ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024 | ಹೈದರಾಬಾದ್‌ಗೆ 166 ರನ್ ಗುರಿ ನೀಡಿದ ಚೆನ್ನೈ

Published 5 ಏಪ್ರಿಲ್ 2024, 13:53 IST
Last Updated 5 ಏಪ್ರಿಲ್ 2024, 13:53 IST
ಅಕ್ಷರ ಗಾತ್ರ

ಹೈದರಾಬಾದ್: ಇಲ್ಲಿ ನಡೆಯುತ್ತಿರುವ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 165 ರನ್ ಕಲೆ ಹಾಕಿದೆ.

ಚೆನ್ನೈ ಬ್ಯಾಟರ್‌ಗಳು ಆರಂಭದಿಂದಲೇ ಹೈದರಾಬಾದ್ ಬೌಲಿಂಗ್ ದಾಳಿ ಎದುರು ರನ್ ಗಳಿಸಲು ಪರದಾಡಿದರು. ಶಿವಂ ದುಬೆ ಬಿರುಸಿನ ಬ್ಯಾಟಿಂಗ್ ಮೂಲಕ ಚೆನ್ನೈಗೆ ಹುರುಪು ತುಂಬಿದರು.

ಶಿವಂ ದುಬೆ 45(24 ಎಸೆತ, 2 ಬೌಂಡರಿ, 4 ಸಿಕ್ಸರ್), ಅಜಿಂಕ್ಯ ರಹಾನೆ 35, ರವೀಂದ್ರ ಜಡೇಜ ಅಜೇಯ 31 ರನ್ ಸಿಡಿಸಿದರು. ನಾಯಕ ಋತುರಾಜ್ ಗಾಯಕ್ವಾಡ್ 26 ರನ್ ಬಾರಿಸಿದರು. ಈ ಪಂದ್ಯದಲ್ಲೂ ನಿರಾಸೆ ಮೂಡಿಸಿದ ಆರಂಭಿಕ ಬ್ಯಾಟರ್ ರಚಿನ್ ರವೀಂದ್ರ 12 ರನ್‌ಗೆ ಔಟಾದರು.

ಹೈದರಾಬಾದ್ ಪರ ಭುವನೇಶ್ವರ್ ಕುಮಾರ್ (28/1), ನಾಯಕ ಪ್ಯಾಟ್ ಕಮಿನ್ಸ್(29/1), ಜೈದೇವ್ ಉನಾದ್ಕಟ್(29/1) ಶಿಸ್ತಿನ ಬೌಲಿಂಗ್ ದಾಳಿ ನಡೆಸಿದರು. ಶಾಬಾಸ್ ಮತ್ತು ಟ. ನಟರಾಜನ್ ತಲಾ 1 ವಿಕೆಟ್ ಪಡೆದರು.

ಯುವ ನಾಯಕ ಋತುರಾಜ್ ಗಾಯಕವಾಡ್ ನೇತೃತ್ವದ ಚೆನ್ನೈ ಪಡೆ, ಮೂರು ಪಂದ್ಯಗಳನ್ನಾಡಿದ್ದು ಎರಡರಲ್ಲಿ ಜಯಿಸಿದೆ. ಮೂರು ಪಂದ್ಯಗಳನ್ನಾಡಿ ಒಂದರಲ್ಲಷ್ಟೇ ಗೆದ್ದಿರುವ ಪ್ಯಾಟ್‌ ಕಮಿನ್ಸ್‌ ಪಡೆ, ಈ ಪಂದ್ಯ ಗೆದ್ದು ಪಾಯಿಂಟ್‌ ಪಟ್ಟಿಯಲ್ಲಿ ಮೇಲೇರುವ ಲೆಕ್ಕಾಚಾರದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT