ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024 LSG vs CSK: ಲಖನೌಗೆ 177 ರನ್ ಗುರಿ ನೀಡಿದ ಚೆನ್ನೈ

Published 19 ಏಪ್ರಿಲ್ 2024, 14:09 IST
Last Updated 19 ಏಪ್ರಿಲ್ 2024, 14:09 IST
ಅಕ್ಷರ ಗಾತ್ರ

ಲಖನೌ: ಇಲ್ಲಿ ನಡೆಯುತ್ತಿರುವ ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 176 ರನ್‌ಗಳನ್ನು ಕಲೆ ಹಾಕಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಚೆನ್ನೈಗೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ರಚಿನ್ ರವೀಂದ್ರ ಶೂಲ್ಯಕ್ಕೆ ನಿರ್ಗಮಿಸಿದರು. ನಂತರ, ಬಂದ ನಾಯಕ ಋತುರಾಜ್ ಗಾಯಕ್ವಾಡ್ ಸಹ 17 ರನ್‌ಗೆ ಪೆವಿಲಿಯನ್ ಸೇರಿದರು.

ಮತ್ತೊಂದೆಡೆ, ಗಟ್ಟಿಯಾಗಿ ನಿಂತಿದ್ದ ಅಜಿಂಕ್ಯ ರಹಾನೆ 24 ಎಸೆತಗಳಲ್ಲಿ 36 ರನ್ ಸಿಡಿಸಿದರು. ಇತ್ತ, ರವೀಂದ್ರ ಜಡೇಜ 40 ಎಸೆತಗಳಲ್ಲಿ 57 ರನ್ ಸಿಡಿಸಿ ತಂಡ ಉತ್ತಮ ಮೊತ್ತ ಪೇರಿಸಲು ನೆರವಾದರು.

ಒಂದು ಹಂತದಲ್ಲಿ ತಂಡದ ಮೊತ್ತ 150ರ ಆಸುಪಾಸಿಗೆ ನಿಲ್ಲುವ ಸಾಧ್ಯತೆ ಗೋಚರಿಸಿತ್ತು. ಆದರೆ, ಅಂತ್ಯದಲ್ಲಿ ಅಬ್ಬರಿಸಿದ ಮೋಯಿನ್ ಅಲಿ 20 ಎಸೆತಗಳಲ್ಲಿ 30 ಮತ್ತು ಧೋನಿ 9 ಎಸೆತಗಳಲ್ಲಿ 28 ರನ್‌ ಗಳಿಸುವ ಮೂಲಕ ಉಪಯುಕ್ತ ಕಾಣಿಕೆ ನೀಡಿದರು.

ಲಖನೌ ಪರ ಕೃಣಾಲ್ ಪಾಂಡ್ಯ 2 ವಿಕೆಟ್, ಮೊಹ್ಸಿನ್ ಖಾನ್, ಯಶ್ ಠಾಕೂರ್, ರವಿ ಬಿಷ್ಣೋಯಿ, ಸ್ಟೋಯಿನಿಸ್ ತಲಾ 1 ವಿಕೆಟ್ ಪಡೆದರು.

ಧೋನಿ ಆಟ

ಹಳದಿ ಬಣ್ಣದ ಜರ್ಸಿ ತೊಟ್ಟು ಅದೇ ಬಣ್ಣದ ಬಾವುಟ ಹಿಡಿದಿದ್ದ  ತಮ್ಮ ಅಭಿಮಾನಿಗಳನ್ನು ಮಹಿ ನಿರಾಶೆಗೊಳಿಸಲಿಲ್ಲ. 9 ಎಸೆತಗಳನ್ನು ಎದುರಿಸಿದ ಅವರು 28 ರನ್‌ ಗಳಿಸಿದರು.  ಅದರಲ್ಲಿ ಮೂರು ಬೌಂಡರಿಗಳಿದ್ದವು.  19ನೇ ಓವರ್‌ನಲ್ಲಿ ಮೊಹಸಿನ್ ಹಾಕಿದ ಶಾರ್ಟ್‌ ಲೆಂಗ್ತ್ ಎಸೆತವನ್ನು ತಮ್ಮ ಬಲಬದಿಗೆ ಎರಡೆಜ್ಜೆ ಸರಿದ ಧೋನಿ ವಿಕೆಟ್‌ಕೀಪರ್ ರಾಹುಲ್ ತಲೆ ಮೇಲಿಂದ ಸಿಕ್ಸರ್‌ಗೆತ್ತಿದರು. ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಯಶ್ ಠಾಕೂರ್ ಎಸೆತವನ್ನೂ ಲಾಂಗ್ ಆನ್ ಗೆರೆಯಾಚೆ ದಾಟಿಸಿದರು.  ಓವರ್‌ ಕೊನೆಯ ಎರಡೂ ಎಸೆತಗಳಲ್ಲಿ ಬೌಂಡರಿ ಗಳಿಸಿ ಇನಿಂಗ್ಸ್‌ಗೆ ತೆರೆಯೆಳೆದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT