ಬೆಂಗಳೂರು: 'ಅಬ್ಬರದ ಪ್ರದರ್ಶನದ ಮೂಲಕ ಎದುರಾಳಿಗಳಲ್ಲಿ ನಡುಕ ಹುಟ್ಟಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಕೊಹ್ಲಿ ಮತ್ತು ಡಿವಿಲಿಯರ್ಸ್ ಜೋಡಿಯನ್ನು ಐಪಿಎಲ್‌ನಿಂದ ನಿಷೇಧಿಸುವಂತೆ ಕೆ.ಎಲ್.ರಾಹುಲ್ ಕೇಳಿದ್ದಾರೆ.'

ಆರ್‌ಸಿಬಿ ಮತ್ತು ಕಿಂಗ್ ಇಲೆವೆನ್ ಪಂಜಾಬ್ ನಡುವೆ ಗುರುವಾರ ಹಣಾಹಣಿ ನಡೆಯಲಿರುವ ಬೆನ್ನಲ್ಲೇ ಈ ಸುದ್ದಿ ಟ್ರೆಂಡ್ ಸಾಲಿಗೆ ಸೇರ್ಪಡೆಯಾಗಿದೆ. ಕರ್ನಾಟಕದ ಹುಡುಗ ರಾಹುಲ್, ಬೆಂಗಳೂರು ತಂಡದ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ನಿಷೇಧಿಸುವಂತೆ ಕೇಳಿರುವುದು ಯಾಕೆ?

2011ರಿಂದ ಆರ್‌ಸಿಬಿಯಲ್ಲಿ ಜೊತೆಯಾದ ವಿರಾಟ್–ಎಬಿಡಿ ಜೋಡಿ ಇತ್ತೀಚೆಗಷ್ಟೇ ಶತಕದ ಜೊತೆಯಾಟದೊಂದಿಗೆ ಐಪಿಎಲ್‌ನಲ್ಲಿ ಹೊಸ ದಾಖಲೆಯನ್ನೂ ಸೃಷ್ಟಿಸಿದೆ. ಹತ್ತನೇ ಬಾರಿ ಈ ಜೋಡಿ 100ಕ್ಕೂ ಹೆಚ್ಚು ರನ್‌ಗಳ ಜೊತೆಯಾಟ ನಡೆಸಿದೆ.

ಅಬ್ಬರಿಸುತ್ತಿರುವ ಈ ಜೋಡಿಯನ್ನು ಐಪಿಎಲ್‌ನಿಂದ ಬ್ಯಾನ್ ಮಾಡುವಂತೆ ಮಂಗಳವಾರ ಇನ್‌ಸ್ಟಾಗ್ರಾಮ್‌ನ ಸಂವಾದದಲ್ಲಿ ರಾಹುಲ್ ತಮಾಷೆಯ ಒತ್ತಾಯವನ್ನು ಮುಂದಿಟ್ಟಿದ್ದಾರೆ.

ಟಿ20/ಐಪಿಎಲ್ ಕ್ರಿಕೆಟ್‌ನಲ್ಲಿ ಬದಲಿಸಲು ಇಚ್ಛಿಸುವ ನಿಯಮಗಳ ಬಗ್ಗೆ ಆರ್‌ಸಿಬಿ ನಾಯಕ ಕೊಹ್ಲಿ ಕೇಳಿದಾಗ, 'ಬಹುಶಃ ಐಪಿಎಲ್‌ಗೆ ನೀವು ಮತ್ತು ಎಬಿಡಿ ಅವರನ್ನು ವರ್ಷಗಳ ವರೆಗೂ ನಿಷೇಧಿಸುವಂತೆ ಕೇಳುತ್ತೇನೆ. ನೀವು ಒಂದಷ್ಟು ರನ್‌ಗಳನ್ನು ಕಲೆ ಹಾಕಿದ ಬಳಿಕ, ಜನರು ಸಾಕು ಮಾಡಿ ಎನ್ನಬೇಕಾಗುತ್ತದೆ. ನೀವು 5000 ರನ್ ಪೂರೈಸುತ್ತಿದ್ದಂತೆ, ಅಷ್ಟು ಸಾಕು. ಈಗ ನೀವಿಬ್ಬರೂ ಬೇರೆಯವರಿಗೂ ಕೆಲಸ ಮಾಡಲು ಅವಕಾಶ ಕೊಡಬೇಕು' ಎಂದು ರಾಹುಲ್ ಕಚಗುಳಿ ಇಟ್ಟಿದ್ದಾರೆ.

ಶನಿವಾರ ಪಂಜಾಬ್ ತಂಡ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಮತ್ತೊಂದು ಸೋಲು ಕಂಡಿದೆ. 165 ರನ್ ಗುರಿ ಬೆನ್ನತ್ತಿದ ಪಂಜಾಬ್‌ನ ರಾಹುಲ್ ಮತ್ತು ಮಯಾಂಕ್ ಉತ್ತಮ ಜೊತೆಯಾಟದಿಂದ ಗೆಲುವಿನ ಸಮೀಪಕ್ಕೆ ತಂದರು. ಆದರೆ, ದಿನೇಶ್ ಕಾರ್ತಿಕ್ ಪಾಳಯದ ಬೌಲರ್‌ಗಳ ಶ್ರಮದಿಂದಾಗಿ ಎರಡು ರನ್‌ಗಳಿಂದ ಪಂಜಾಬ್ ಸೋಲು ಕಾಣಬೇಕಾಯಿತು.

ಇಂದು ಆರ್‌ಸಿಬಿ ಎದುರಿನ ಪಂದ್ಯದಲ್ಲಿ ರಾಹುಲ್ ಪಡೆಗೆ ಗೆಲುವು ಅತ್ಯಗತ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.