ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2023 | ರಿಷಭ್ ಪಂತ್ ಬದಲು ಅಭಿಷೇಕ್‌ ಪೊರೆಲ್‌ಗೆ ಅವಕಾಶ ನೀಡಿದ ಡೆಲ್ಲಿ

Last Updated 31 ಮಾರ್ಚ್ 2023, 13:07 IST
ಅಕ್ಷರ ಗಾತ್ರ

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್‌ )16ನೇ ಆವೃತ್ತಿ ಇಂದಿನಿಂದ ಆರಂಭವಾಗಲಿದ್ದು, ಎಲ್ಲಾ ತಂಡಗಳು ಚುಟುಕು ಕ್ರಿಕೆಟ್‌ ಕದನಕ್ಕೆ ಸಜ್ಜಾಗಿವೆ.

ಇತ್ತೀಚೆಗೆ ಕಾರು ಅಪಘಾತದಲ್ಲಿ ಗಾಯಗೊಂಡಿರುವ ರಿಷಭ್ ಪಂತ್‌ ಅವರು ಈ ಬಾರಿಯ ಐಪಿಎಲ್‌ನಿಂದ ಹೊರಗುಳಿದಿದ್ದಾರೆ. ಇದೀಗ ಅವರ ಬದಲು ಡೆಲ್ಲಿ ಕ್ಯಾಪಿಟಲ್ಸ್ ಪ್ರಾಂಚೈಸ್ ಅಭಿಷೇಕ್‌ ಪೊರೆಲ್‌ರನ್ನು ತಂಡಕ್ಕೆ ಸೇರಿಸಿಕೊಂಡಿದೆ.

20 ವರ್ಷದ ಯುವ ಆಟಗಾರ ಅಭಿಷೇಕ್ ಪೊರೆಲ್​ ಪಶ್ಚಿಮ ಬಂಗಾಳದ ವಿಕೆಟ್ ಕೀಪರ್, ಬ್ಯಾಟರ್‌ ಆಗಿದ್ದಾರೆ.

ಇದೀಗ ಚೊಚ್ಚಲ ಬಾರಿಗೆ ಐಪಿಎಲ್​ ಆಡುವ ಅವಕಾಶ ಪಡೆದಿರುವ ಅಭಿಷೇಕ್, ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವರೆ ಎಂಬುದನ್ನು ಕಾದುನೋಡುಬೇಕಿದೆ. ಏಕೆಂದರೆ ಡೆಲ್ಲಿ ತಂಡದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಸರ್ಫರಾಝ್ ಖಾನ್ ಕೂಡ ಇದ್ದು, ಅವರೇ ಕೀಪಿಂಗ್ ಜವಾಬ್ದಾರಿ ನಿರ್ವಹಿಸಿದರೆ ಅಭಿಷೇಕ್ ಪೊರೆಲ್ ಕೆಲ ಪಂದ್ಯಗಳವರೆಗೆ ಬೆಂಚ್ ಕಾಯಬೇಕಾಗುತ್ತದೆ.

ಡೆಲ್ಲಿ ತಂಡವು ತನ್ನ ಮೊದಲ ಪಂದ್ಯವನ್ನು ಏಪ್ರಿಲ್ 1ರಂದು ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಆಡಲಿದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡ ಇಂತಿದೆ​: ಡೇವಿಡ್ ವಾರ್ನರ್ (ನಾಯಕ), ಮನೀಶ್ ಪಾಂಡೆ, ಪೃಥ್ವಿ ಶಾ, ರಿಪಾಲ್ ಪಟೇಲ್, ರೋವ್‌ಮನ್ ಪೊವೆಲ್, ಸರ್ಫರಾಜ್ ಖಾನ್, ಯಶ್ ಧುಲ್, ಮಿಚೆಲ್ ಮಾರ್ಷ್, ಲಲಿತ್ ಯಾದವ್, ಅಕ್ಷರ್ ಪಟೇಲ್, ಅನ್ರಿಕ್ ನೋಕಿಯಾ, ಚೇತನ್ ಸಕರಿಯಾ, ಕಮಲೇಶ್ ನಾಗರಕೋಟಿ, ಖಲೀಲ್ ಅಹ್ಮದ್, ಲುಂಗಿ ಎನ್‌ಗಿಡಿ, ಮುಸ್ತಫಿಜುರ್‌ ರೆಹಮಾನ್, ಅಮನ್ ಖಾನ್, ಕುಲದೀಪ್ ಯಾದವ್, ವಿಕಿ ಓಸ್ಟ್ವಾಲ್, ರಿಲೀ ರೊಸೊ, ಮುಖೇಶ್ ಕುಮಾರ್, ಇಶಾಂತ್ ಶರ್ಮಾ, ಫಿಲ್ ಸಾಲ್ಟ್, ಅಭಿಷೇಕ್ ಪೊರೆಲ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT