ನವಿ ಮುಂಬೈ: ಫಫ್ ಡುಪ್ಲೆಸಿ ಅಮೋಘ ಬ್ಯಾಟಿಂಗ್ ಮತ್ತು ಜೋಶ್ ಹ್ಯಾಜಲ್ವುಡ್ ಚಾಣಾಕ್ಷ ಬೌಲಿಂಗ್ ಬಲದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಜಯಭೇರಿ ಬಾರಿಸಿತು.

ಮಂಗಳವಾರ ಡಿ.ವೈ. ಪಾಟೀಲ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿಬೆಂಗಳೂರು ತಂಡವು 18 ರನ್ಗಳಿಂದ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಜಯಿಸಿತು. ಟಾಸ್ ಗೆದ್ದ ಲಖನೌ ತಂಡದ ನಾಯಕ ಕೆ.ಎಲ್.ರಾಹುಲ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಮೊದಲ ಓವರ್ನಲ್ಲಿಯೇ ಏಳು ರನ್ಗಳಿಗೆ ಎರಡು ವಿಕೆಟ್ ಕಳೆದುಕೊಂಡ ಬೆಂಗಳೂರು ಸಂಕಷ್ಟಕ್ಕೊಳಗಾಯಿತು.

ನಾಯಕನಿಗೆ ತಕ್ಕ ಆಟವಾಡಿದ ಡುಪ್ಲೆಸಿ (96; 64ಎಸೆತ, 4X11, 6X2) ನಾಲ್ಕು ರನ್ಗಳ ಅಂತರದಿಂದ ಶತಕ ತಪ್ಪಿಸಿಕೊಂಡರು. ಆದರೆ, ತಂಡವು 20 ಓವರ್ಗಳಲ್ಲಿ 6 ವಿಕೆಟ್ಗಳಿಗೆ 181 ರನ್ ಗಳಿಸಲು ಕಾರಣರಾದರು. ಗುರಿ ಬೆನ್ನಟ್ಟಿದ ಲಖನೌ ತಂಡವು 20 ಓವರ್ಗಳಲ್ಲಿ 8 ವಿಕೆಟ್ಗಳಿಗೆ 163 ರನ್ ಗಳಿಸಲಷ್ಟೇ ಶಕ್ತವಾಯಿತು. ಜೋಶ್ (25ಕ್ಕೆ4) ಮತ್ತು ಹರ್ಷಲ್ ಪಟೇಲ್ (47ಕ್ಕೆ2) ರಾಹುಲ್ ಬಳಗವನ್ನು ಕಟ್ಟಿಹಾಕಿದರು. ಫಫ್ ಬಳಗಕ್ಕೆ ಇದು ಐದನೇ ಜಯ.

ವಿರಾಟ್ ಡಕ್:ಮೊದಲ ಓವರ್ನಲ್ಲಿಯೇ ಮಧ್ಯಮವೇಗಿ ದುಷ್ಮಂತ ಚಮೀರಾ ಮೇಲುಗೈ ಸಾಧಿಸಿದರು. ಐದನೇ ಎಸೆತದಲ್ಲಿ ಅನುಜ್ ರಾವತ್ ಬೌಂಡರಿಗಟ್ಟಲು ಪ್ರಯತ್ನಿಸಿದ ಚೆಂಡನ್ನು ಅದ್ಭುತವಾಗಿ ಕ್ಯಾಚ್ ಮಾಡಿದ ರಾಹುಲ್ ಸಂಭ್ರಮಿಸಿದರು. ನಂತರದ ಎಸೆತದಲ್ಲಿ ಬ್ಯಾಕ್ವರ್ಡ್ ಪಾಯಿಂಟ್ನಲ್ಲಿದ್ದ ಫೀಲ್ಡರ್ ದೀಪಕ್ ಹೂಡಾಗೆ ಸುಲಭದ ಕ್ಯಾಚ್ ಕೊಟ್ಟ ವಿರಾಟ್ ಕೊಹ್ಲಿ ಸೊನ್ನೆ ಸುತ್ತಿದರು.

ಫಫ್ –ಶಾಬಾಜ್ ಜೊತೆಯಾಟ: ಫಫ್ ಹೋರಾಟಕ್ಕೆ ತಕ್ಕ ಜೊತೆ ನೀಡಿದವರು ಶಾಬಾಜ್ ಅಹಮದ್ (26; 22ಎ) ಒಬ್ಬರೇ. ಇವರಿಬ್ಬರೂ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 70 ರನ್ ಸೇರಿಸಿದರು.16ನೇ ಓವರ್ನಲ್ಲಿ ರಾಹುಲ್ ಚುರುಕಿನ ಫೀಲ್ಡಿಂಗ್ ಮತ್ತು ಜೇಸನ್ ಹೋಲ್ಡರ್ ಕೈಚಳಕದ ಫಲವಾಗಿ ಶಾಬಾಜ್ ರನ್ಔಟ್ ಆದರು. ಜೊತೆಯಾಟ ಮುರಿಯಿತು.ಆದರೆ ಫಫ್ ಶತಕದತ್ತ ದಾಪುಗಾಲು ಹಾಕಿದ್ದರು. ಕೊನೆಯ ಓವರ್ನವರೆಗೂ ತಂಡದ ಮೊತ್ತ ಹೆಚ್ಚಿಸಲು ಆದ್ಯತೆ ನೀಡಿದರು. ಆದರೆ ಕೊನೆಯ ಓವರ್ನಲ್ಲಿ ಔಟಾದರು.

ಕೃಣಾಲ್ ಹೋರಾಟ: ಲಖನೌ ತಂಡದಲ್ಲಿ ಕ್ವಿಂಟನ್ ಡಿಕಾಕ್, ಮನೀಷ್ ಪಾಂಡೆ ಒಂದಂಕಿ ಮೊತ್ತ ಗಳಿಸಿದ್ದು ತಂಡದ ಹಿನ್ನಡೆಗೆ ಕಾರಣವಾಯಿತು. ರಾಹುಲ್ (30 ರನ್), ಕೃಣಾಲ್ ಪಾಂಡ್ಯ (42; 28ಎ) ಹಾಗೂ ಮಾರ್ಕಸ್ ಸ್ಟೊಯಿನಿಸ್ ಅವರ ಹೋರಾಟ ಸಾಕಾಗಲಿಲ್ಲ. ಉತ್ತಮ ಬೌಲಿಂಗ್ ಮಾಡಿದ ಹ್ಯಾಜಲ್ವುಡ್ ಲಖನೌಗೆ ಸಿಂಹಸ್ವಪ್ನವಾದರು.

Koo App
Another game 🏏 Another win 💯 Onwards & Upwards 💪 #RoyalChallengersBangalore
View attached media content
- Virat Kohli (@virat.kohli) 19 Apr 2022

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.