ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಐಪಿಎಲ್ ಹರಾಜು: ಮಾರಾಟವಾಗದ ಯೂಸುಫ್‌ಗೆ ಸೋದರ ಇರ್ಫಾನ್ ಪಠಾಣ್ ಸ್ಫೂರ್ತಿಯ ಸಂದೇಶ

Last Updated 20 ಡಿಸೆಂಬರ್ 2019, 14:12 IST
ಅಕ್ಷರ ಗಾತ್ರ

ಐಪಿಎಲ್‌ 13ನೇ ಆವೃತ್ತಿಗಾಗಿ ಕೋಲ್ಕತ್ತದಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಮಾರಾಟವಾದ ಆಟಗಾರರ ದೊಡ್ಡ ಪಟ್ಟಿಯೇ ಇದೆ.ಅಚ್ಚರಿ ಎಂಬಂತೆ ಆ ಪಟ್ಟಿಯಲ್ಲಿ ಹಲವುಸ್ಟಾರ್‌ ಆಟಗಾರರ ಹೆಸರುಗಳೂ ಸೇರಿಕೊಂಡಿವೆ.ಹಲವು ಪಂದ್ಯಗಳಲ್ಲಿ ಕೆಚ್ಚೆದೆಯ ಆಟಗಾಡಿದ್ದ ಮಾರ್ಟಿನ್‌ ಗಪ್ಟಿಲ್‌,ಟಿಮ್‌ ಸೌಥಿ,ಜೇಸನ್‌ ಹೋಲ್ಡರ್‌,ಸ್ಟುವರ್ಟ್‌ ಬಿನ್ನಿ,ಆ್ಯಡಂ ಜಂಪಾ ಅವರಂತಹವರ ಜೊತೆಗೆ ಆಲ್ರೌಂಡರ್ ಯೂಸುಫ್‌ ಪಠಾಣ್‌ ಕೂಡ ಬಿಕರಿಯಾಗದವರ ಲಿಸ್ಟ್‌ನಲ್ಲಿದ್ದಾರೆ.

ಹೀಗಾಗಿ ಯೂಸುಫ್‌ಗೆ ಸ್ಫೂರ್ತಿ ತುಂಬುವಂತಹ ಸಂದೇಶವೊಂದನ್ನು ಅವರ ಸಹೋದರ ಇರ್ಫಾನ್ ಪಠಾಣ್‌ ಟ್ವಿಟರ್‌ನಲ್ಲಿ ಹರಿಬಿಟ್ಟಿದ್ದಾರೆ.

‘ಸಣ್ಣಪುಟ್ಟ ಹಿನ್ನಡೆಗಳು ನಿನ್ನ ವೃತ್ತಿ ಬದುಕನ್ನು ಅರ್ಥೈಸಲಾರವು. ಈವರೆಗೆ ಅತ್ಯುತ್ತಮವಾಗಿಯೇ ಹೊರಹೊಮ್ಮಿರುವೆ. ನೀನು ನಿಜವಾದ ಮ್ಯಾಚ್‌ ವಿನ್ನರ್‌. ಲವ್‌ ಯೂ ಲಾಲಾ’ ಎಂದು ಬರೆದುಕೊಂಡಿದ್ದಾರೆ.

ಈ ಟ್ವೀಟ್‌ಗೆ ಸುಮಾರು 11 ಸಾವಿರಕ್ಕೂ ಹೆಚ್ಚು ಜನರು ಮೆಚ್ಚುಗೆ ಸೂಚಿಸಿದ್ದಾರೆ. ಹಲವರು ಯೂಸುಫ್‌ ಬದುಕಿನ ಸ್ಮರಣೀಯ ಪಂದ್ಯಗಳನ್ನು ಕಾಮೆಂಟ್‌ ಮಾಡಿ ಉ್ಲಲೇಖಿಸಿ, ನೆನಪಿಸಿಕೊಂಡಿದ್ದಾರೆ.

ಯೂಸುಫ್‌ ಐಪಿಎಲ್‌ನಲ್ಲಿ ಕೋಲ್ಕತ್ತ ನೈಟ್‌ರೈಡರ್ಸ್‌, ರಾಜಸ್ಥಾನ ರಾಯಲ್ಸ್‌ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ತಂಡಗಳ ಪರ ಇದುವರೆಗೆ ಒಟ್ಟು174 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. 154 ಇನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿ 3,204 ರನ್‌ ಕಲೆಹಾಕಿದ್ದಾರೆ. 42 ವಿಕೆಟ್‌ಗಳನ್ನೂ ಕಬಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT