಿ ಭಾರತ 428 ರನ್ ಗಳಿಸಿತ್ತು. 185 ರನ್ಗಳ ಹಿನ್ನಡೆಯೊಂದಿಗೆ 2ನೇ ಇನಿಂಗ್ಸ್ ಆರಂಭಿಸಿದ ಕಾಂಗರೂ ಪಡೆ ಕೇವಲ 127ಕ್ಕೆ ಆಲೌಟ್ ಆಗುವ ಮೂಲಕ ಮೂಲಕ ಇನಿಂಗ್ಸ್ ಹಾಗೂ 58 ರನ್ಗಳ ಸೋಲು ಅನುಭವಿಸಿತು.

ಭಾರತ ಪರ ಮಿಂಚಿದ ವೈಭವ್

ಭಾರತ ಅಂಡರ್ –19 ಪರ ಅಮೊಘ ಬ್ಯಾಟಿಂಗ್ ಪ್ರದರ್ಶಿಸಿದ ಆರಂಭಿಕ ಬ್ಯಾಟರ್ ವೈಭವ್ ಸೂರ್ಯವಂಶಿ ಕೇವಲ 86 ಎಸೆತಗಳಲ್ಲಿ 8 ಸಿಕ್ಸರ್ ಹಾಗೂ 9 ಬೌಂಡರಿ ನೆರವಿನಿಂದ 113 ರನ್ ಸಿಡಿಸಿದರು. ಆ ಮೂಲಕ ಟಿ–20, ಏಕದಿನ ಮಾತ್ರವಲ್ಲ ಟೆಸ್ಟ್ನಲ್ಲೂ ಅದೇ ರೀತಿಯ ಬ್ಯಾಟಿಂಗ್ ಮಾಡಬಲ್ಲೆ ಎಂಬ ಸೂಚನೆ ನೀಡಿದ್ದಾರೆ.

ಅವರ ಜೊತೆಗೆ ವೇದಾಂತ್ ತ್ರಿವೇದಿ 140 ರನ್ ಹಾಗೂ ಖಿಲಾನ್ ಪಟೇಲ್ 49 ರನ್ ಗಳಿಸಿದರು. ಆ ಮೂಲಕ ಭಾರತ ಅಂಡರ್ –19 ತಂಡ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 428 ರನ್ ಕಲೆಹಾಕಿತ್ತು.

185ರನ್ಗಳ ಇನಿಂಗ್ಸ್ ಹಿನ್ನಡೆಯೊಂದಿಗೆ 2ನೇ ಇನಿಂಗ್ಸ್ ಆರಂಭಿಸಿದ್ದ ಆಸ್ಟ್ರೇಲಿಯಾ ತಂಡ ಭಾರತೀಯರ ಬೌಲಿಂಗ್ ದಾಳಿಗೆ ನಲುಗಿತು. ಆಸ್ಟ್ರೇಲಿಯಾ ಪರ 9ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಆರ್ಯನ್ ಶರ್ಮಾ 43 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
.ILT20 ಲೀಗ್ನಲ್ಲಿ ಆರ್ ಅಶ್ವಿನ್ ಅನ್ಸೋಲ್ಡ್.U-19 | AUS ವಿರುದ್ಧ ವೈಭವ್ ಅಬ್ಬರ: ಬೌಂಡರಿ, ಸಿಕ್ಸರ್ ಸಹಿತ ಸ್ಫೋಟಕ ಬ್ಯಾಟಿಂಗ್.
ಭಾರತದ ಪರ ಖಿಲಾನ್ ಪಟೇಲ್ 19ಕ್ಕೆ3, ಅನ್ಮೋಲ್ಜಿತ್ ಸಿಂಗ್ 55ಕ್ಕೆ2, ದೀಪೇಶ್ 16ಕ್ಕೆ3, ಕಿಶನ್ ಕುಮಾರ್ 26ಕ್ಕೆ2 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಆಸಿಸ್ ಪರ ಮೊದಲ ಇನ್ನಿಂಗ್ಸ್ನಲ್ಲಿ ಸ್ಟೀವನ್ ಹೋಗನ್ (92) ಹೊರತುಪಡಿಸಿ, ಉಳಿದ ಯಾವುದೇ ಬ್ಯಾಟರ್ಗಳು ಕೂಡ ರನ್ ಗಳಿಸುವಲ್ಲಿ ವಿಫಲರಾಗಿದ್ದರು. ಭಾರತದ ಪರ ದೀಪೇಶ್ ದೇವೇಂದ್ರನ್ 5 ವಿಕೆಟ್ ಪಡೆದು ಮಿಂಚಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.