ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs WI T20 ಪಂದ್ಯ: ವಿಂಡೀಸ್ ಬ್ಯಾಟಿಂಗ್, ಭಾರತ ಪರ ತಿಲಕ್–ಮುಕೇಶ್ ಪದಾರ್ಪಣೆ

Published 3 ಆಗಸ್ಟ್ 2023, 14:48 IST
Last Updated 3 ಆಗಸ್ಟ್ 2023, 14:48 IST
ಅಕ್ಷರ ಗಾತ್ರ

ಟರೌಬಾ, ಟ್ರಿನಿಡಾಡ್: ಭಾರತದ ಎದುರು ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ಸರಣಿಯಲ್ಲಿ ಮುಖಭಂಗ ಅನುಭವಿಸಿರುವ ಆತಿಥೇಯ ವೆಸ್ಟ್‌ ಇಂಡೀಸ್‌ ತಂಡವು ಇಂದಿನಿಂದ ಆರಂಭವಾಗಿರುವ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಆರಂಭಿಸಿದೆ.

ಇಲ್ಲಿನ ಬ್ರಯಾನ್‌ ಲಾರಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ವಿಂಡೀಸ್‌ ಟಾಸ್‌ ಜಯಿಸಿದೆ.

ಭಾರತ ತಂಡ ಅನುಭವಿಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಕಣಕ್ಕಿಳಿದಿದೆ. ಹಾರ್ದಿಕ್‌ ಪಾಂಡ್ಯ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿದ್ದಾರೆ. ತಿಲಕ್‌ ವರ್ಮಾ, ಮುಕೇಶ್‌ ಕುಮಾರ್‌ ಅವರಿಗೆ ಪದಾರ್ಪಣೆ ಅವಕಾಶ ಸಿಕ್ಕಿದೆ.

ಸದ್ಯ 3 ಓವರ್‌ಗಳ ಆಟ ಮುಗಿದಿದ್ದು, ವಿಂಡೀಸ್ ವಿಕೆಟ್ ನಷ್ಟವಿಲ್ಲದೆ 21 ರನ್ ಗಳಿಸಿದೆ.

ಇನ್ನೂ ಖಾತೆ ತೆರೆಯದ ಕೈಲ್‌ ಮಯರ್ಸ್‌ ಮತ್ತು ಬ್ರೆಂಡನ್‌ ಕಿಂಗ್ (ರನ್‌) ಇನಿಂಗ್ಸ್‌ ಆರಂಭಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT