ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ನೆಗೆಟಿವ್‌: ಅಭ್ಯಾಸಕ್ಕೆ ಮರಳಿದ ಕೆಕೆಆರ್ ಬ್ಯಾಟ್ಸ್‌ಮನ್ ನಿತೀಶ್‌ ರಾಣಾ

Last Updated 3 ಏಪ್ರಿಲ್ 2021, 12:50 IST
ಅಕ್ಷರ ಗಾತ್ರ

ಮುಂಬೈ: ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡದ ಆರಂಭಿಕ ಆಟಗಾರ ನಿತೀಶ್‌ ರಾಣಾ ಅವರು ಕೋವಿಡ್‌ ನೆಗೆಟಿವ್‌ ದೃಢಪಟ್ಟ ಬಳಿಕ ಶನಿವಾರ ಅಭ್ಯಾಸಕ್ಕೆ ಮರಳಿದ್ದಾರೆ.

ಮಾರ್ಚ್‌ 22ರಂದು ಮುಂಬೈಗೆ ಬಂದಿಳಿದ ಅವರು 12 ದಿನಗಳ ಕ್ವಾರಂಟೈನ್‌ಗೆ ಒಳಪಟ್ಟಿದ್ದರು. ಬಿಸಿಸಿಐ ಹೊರಡಿಸಿರುವ ಮಾರ್ಗಸೂಚಿ ಅನ್ವಯ 11ರಿಂದ 12 ದಿನಗಳಲ್ಲಿ ಎರಡು ಬಾರಿ ಕೋವಿಡ್‌ ನೆಗೆಟಿವ್‌ ಬಂದ ಬಳಿಕ ಆಟಗಾರರು ಅಭ್ಯಾಸದಲ್ಲಿ ನಡೆಸಬಹುದಾಗಿದೆ.

‘ನನ್ನ ಆರೋಗ್ಯ ಉತ್ತಮವಾಗಿದ್ದು, ಕೆಕೆಆರ್‌ ತಂಡ ಸೇರಿಕೊಂಡಿದ್ದೇನೆ. ಮೊದಲ ದಿನ ಸ್ವಲ್ಪ ಸಮಯ ಬ್ಯಾಟಿಂಗ್‌ ಅಭ್ಯಾಸ ಮಾಡಿದ್ದೇನೆ. ತಂಡದ ಸಹ ಆಟಗಾರರೊಂದಿಗೆ ಸೇರಿರುವುದಕ್ಕೆ ಸಂತೋಷವಾಗಿದೆ’ ಎಂದು ನಿತೀಶ್‌ ರಾಣಾ ಹೇಳಿಕೊಂಡಿದ್ದಾರೆ.

‘ಎಲ್ಲರೂ ದಯವಿಟ್ಟು ಕೋವಿಡ್‌ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಿ. ವೈರಸ್‌ ಅನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ನಿಮ್ಮ ಮತ್ತು ನಿಮ್ಮ ಕುಟುಂಬವನ್ನು ನೋಡಿಕೊಳ್ಳಿ. ಸುರಕ್ಷಿತವಾಗಿರಿ’ ಎಂದು ನಿತೀಶ್ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ಕಳೆದ ವರ್ಷ ಯುಎಇಯಲ್ಲಿ ನಡೆದ ಐಪಿಎಲ್‌ ಅವೃತ್ತಿಯಲ್ಲಿ 14 ಪಂದ್ಯಗಳನ್ನು ಆಡಿದ್ದ ರಾಣಾ ಅವರು 352 ರನ್‌ ಗಳಿಸಿದ್ದರು.

ಇತ್ತೀಚೆಗೆ ಮುಕ್ತಾಯಗೊಂಡ ವಿಜಯ್‌ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್‌ ಟೂರ್ನಿಯ ಏಳು ಪಂದ್ಯಗಳಲ್ಲಿ ಆಡಿದ್ದ ರಾಣಾ 398 ರನ್ ಗಳಿಸಿ 66.33 ಸರಾಸರಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.

ಏಪ್ರಿಲ್ 11ರಂದು ಚೆನ್ನೈನಲ್ಲಿ ನಡೆಯಲಿರುವ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧದ ಮೊದಲ ಪಂದ್ಯದಲ್ಲಿ ಕೆಕೆಆರ್‌ ತಂಡ ಸೆಣಸಾಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT