ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗೂಲಿಯನ್ನು ಹೊಗಳಿದ್ದಕ್ಕೆ ಗವಾಸ್ಕರ್ ಕಿಡಿ: ಕೊಹ್ಲಿ ಹೇಳಿಕೆಗೆ ಗೌತಮ್ ಸಮರ್ಥನೆ

Last Updated 27 ನವೆಂಬರ್ 2019, 11:58 IST
ಅಕ್ಷರ ಗಾತ್ರ

ನವದೆಹಲಿ:‘ಭಾರತ ತಂಡದಗೆಲುವಿನ ಅಭಿಯಾನ ಆರಂಭವಾಗಿದ್ದೇ ಸೌರವ್‌ ಗಂಗೂಲಿಯವರಿಂದ’ ಎಂದು ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ನೀಡಿದ್ದ ಹೇಳಿಕೆಯನ್ನು ಮಾಜಿ ಕ್ರಿಕೆಟಿಗ ಸುನೀಲ್‌ ಗವಾಸ್ಕರ್ ಅವರು ಖಂಡಿಸಿದ್ದರು. ಆದರೆ, ಮತ್ತೊಬ್ಬ ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌, ಕೊಹ್ಲಿ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಕೋಹ್ಲಿ ಹೇಳಿಕೆ ಸಂಬಂಧಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗಂಭೀರ್‌,‘ಕೊಹ್ಲಿ ಹೇಳಿಕೆಯು ಅವರ ವೈಯಕ್ತಿಕ. ಆದರೂ, ಭಾರತದಿಂದ ಹೊರಗಿನ ಸರಣಿಗಳಲ್ಲಿ ಜಯಗಳಿಸುವುದು ಆರಂಭವಾದದ್ದು ಗಂಗೂಲಿ ನಾಯಕತ್ವದಲ್ಲಿಯೇ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಸುನೀಲ್‌ ಗವಾಸ್ಕರ್‌, ಕಪಿಲ್‌ ದೇವ್‌ ಅವರಂತಹ ಈ ಹಿಂದಿನ ನಾಯಕರುಗಳ ಅವಧಿಯಲ್ಲಿ ಭಾರತವು ಸ್ವದೇಶಿ ಸರಣಿಗಳಲ್ಲಿ ಪ್ರಬಲ ತಂಡವಾಗಿತ್ತು. ತಂಡದ ನಾಯಕತ್ವವನ್ನುಗಂಗೂಲಿ ವಹಿಸಿಕೊಂಡ ಬಳಿಕನಾವು ವಿದೇಶಿ ಸರಣಿಗಳಲ್ಲಿಯೂ ಗೆಲ್ಲಲಾರಂಭಿಸಿದೆವು. ವಿರಾಟ್‌ ಕೊಹ್ಲಿ ಅವರೂ ಇದನ್ನೇ ಹೇಳಿರಬಹುದು. ನಾನು ಕೊಹ್ಲಿ ಮಾತನ್ನು ಒಪ್ಪುತ್ತೇನೆ’ ಎಂದಿದ್ದಾರೆ.

ಭಾರತವು ಐತಿಹಾಸಿಕ ಪಿಂಕ್‌ ಟೆಸ್ಟ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಇನಿಂಗ್ಸ್‌ ಹಾಗು 46 ರನ್‌ಗಳಿಂದ ಗೆಲುವು ಕಂಡಿತ್ತು. ಪಂದ್ಯದ ಬಳಿಕ ಮಾತನಾಡಿದ್ದ ಕೊಹ್ಲಿ, ‘ಇದೊಂದು ಅಮೋಘವಾದ ಜಯ. ಆದರೆ ನಾನು ನಿಮಗೊಂದು ವಿಚಾರ ಹೇಳಲೇಬೇಕು. ಇಂತಹ ಗೆಲುವಿನ ಅಭಿಯಾನ ಆರಂಭವಾಗಿದ್ದೇ ದಾದಾ(ಗಂಗೂಲಿ) ತಂಡದಿಂದ. ನಾವು ಅದನ್ನು ಮುಂದುವರಿಸುತ್ತಿದ್ದೇವೆ ಅಷ್ಟೇ’ ಎಂದಿದ್ದರು.

ಈ ಹೇಳಿಕೆಯಿಂದ ಕೆರಳಿರುವ ಗವಾಸ್ಕರ್‌, ‘ಭಾರತ ತಂಡದ ನಾಯಕ ಜಯದ ಅಭಿಯಾನ ಆರಂಭವಾಗಿದ್ದು ಗಂಗೂಲಿ ತಂಡದಿಂದ ಎಂದಿದ್ದಾರೆ. ದಾದಾ ಈಗ ಬಿಸಿಸಿಐ ಅಧ್ಯಕ್ಷ ಎಂಬುದು ನನಗೆ ಗೊತ್ತಿದೆ. ಹಾಗಾಗಿ ಅವರ ಬಗ್ಗೆಕೊಹ್ಲಿ ನಯವಾಗಿ ಮಾತನಾಡುತ್ತಿರಬಹುದು. ಆದರೆ, ಭಾರತವು 1970, 80ರ ದಶಕದಿಂದಲೂ ಗೆಲುವು ಸಾಧಿಸುತ್ತಿದೆ. ಆಗ ಅವರಿನ್ನೂ(ಕೊಹ್ಲಿ) ಹುಟ್ಟಿರಲಿಲ್ಲ’ ಎಂದು ಕಿಡಿಕಾರಿದ್ದಾರೆ.

ಮುಂದುವರಿದು, ‘ಕ್ರಿಕೆಟ್‌ ಶುರುವಾಗಿದ್ದು 2000ದಿಂದ ಈಚೆಗೆಷ್ಟೇ ಎಂಬಂತೆ ಬಹಳಷ್ಟು ಜನರು ಭಾವಿಸಿದ್ದಾರೆ. ಆದರೆ, ವಿದೇಶಿ ಸರಣಿಗಳಲ್ಲಿ ಭಾರತವು 1970ರಲ್ಲೇ ಜಯ ಸಾಧಿಸಿತ್ತು. ವಿದೇಶದಲ್ಲಿ ನಡೆದ ಹಲವು ಸರಣಿಗಳನ್ನು ಡ್ರಾ ಮಾಡಿಕೊಂಡಿತ್ತು. ಎಲ್ಲ ತಂಡಗಳಂತೆಯೇ ಸೋಲುಗಳನ್ನೂ ಕಂಡಿತ್ತು’ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT