ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL-2020 | ಆರ್‌ಸಿಬಿಗೆ ‘ಸೂಪರ್’ ಜಯ ತಂದುಕೊಟ್ಟ ಸೈನಿ

Last Updated 29 ಸೆಪ್ಟೆಂಬರ್ 2020, 9:52 IST
ಅಕ್ಷರ ಗಾತ್ರ

ದುಬೈ: ಭಾರತ ಕ್ರಿಕೆಟ್‌ತಂಡದ ನಾಯಕ ವಿರಾಟ್‌ ಕೊಹ್ಲಿ ಮತ್ತು ಉಪನಾಯಕ ರೋಹಿತ್‌ ಶರ್ಮಾ ಅವರು ಐಪಿಎಲ್‌ನಲ್ಲಿ ಮುನ್ನಡೆಸುತ್ತಿರುವ ರಾಯಲ್‌ ಚಾಲೆಂಜರ್ಸ್‌ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯವುಸೂಪರ್‌ ಓವರ್‌ನಲ್ಲಿ ಕೊನೆಗೊಂಡಿತು. ವಿರಾಟ್ ಕೊಹ್ಲಿ ಪಡೆ ಸೂಪರ್ ‌ಓವರ್‌ನಲ್ಲಿ ಗೆಲುವಿನ ನಗೆ ಬೀರಿತು.‌

ಟಾಸ್‌ ಗೆದ್ದ ಮುಂಬೈ ಇಂಡಿಯನ್ಸ್‌ ತಂಡ ಮೊದಲುಬ್ಯಾಟಿಂಗ್‌ ಮಾಡುವ ಅವಕಾಶವನ್ನು ಆರ್‌ಸಿಬಿಗೆ ಬಿಟ್ಟುಕೊಟ್ಟಿತ್ತು.ಇದನ್ನು ಚೆನ್ನಾಗಿ ಬಳಸಿಕೊಂಡ ಆರ್‌ಸಿಬಿನಿಗದಿತ 20 ಓವರ್‌ಗಳಲ್ಲಿ 3ವಿಕೆಟ್‌ ಕಳೆದುಕೊಂಡು 201 ರನ್‌ ಗಳಿಸಿತ್ತು.ಕನ್ನಡಿಗ ದೇವದತ್ತ ಪಡಿಕ್ಕಲ್ (52), ಆಸ್ಟ್ರೇಲಿಯಾದ ಅನುಭವಿ ಬ್ಯಾಟ್ಸ್‌ಮನ್‌ ಆ್ಯರನ್‌ ಫಿಂಚ್ (54) ಮತ್ತು ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್‌ಮನ್‌ ಎಬಿ ಡಿ ವಿಲಿಯರ್ಸ್ (55) ಅರ್ಧಶತಕ ಬಾರಿಸಿ ಮಿಂಚಿದರು. ಹೀಗಾಗಿ ಆರ್‌ಸಿಬಿ ಬೃಹತ್‌ ಮೊತ್ತ ಕಲೆಹಾಕಿತು.

ಈ‌ ಗುರಿ ಬೆನ್ನತ್ತಿದಮುಂಬೈಗೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕರಾದ ನಾಯಕ ರೋಹಿತ್‌ ಶರ್ಮಾ (8), ಕ್ವಿಂಟನ್‌ ಡಿ ಕಾಕ್‌ (14) ಬೇಗನೆ ವಿಕೆಟ್‌ ಒಪ್ಪಿಸಿದರು. ಬಳಿಕ ಬಂದ ಸೂರ್ಯಕುಮಾರ್ ಯಾದವ್‌ (0) ಮತ್ತು ಹಾರ್ದಿಕ್‌ ಪಾಂಡ್ಯ ಅವರೂ ಹೆಚ್ಚು ಹೊತ್ತು ನಿಲ್ಲಲಿಲ್ಲ. ಹೀಗಾಗಿ 11.2 ಓವರ್‌ಗಳಲ್ಲಿ ಮುಂಬೈ ತಂಡ ಕೇವಲ 78 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡಿತ್ತು.

ಕಿಶನ್–ಪೊಲಾರ್ಡ್‌ ಶತಕದ ಜೊತೆಯಾಟ
ಈ ವೇಳೆ ಜೊತೆಯಾದ ಕೀರನ್‌ ಪೊಲಾರ್ಡ್‌ ಮತ್ತು ಇಶಾನ್‌ ಕಿಶನ್‌ಮುಂಬೈ ಇಂಡಿಯನ್ಸ್ ತಂಡದ ಹೋರಾಟವನ್ನು‌ಕೊನೆಯ ಎಸೆತದವರೆಗೂ ಕೊಂಡೊಯ್ದರು. ಈ ಇಬ್ಬರು 5ನೇ ವಿಕೆಟ್‌ಗೆ ಕೇವಲ 51 ಎಸೆತಗಳಲ್ಲಿ 119 ರನ್‌ ಕಲೆಹಾಕಿದರು.

58 ಎಸೆತಗಳನ್ನು ಎದುರಿಸಿದ ಕಿಶನ್‌ 9 ಸಿಕ್ಸರ್‌ ಮತ್ತು 2 ಬೌಂಡರಿ ಸಹಿತ 99 ರನ್‌ ಚಚ್ಚಿದರು. ಇನ್ನೊಂದು ತುದಿಯಲ್ಲಿ ಅಬ್ಬರಿಸಿದ ಪೊಲಾರ್ಡ್‌‌ 24 ಎಸೆತಗಳಲ್ಲಿ 5 ಸಿಕ್ಸರ್‌ ಮತ್ತು 4 ಬೌಂಡರಿಯೊಂದಿಗೆ 60 ರನ್ ಬಾರಿಸಿದರು.

ಮುಂಬೈ ಗೆಲುವಿಗೆ 20ನೇ ಓವರ್‌ನಲ್ಲಿ 19 ರನ್‌ ಅಗತ್ಯವಿತ್ತು. ಕಿಶನ್‌ ಮತ್ತು ಪೊಲಾರ್ಡ್‌ ಮೊದಲ 4 ಎಸೆತಗಳಲ್ಲಿ 14ರನ್ ಗಳಿಸಿದರು. ಆದರೆ ಕಿಶನ್‌5ನೇ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದರು. ಹೀಗಾಗಿಕೊನೆಯ ಎಸೆತದಲ್ಲಿ 5 ರನ್‌ ಬೇಕಿತ್ತು. ಪೊಲಾರ್ಡ್‌ ಬೌಂಡರಿ ಬಾರಿಸಿ ಮೊತ್ತವನ್ನು ಸಮಗೊಳಿಸಿದ್ದರಿಂದಜಯದ ನಿರ್ಧಾರಕ್ಕಾಗಿಸೂಪರ್‌ ಓವರ್‌ ಮೊರೆ ಹೋಗಲಾಯಿತು. ಈ ಬಾರಿ ಸೂಪರ್‌ ಓವರ್‌ನಲ್ಲಿ ಅಂತ್ಯವಾದ ಎರಡನೇ ಪಂದ್ಯವಿದು.

4 ಓವರ್‌ ಎಸೆದು ಕೇವಲ 12 ರನ್‌ ಬಿಟ್ಟುಕೊಟ್ಟು 1 ವಿಕೆಟ್‌ ಪಡೆದ ಆರ್‌ಸಿಬಿಯ ವಾಷಿಂಗ್ಟನ್‌ ಸುಂದರ್‌ ಹೊರತುಪಡಿಸಿ ಉಳಿದೆಲ್ಲ ಬೌಲರ್‌ಗಳು ದಂಡೆನೆಗೆ ಒಳಗಾದರು. ಹೀಗಾಗಿ ಇಂದಿನ ಪಂದ್ಯದಲ್ಲಿ ಒಟ್ಟು 26 ಸಿಕ್ಸರ್‌ಗಳು ಸಿಡಿದವು.

ಹೀಗಿತ್ತು ಮುಂಬೈ ಸೂಪರ್‌ ಓವರ್‌
ಸೂಪರ್‌ ಓವರ್‌ನಲ್ಲಿಮುಂಬೈ ಪರ ಕೀರನ್‌ ಪೊಲಾರ್ಡ್‌ ಮತ್ತು ಹಾರ್ದಿಕ್‌ ಪಾಂಡ್ಯ ಬ್ಯಾಟಿಂಗ್ ಮಾಡಿದರು.ಆರ್‌ಸಿಬಿ ಪರ ಸೂಪರ್‌ ಓವರ್‌ ಎಸೆದನವದೀಪ್‌ ಶೈನಿ ಕೇವಲ 7 ರನ್‌ ಬಿಟ್ಟುಕೊಟ್ಟರು.

ಮೊದಲ ಎಸೆತ:ಪೊಲಾರ್ಡ್‌ 1 ರನ್‌
ಎರಡನೇಎಸೆತ:ಹಾರ್ದಿಕ್‌ 1 ರನ್‌
ಮೂರನೇ ಎಸೆತ:ಪೊಲಾರ್ಡ್‌ 0
ನಾಲ್ಕನೇ ಎಸೆತ:ಪೊಲಾರ್ಡ್‌ 4 ರನ್
ಐದನೇ ಎಸೆತ:ಪೊಲಾರ್ಡ್‌ ಔಟ್‌
ಆರನೇ ಎಸೆತ:1 ಬೈಸ್‌

ಹೀಗಿತ್ತು ಆರ್‌ಸಿಬಿಸೂಪರ್‌ ಓವರ್‌
8 ರನ್‌ಗಳ ಗುರಿ ಎದುರು ಆರ್‌ಸಿಬಿಪರ ಎಬಿ ಡಿ ವಿಲಿಯರ್ಸ್‌ಮತ್ತು ನಾಯಕ ವಿರಾಟ್‌ ಕೊಹ್ಲಿ ಬ್ಯಾಟ್‌ ಬೀಸಿದರು.ಜಸ್‌ಪ್ರೀತ್‌ ಬೂಮ್ರಾ ಎಸೆದ ಆರು ಎಸೆತಗಳಲ್ಲಿ ಕೊಹ್ಲಿ ಮತ್ತು ವಿಲಿಯರ್ಸ್‌9ರನ್‌ ಗಳಿಸಿದರು.

ಮೊದಲ ಎಸೆತ:ಎಬಿ ಡಿವಿಲಿಯರ್ಸ್‌ 1 ರನ್‌
ಎರಡನೇಎಸೆತ:ಕೊಹ್ಲಿ 1 ರನ್‌
ಮೂರನೇ ಎಸೆತ:ವಿಲಿಯರ್ಸ್‌ 0
ನಾಲ್ಕನೇ ಎಸೆತ:ವಿಲಿಯರ್ಸ್‌ 4 ರನ್
ಐದನೇ ಎಸೆತ:ವಿಲಿಯರ್ಸ್‌ 1 ರನ್
ಆರನೇ ಎಸೆತ:ಕೊಹ್ಲಿ 4 ರನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT