ಬೆಂಗಳೂರು: ಮಧ್ಯಪ್ರದೇಶ ಕ್ರಿಕೆಟ್ ತಂಡದಲ್ಲಿ ಶುಕ್ರವಾರ ಸಂಜೆಯ ವೇಳೆಗೆ ಮೊದಲ ಬಾರಿ ರಣಜಿ ಟ್ರೋಫಿ ಜಯಿಸುವ ಕನಸು ಸಾಕಾರಗೊಳ್ಳುವ ಭರವಸೆ ಮೂಡಿತು. 42ನೇ ಕಿರೀಟ ಧರಿಸುವ ಛಲದಲ್ಲಿರುವ ಮುಂಬೈ ಪಾಳೆಯದಲ್ಲಿ ಒತ್ತಡದ ಛಾಯೆ ಆವರಿಸಿತು.

ಯಶ್ ದುಬೆ (133; 336ಎ) ಮತ್ತು ಶುಭಂ ಶರ್ಮಾ (116; 215ಎ) ಗಳಿಸಿದ ಶತಕಗಳು ಮತ್ತು ದ್ವಿಶತಕದ ಜೊತೆಯಾಟದಿಂದಾಗಿ ಮಧ್ಯಪ್ರದೇಶ ತಂಡವು ಮುಂಬೈ ಎದುರಿನ ಫೈನಲ್ ಪಂದ್ಯದಲ್ಲಿ ಮೊದಲ ಇನಿಂಗ್ಸ್ ಮುನ್ನಡೆ ಗಳಿಸಲು ಕೇವಲ ಆರು ರನ್ಗಳು ಮಾತ್ರ ಬೇಕಿವೆ.

ಮುಂಬೈ ಗಳಿಸಿದ್ದ 374 ರನ್ಗಳಿಗೆ ಉತ್ತರವಾಗಿ ಮೂರನೇ ದಿನದಾಟದ ಮುಕ್ತಾಯಕ್ಕೆ ಮಧ್ಯಪ್ರದೇಶವು 123 ಓವರ್ಗಳಲ್ಲಿ 3 ವಿಕೆಟ್ಗಳಿಗೆ 368 ರನ್ ಗಳಿಸಿದೆ. ಅರ್ಧಶತಕ ಗಳಿಸಿರುವ ರಜತ್ ಪಾಟೀದಾರ್ (ಬ್ಯಾಟಿಂಗ್ 67) ಮತ್ತು ಆದಿತ್ಯ ಶ್ರೀವಾಸ್ತವ (ಬ್ಯಾಟಿಂಗ್ 11) ಕ್ರೀಸ್ನಲ್ಲಿದ್ದಾರೆ.

ಮಧ್ಯಪ್ರದೇಶವು ಮೊದಲ ಇನಿಂಗ್ಸ್ ಮುನ್ನಡೆ ಪಡೆಯುವುದ ಬಹುತೇಕ ಖಚಿತವಾಗಿರುವುದರಿಂದ ಉಳಿದಿರುವ ಇನ್ನೆರಡು ದಿನಗಳ ಅವಧಿಯಲ್ಲಿ ಮುಂಬೈ ತಂಡವು ಪಂದ್ಯವನ್ನು ಜಯಿಸಿದರೆ ಮಾತ್ರ ಟ್ರೋಫಿ ಕನಸು ನನಸಾಗಲಿದೆ.

ಶುಕ್ರವಾರ ಮುಂಬೈ ಬೌಲರ್ಗಳಿಗೆ ಸಿಕ್ಕ ಫಲ ಅತ್ಯಲ್ಪ. 82 ಓವರ್ಗಳನ್ನು ಬೌಲಿಂಗ್ ಮಾಡಿದ ಮುಂಬೈ ತಂಡಕ್ಕೆ ದಕ್ಕಿದ್ದು ಎರಡು ವಿಕೆಟ್ ಮಾತ್ರ. ಆದರೆ, ಶಿಸ್ತು ಮತ್ತು ಯೋಜನಾಬದ್ಧ ಆಟವಾಡಿದ ಮಧ್ಯಪ್ರದೇಶ 245 ರನ್ಗಳನ್ನು ದಿನದಾಟದಲ್ಲಿ ಗಳಿಸಿತು.

ದ್ವಿಶತಕದ ಜೊತೆಯಾಟ

ಮುಖ್ಯ ಕೋಚ್ ಚಂದ್ರಕಾಂತ್ ಪಂಡಿತ್ ಅವರ ಯೋಜನೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದ ಯಶ್ ಮತ್ತು ಶುಭಂಎರಡನೇ ವಿಕೆಟ್ ಜೊತೆಯಾಟದಲ್ಲಿ ಗಳಿಸಿದ 222 ರನ್ ಗಳಿಸಿದರು.

ಆರಂಭಿಕ ಬ್ಯಾಟರ್ ಯಶ್ 234 ಎಸೆತಗಳಲ್ಲಿ ಶತಕ ಪೂರೈಸಿದರು. ತನುಷ್ ಕೋಟ್ಯಾನ್ ಎಸೆತವನ್ನು ಬೌಂಡರಿಗೆರೆ ದಾಟಿಸುವ ಮೂಲಕ ಶತಕದ ಗಡಿ ದಾಟಿದರು. ಕೆ.ಎಲ್. ರಾಹುಲ್ ಶತಕದ ನಂತರ ತಮ್ಮ ಎರಡೂ ಕಿವಿಗಳಿಗೆ ಬೆರಳಿಟ್ಟು ಸಂಭ್ರಮ ಆಚರಿಸುವ ರೀತಿಯಲ್ಲಿಯೇ ಯಶ್ ಕೂಡ ಮಾಡಿದರು. ಜಬಲ್ಪುರದ 23 ವರ್ಷದ ಯಶ್ ಕ್ರಿಕೆಟ್ ಕಾಪಿಪುಸ್ತಕದ ಎಲ್ಲ ಹೊಡೆತಗಳನ್ನೂ ಆಡಿದರು.ತುಸು ವೇಗವಾಗಿ ರನ್ ಗಳಿಸಿದ 28 ವರ್ಷದ ಶುಭಂ ಶರ್ಮಾ 186 ಎಸೆತಗಳಲ್ಲಿ ಶತಕ ಪೂರೈಸಿದರು.

90ನೇ ಓವರ್ನಲ್ಲಿ ಮೋಹಿತ್ ಅವಸ್ತಿ ಎಸೆತದಲ್ಲಿ ಶುಭಂ ಔಟಾಗುವ ಮೂಲಕ ಜೊತೆಯಾಟ ಮುರಿಯಿತು. 12 ಓವರ್ಗಳ ನಂತರ ಶಮ್ಸ್ ಮಲಾನಿ ಬೌಲಿಂಗ್ನಲ್ಲಿ ಯಶ್ ದುಬೆ ಔಟಾದರು. ಇವರಿಬ್ಬರ ಕ್ಯಾಚ್ಗಳನ್ನೂ ಹಾರ್ದಿಕ್ ತಮೊರೆ ಪಡೆದರು.

ಆರ್ಸಿಬಿ ರಜತ್

ಕಳೆದ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನಲ್ಲಿ ಮಿಂಚಿದ್ದ ರಜತ್ ಪಾಟೀದಾರ್ಗೆ ಅದೃಷ್ಟವೂ ಜೊತೆಗೂಡಿತು. ಶುಭಂ ಔಟಾದ ನಂತರ ಕ್ರೀಸ್ಗೆ ಬಂದ ಅವರು ಯಶ್ ಜೊತೆಗೆ ಮೂರನೇ ವಿಕೆಟ್ಗೆ 72 ರನ್ ಸೇರಿಸಿದರು. ಗ್ಯಾಲರಿಯಲ್ಲಿದ್ದ ಪ್ರೇಕ್ಷಕರು ರಜತ್ ಗೆ ಆರ್ಸಿಬಿ, ಆರ್ಸಿಬಿ ಎಂದು ಹುರಿದುಂಬಿಸಿದರು. ರಜತ್ ಐಪಿಎಲ್ನಲ್ಲಿ ಒಟ್ಟು 333 ರನ್ಗಳನ್ನು ಗಳಿಸಿದ್ದರು. ಅದರಲ್ಲಿ ಒಂದು ಶತಕವೂ ಸೇರಿದೆ.

ಆರ್ಸಿಬಿಯ ತವರಿನಂಗಳದಲ್ಲಿಯೂ ಅವರು ಉತ್ತಮವಾಗಿ ಆಡಿದರು. 105ನೇ ಓವರ್ನಲ್ಲಿ ಶಮ್ಸ್ ಎಸೆತದಲ್ಲಿ ರಜತ್ ಬ್ಯಾಕ್ವರ್ಡ್ ಪಾಯಿಂಟ್ನಲ್ಲಿದ್ದ ತನುಷ್ಗೆ ಕ್ಯಾಚಿತ್ತಿದ್ದರು. ಆದರೆ ಅಂಪೈರ್ ರೆಫರಲ್ನಲ್ಲಿ ನೋಬಾಲ್ ಸಾಬೀತಾಯಿತು. ರಜತ್ ಮತ್ತೆ ಕ್ರೀಸ್ಗೆ ಮರಳಿದರು. ಇದಾದ ನಂತರ ರಜತ್ ತಮ್ಮ ರನ್ ಗಳಿಕೆ ವೇಗಕ್ಕೆ ಕಡಿವಾಣ ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.