ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮ್ಮನ್ನು ಔಟ್ ಮಾಡಿದ ಯುವ ಸ್ಪಿನ್ನರ್ ಬೆನ್ನು ತಟ್ಟಿದ ಕೊಹ್ಲಿ

ಅಕ್ಷರ ಗಾತ್ರ

ಅಹಮದಬಾದ್: ಐಪಿಎಲ್‌ನಲ್ಲಿ ತಮ್ಮನ್ನು ಔಟ್ ಮಾಡುವ ಮೂಲಕ ಚೊಚ್ಚಲ ವಿಕೆಟ್ ಪಡೆದಿರುವ ಎಡಗೈ ಸ್ಪಿನ್ನರ್ ಹರ್‌ಪ್ರೀತ್ ಬ್ರಾರ್ ಅವರನ್ನು ಸ್ವತಃ ವಿರಾಟ್ ಕೊಹ್ಲಿ ಅವರೇ ಬೆನ್ನು ತಟ್ಟುವ ಮೂಲಕ ಅಭಿನಂದಿಸಿದ್ದಾರೆ.

ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮಿಂಚಿದ್ದ ಹರ್‌ಪ್ರೀತ್ ಬ್ರಾರ್ ಅಮೋಘ ಪ್ರದರ್ಶನದ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 34 ರನ್ ಅಂತರದ ಭರ್ಜರಿ ಗೆಲುವು ಬಾರಿಸಿತ್ತು.

ಹರ್‌ಪ್ರೀತ್ ಬ್ರಾರ್ ಎಸೆತ ಆ ಏಳು ಎಸೆತಗಳು ಪಂದ್ಯವು ಪಂಜಾಬ್ ಕಡೆಗೆ ವಾಲುವಂತೆ ಮಾಡಿತ್ತು. ತಮ್ಮ ಮೂರನೇ ಓವರ್‌ನ ಮೊದಲ ಎಸೆತದಲ್ಲಿ ವಿರಾಟ್ ಕೊಹ್ಲಿ ಕ್ಲೀನ್ ಬೌಲ್ಡ್ ಮಾಡಿದ ಹರ್‌ಪ್ರೀತ್, ಐಪಿಎಲ್‌ನಲ್ಲಿ ಚೊಚ್ಚಲ ವಿಕೆಟ್ ಸಾಧನೆ ಮಾಡಿದರು.

ಬಳಿಕದ ಎಸೆತದಲ್ಲಿ ಇನ್ ಫಾರ್ಮ್ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಕ್ಲಿನ್ ಬೌಲ್ಡ್ ಮಾಡಿದರು. ಪರಿಣಾಮ ಖಾತೆ ತೆರೆಯಲಾಗದೇ ಪೆವಿಲಿಯನ್‌ಗೆ ಮರಳಿದರು. ಇಲ್ಲಿಗೂ ಹರ್‌ಪ್ರೀತ್ ಪರಾಕ್ರಮ ನಿಲ್ಲಲಿಲ್ಲ. ನಾಲ್ಕನೇ ಓವರ್‌ನ ಮೊದಲ ಎಸೆತದಲ್ಲಿ ಎಬಿ ಡಿ ವಿಲಿಯರ್ಸ್ (3) ವಿಕೆಟ್ ಪಡೆಯುವ ಮೂಲಕ ಆರ್‌ಸಿಬಿ ಕೈಯಿಂದ ಪಂದ್ಯವನ್ನುಕಸಿದುಕೊಂಡರು.

ಈ ಮೂಲಕ ಐಪಿಎಲ್‌ನ ಮೊದಲ ಮೂರು ವಿಕೆಟ್‌ಗಳನ್ನು ಸ್ಮರಣೀಯವಾಗಿಸಿದರು. ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ ಕೇವಲ 19 ರನ್ ಮಾತ್ರ ನೀಡಿದ್ದ ಹರ್‌ಪ್ರೀತ್ ಮೂರು ವಿಕೆಟ್ ಕಿತ್ತು ಮಿಂಚಿದರು. ಇದರಲ್ಲಿ ಒಂದು ಮೇಡನ್ ಓವರ್ ಸೇರಿತ್ತು.

ಪಂದ್ಯದ ಬಳಿಕ ಬ್ರಾರ್ ಕೈ ಕುಲುಕಿದ ವಿರಾಟ್, ಬೆನ್ನು ತಟ್ಟುತ್ತಾ ಯುವ ಆಟಗಾರನ ಪ್ರದರ್ಶನವನ್ನು ಶ್ಲಾಘಿಸಿದರು. ಅಲ್ಲದೆ ಇಬ್ಬರು ನಗೆ ಚಟಾಕಿ ಹಾರಿಸಿದರು.

ಈ ಮೊದಲು ಬ್ಯಾಟಿಂಗ್‌ನಲ್ಲೂ ಮಿಂಚಿದ್ದ ಹರ್‌ಪ್ರೀತ್, ನಾಯಕ ಕೆ.ಎಲ್. ರಾಹುಲ್ ಜೊತೆಗೆ ಮುರಿಯದ ಆರನೇ ವಿಕೆಟ್‌ಗೆ 61 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾಗಿ ತಂಡವು 179 ರನ್‌ಗಳ ಬೃಹತ್ ಮೊತ್ತ ಪೇರಿಸಲು ನೆರವಾಗಿದ್ದರು. 17 ಎಸೆತಗಳನ್ನು ಎದುರಿಸಿದ್ದ ಬ್ರಾರ್ ಒಂದು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 25 ರನ್ ಗಳಿಸಿ ಅಜೇಯರಾಗುಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT