ಮಂಗಳವಾರ, ಜೂನ್ 2, 2020
27 °C

ಟಿ20 ವಿಶ್ವಕಪ್‌ನಲ್ಲಿ ಡಿವಿಲಿಯರ್ಸ್‌ ಆಡಲಿ: ಜಾಂಟಿ ರೋಡ್ಸ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಈ ವರ್ಷ ನಡೆಯಲಿರುವ ಟ್ವೆಂಟಿ–20 ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಲು ದಕ್ಷಿಣ ಆಫ್ರಿಕಾ ತಂಡವು ಎಬಿ ಡಿವಿಲಿಯರ್ಸ್‌ ಅವರನ್ನು ಮರಳಿ ಕಣಕ್ಕಿಳಿಸಬೇಕು ಹಿರಿಯ ಕ್ರಿಕೆಟಿಗ ಜಾಂಟಿ ರೋಡ್ಸ್‌ ಸಲಹೆ ನೀಡಿದ್ದಾರೆ.

2018ರ ಮೇ ತಿಂಗಳಲ್ಲಿ ಎಬಿಡಿ ಕ್ರಿಕೆಟ್‌ನ ಎಲ್ಲ ಮಾದರಿಗಳಿಂದ ನಿವೃತ್ತರಾಗಿದ್ದರು. ಹೋದ ವರ್ಷ ಏಕದಿನ ಕ್ರಿಕಟ್ ವಿಶ್ವಕಪ್‌ನಲ್ಲಿ ತಂಡಕ್ಕೆ ಮರಳುವಂತೆ ದಕ್ಷಿಣ ಆಫ್ರಿಕಾ ಮಂಡಳಿಯು ಮನವಿ ಮಾಡಿತ್ತು. ಆದರೆ, ರಾಷ್ಟ್ರೀಯ ಆಯ್ಕೆ ಸಮಿತಿಯು ಅವರನ್ನು  ಅಯ್ಕೆಗೆ ಪರಿಗಣಿಸಿರಲಿಲ್ಲ.

‘ನಾನು ಎಬಿಡಿಯ ದೊಡ್ಡ ಅಭಿಮಾನಿ. ತಂಡವು ವಿಶ್ವಕಪ್ ಜಯಿಸಬೇಕೆನ್ನುವುದಾದರೆ ಎಬಿಡಿಯನ್ನು ಮತ್ತೆ ಕರೆತರಬೇಕು. ಅಲ್ಲದೇ ಕಪ್ ಜಯಿಸಲು ತಂಡವು ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡಲೇಬೇಕು’ ಎಂದು ಫೀಲ್ಡಿಂಗ್ ದಂತಕಥೆ ಜಾಂಟಿ  ಇಎಸ್‌ಪಿನ್‌ಕ್ರಿಕ್‌ಇನ್ಫೋಗೆ ಹೇಳಿಕೆ ನೀಡಿದ್ದಾರೆ.

‘ಎಬಿಡಿಯ ಮಹಾನ್ ಆಟಗಾರ. ಅವರು ಐಪಿಎಲ್ ಮತ್ತು ಬಿಗ್‌ ಬ್ಯಾಷ್ ಲೀಗ್‌ ಟೂರ್ನಿಗಳಲ್ಲಿ ಅವರ ಆಟವು ಅಮೋಘವಾಗಿತ್ತು. ಚುಟುಕು ಮಾದರಿ ಯಲ್ಲಿ ಅವರಿನ್ನೂ ಆಡಬಲ್ಲರು’ ಎಂದು ಹೇಳಿದ್ಧಾರೆ.

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಅಕ್ಟೋಬರ್ 18ರಿಂದ ನವೆಂಬರ್‌ 15ರ ವರೆಗೆ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು