ಮೈಸೂರು–ಮಂಗಳೂರು ಪಂದ್ಯ ರದ್ದು
ಗುರುವಾರ ಮೈಸೂರು ವಾರಿಯರ್ಸ್ ಹಾಗೂ ಮಂಗಳೂರು ಡ್ರ್ಯಾಗನ್ಸ್ ನಡುವಿನ ಪಂದ್ಯವು ಮಳೆಯಿಂದಾಗಿ ರದ್ದಾಗಿದ್ದು, ಉಭಯ ತಂಡಗಳು ತಲಾ ಒಂದು ಅಂಕ ಹಂಚಿಕೊಂಡವು.
ಮಧ್ಯಾಹ್ನ ಮಳೆಯಾದ ಕಾರಣ ಪಂದ್ಯವು 3.15ಕ್ಕೆ ಬದಲಾಗಿ ಮಧ್ಯಾಹ್ನ 4ಕ್ಕೆ ಮರು ನಿಗದಿಯಾಯಿತು. ಟಾಸ್ ಗೆದ್ದ ಮಂಗಳೂರು ತಂಡವು ಫೀಲ್ಡಿಂಗ್ ಆಯ್ದುಕೊಂಡಿತು. ಪಂದ್ಯ ಆರಂಭಕ್ಕೆ ಇನ್ನು 15 ನಿಮಿಷ ಇರುವಾಗ ಮತ್ತೆ ಮಳೆ ಆರಂಭಗೊಂಡಿದ್ದು, ಅರ್ಧಗಂಟೆಗೂ ಹೆಚ್ಚು ಕಾಲ ಸುರಿಯಿತು. ಕ್ರೀಡಾಂಗಣದ ಸಿಬ್ಬಂದಿ ಸಮರೋಪಾದಿಯಲ್ಲಿ ನೀರು ಹೊರಹಾಕಿದರು. ಸಂಜೆ 5.45ಕ್ಕೆ ಮೈದಾನದ ಸ್ಥಿತಿಗತಿ ಪರಿಶೀಲಿಸಿದ ಅಂಪೈರ್‌ಗಳು, ಔಟ್‌ಫೀಲ್ಡ್ ಒದ್ದೆಯಾಗಿದ್ದ ಕಾರಣ ಪಂದ್ಯ ರದ್ದುಗೊಳಿಸುವ ನಿರ್ಧಾರ ಪ್ರಕಟಿಸಿದರು.