ಶನಿವಾರ ಸುರಿದ ಮಳೆಯಿಂದಾಗಿ ಆರ್‌ಸಿಬಿ ಮತ್ತು ಕೋಲ್ಕತ್ತ ನೈಟ್ ರೈಡರ್ಸ್ ನಡುವಣ ಪಂದ್ಯವು ರದ್ದಾಗಿದ್ದರಿಂದ ಪ್ರೇಕ್ಷಕರಿಗೆ ಟಿಕೆಟ್ ಹಣವನ್ನು ಮರುಪಾವತಿಸಲಾಗುವುದು ಎಂದು ಆರ್‌ಸಿಬಿ ತಿಳಿಸಿದೆ. 'ಆನ್‌ಲೈನ್ ಮೂಲಕ ಪಡೆದ ಟಿಕೆಟ್‌ಗಳ ಮೌಲ್ಯವನ್ನು ಆಯಾ ಅಧಿಕೃತ ಖಾತೆಗಳಿಗೆ ಮರುಪಾವತಿ ಮಾಡಲಾಗುವುದು. ಹತ್ತು ದಿನಗಳ ಅವಧಿಯಲ್ಲಿ ಈ ಪ್ರಕ್ರಿಯೆ ನಡೆಯಲಿದೆ. ಮೇ 31ರೊಳಗೆ ಮರುಪಾವತಿ ಲಭಿಸದಿದ್ದರೆ ಇಮೇಲ್ refund@ticketgenie.in ಮೂಲಕ ಸಂಪರ್ಕಿಸಬೇಕು. ಇನ್ನುಳಿದ ಮುದ್ರಿತ ಟಿಕೆಟ್‌ಗಳನ್ನು ಖರೀದಿಸಿದ ಸ್ಥಾನಗಳಲ್ಲಿಯೇ ಮರಳಿಕೊಟ್ಟು ಹಣ ಪಡೆಯಬಹುದಾಗಿದೆ ಎಂದು ಆರ್‌ಸಿಬಿ ‘ಎಕ್ಸ್’ನಲ್ಲಿ ಪ್ರಕಟಿಸಿದೆ. ಹೆಚ್ಚಿನ ಮಾಹಿತಿಗೆ rcbtickets@ticketgenie.in ಇಮೇಲ್ ಮಾಡಬಹುದು ಎಂದೂ ತಿಳಿಸಿದೆ.