ಬುಧವಾರ, ಸೆಪ್ಟೆಂಬರ್ 22, 2021
29 °C

ಟಿ20; ಟಾಸ್ ಗೆದ್ದ ಶ್ರೀಲಂಕಾ, ಬೌಲಿಂಗ್ ಆಯ್ಕೆ...

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಕೊಲೊಂಬೊ; ಇಲ್ಲಿನ ಕೊಲೊಂಬೊ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಶ್ರೀಲಂಕಾ ನಡುವಿನ ಟಿ20 ಮೊದಲ ಪಂದ್ಯ ಆರಂಭವಾಗಿದ್ದು, ಟಾಸ್ ಗೆದ್ದಿರುವ ಶ್ರೀಲಂಕಾ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ.

ಭಾರತದ ವಿರುದ್ಧ ಕಡೆಯ ಏಕದಿನ ಪಂದ್ಯವನ್ನು ಗೆದ್ದು ಉತ್ಸಾಹದಲ್ಲಿರುವ ಶ್ರೀಲಂಕಾ ಪಡೆ ಟಿ20 ಸರಣಿಯ ಮೊದಲನೇ ಪಂದ್ಯ ಗೆದ್ದು ಭಾರತದ ಎದುರು ತನ್ನ ಸಾಮರ್ಥ್ಯ ತೋರಿಸಲು ಸಿದ್ದವಾಗಿದೆ. ಶ್ರೀಲಂಕಾ ಹಾಗೂ ಭಾರತ ಒಟ್ಟು ಮೂರು ಟಿ20 ಪಂದ್ಯಗಳನ್ನು ಆಡಲಿವೆ.

ತಂಡಗಳ ಆಟಗಾರರು ಇಂತಿದ್ದಾರೆ: ಭಾರತ; ಶಿಖರ್ ದವನ್ (ನಾಯಕ) ಪೃಥ್ವಿ ಶಾ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಹಾರ್ಧಿಕ್ ಪಾಂಡ್ಯ, ಕುನಾಲ್ ಪಾಂಡ್ಯ, ದೀಪಕ್ ಚಹಾರ್, ಭುವನೇಶ್ವರ ಕುಮಾರ್, ಯಜುವೇಂದ್ರ ಚಹಾಲ್, ವರುಣ್ ಚಕ್ರವರ್ತಿ

ಶ್ರೀಲಂಕಾ; ದಾಸುನ್ ಶಾನಕಾ (ನಾಯಕ), ಅವಿಶಾಕ್ ಫರ್ನಾಂಡೊ, ಮಿನೋದ್ ಭಾನುಕಾ, ಧನಂಜಯಾ ಡಿ ಸಿಲ್ವಾ, ಚಾರಿತ್ ಅಸ್ಲಂಕಾ, ಆಸೇನ್ ಭಂಡಾರ, ವಾನಿದು ಹಾಸರಂಗಾ, ಚಾಮಿಕಾ ಕರುಣಾರತ್ನೆ, ಇಸುರು ಉಡಾನಾ, ಅಖಿಲಾ ಧನಂಜಯ, ಧುಷ್ಯಂತ್ ಚಾಮೀರಾ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು