ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL–2023 KKR vs PBKS| ಟಾಸ್‌ ಗೆದ್ದ ಕೆಕೆಆರ್‌ ತಂಡ ಫೀಲ್ಡಿಂಗ್ ಆಯ್ಕೆ 

Last Updated 1 ಏಪ್ರಿಲ್ 2023, 9:47 IST
ಅಕ್ಷರ ಗಾತ್ರ

ಮೊಹಾಲಿ: ಐಪಿಎಲ್‌ 16ನೇ ಆವೃತ್ತಿಯ ಲೀಗ್‌ ಹಂತದ ಎರಡನೇ ಪಂದ್ಯದಲ್ಲಿ ಕೋಲ್ಕತ್ತ ನೈಟ್‌ ರೈಡರ್ಸ್‌ (ಕೆಕೆಆರ್‌) ಹಾಗೂ ಪಂಜಾಬ್‌ ಕಿಂಗ್ಸ್‌ ಮುಖಾಮುಖಿಯಾಗಿವೆ.

ಮೊಹಾಲಿಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದಿರುವ ಕೆಕೆಆರ್‌ ತಂಡ ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿದೆ.

ಈ ಬಾರಿ ಎರಡೂ ತಂಡಗಳು ನೂತನ ನಾಯಕರ ನೇತೃತ್ವದಲ್ಲಿ ಆಡುತ್ತಿವೆ. ಪಂಜಾಬ್‌ ತಂಡವನ್ನು ಶಿಖರ್‌ ಧವನ್‌ ಹಾಗೂ ಕೋಲ್ಕತ್ತ ತಂಡವನ್ನು ನಿತೀಶ್‌ ರಾಣಾ ಮುನ್ನಡೆಸುತ್ತಿದ್ದಾರೆ. ಶ್ರೇಯಸ್‌ ಅಯ್ಯರ್‌ ಗಾಯಗೊಂಡಿರುವ ಕಾರಣ ನಿತೀಶ್‌ಗೆ ನಾಯಕತ್ವದ ಹೊಣೆ ದೊರೆತಿದೆ.

ಎರಡೂ ತಂಡಗಳೂ ಗಾಯದ ಸಮಸ್ಯೆ ಮತ್ತು ಪ್ರಮುಖ ವಿದೇಶಿ ಆಟಗಾರರ ಅಲಭ್ಯತೆಯಿಂದ ಹಿನ್ನಡೆ ಅನುಭವಿಸುತ್ತಿವೆ. ಈಚೆಗಿನ ಕೆಲ ಟೂರ್ನಿಗಳಲ್ಲಿ ಈ ತಂಡಗಳು ಸ್ಥಿರತೆ ಕಾಪಾಡಿಕೊಳ್ಳುವಲ್ಲಿ ವಿಫಲವಾಗಿದ್ದವು. ಕಳೆದ ಆವೃತ್ತಿಯಲ್ಲಿ ಪಂಜಾಬ್‌ ಆರನೇ ಸ್ಥಾನ ಪಡೆದುಕೊಂಡಿದ್ದರೆ, ಕೆಕೆಆರ್‌ ಏಳನೇ ಸ್ಥಾನ ಗಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT