ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಕಳಪೆ ಫಾರ್ಮ್ನಿಂದ ಬಳಲುತ್ತಿರುವ ಮುಂಬೈ ಇಂಡಿಯನ್ಸ್ ತಂಡದ ಯುವ ಎಡಗೈ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಇಶಾನ್ ಕಿಶನ್ ಅವರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಧೈರ್ಯ ತುಂಬಿದ್ದಾರೆ.

ಭಾನುವಾರ ನಡೆದ ಪಂದ್ಯದಲ್ಲೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಕಿಶನ್ 9 ರನ್ ಗಳಿಸಿ ಔಟ್ ಆದರು. ಅಲ್ಲದೆ ತೀವ್ರ ಹತಾಶರಾಗಿದ್ದರು.

ಇದನ್ನೂ ಓದಿ:IPL 2021: ಇವರು ಐಪಿಎಲ್ 'ಹ್ಯಾಟ್ರಿಕ್' ವಿಕೆಟ್ ಸರದಾರರು

ಮುಂಬೈ ಸತತವಾಗಿ ವಿಕೆಟ್ಗಳನ್ನು ಕಳೆದುಕೊಂಡಾಗ ಡ್ರೆಸಿಂಗ್ ಕೊಠಡಿಗೆ ಹತ್ತುವ ಮೆಟ್ಟಿಲುಗಳ ಬಳಿ ಕುಳಿತುಕೊಂಡಿದ್ದ ಇಶಾನ್ ಕಿಶನ್, ಭಾವುಕರಾಗಿ ಕಂಡುಬಂದಿದ್ದರು.

ಪಂದ್ಯದ ಬಳಿಕ ಇಶಾನ್ ಬಳಿ ತೆರಳಿದ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ, ಹೆಗಲ ಮೇಲೆ ಕೈ ಇಟ್ಟು ಧೈರ್ಯ ತುಂಬಿದರು.

ಹಿರಿಯ ಸೋದರನಂತೆ ವಿರಾಟ್, ಯುವ ಆಟಗಾರನ ಬೆನ್ನು ತಟ್ಟಿ ಅಮೂಲ್ಯವಾದ ಸಲಹೆಗಳನ್ನು ನೀಡುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.

ಇಲ್ಲಿ ಗಮನಾರ್ಹ ಅಂಶವೆಂದರೆ ಮುಂಬರುವ ಟ್ವೆಂಟಿ-20 ವಿಶ್ವಕಪ್ನಲ್ಲಿ ಭಾರತ ತಂಡದ ಸದಸ್ಯರೂ ಆಗಿರುವ ಇಶಾನ್ ಕಿಶನ್, ಲಯ ಕಂಡುಕೊಳ್ಳುವುದು ಟೀಮ್ ಇಂಡಿಯಾ ಪಾಲಿಗೂ ಅತಿ ಮಹತ್ವದೆನಿಸಿದೆ.

ಅತ್ತ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ, ಕೂಡ ಇಶಾನ್ ಕಿಶನ್ ಅವರಿಗೆ ಬೆಂಬಲವನ್ನು ಸೂಚಿಸಿದ್ದಾರೆ. ಅಲ್ಲದೆ ಯುವ ಆಟಗಾರನ ಮೇಲೆ ಒತ್ತಡ ಹೇರಲು ಬಯಸುತ್ತಿಲ್ಲ ಎಂದು ಹೇಳಿದ್ದಾರೆ.

ಏತನ್ಮಧ್ಯೆ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಯುವ ಆಟಗಾರರಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಎಂದಿನಂತೆ ಟಿಪ್ಸ್ ನೀಡುವುದು ಕಂಡುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.