ಮಂಗಳವಾರ, ನವೆಂಬರ್ 24, 2020
25 °C

ಐಪಿಎಲ್‌ ಆಧರಿಸಿ ಟೆಸ್ಟ್‌‌ ತಂಡಕ್ಕೆ ರಾಹುಲ್‌ ಆಯ್ಕೆ: ಸಂಜಯ್‌ ಮಂಜ್ರೇಕರ್‌ ಟೀಕೆ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಟೆಸ್ಟ್‌ ಪಂದ್ಯಗಳ ಸರಣಿಗೆ ಕೆ.ಎಲ್‌ ರಾಹುಲ್‌ ಅವರನ್ನು ಆಯ್ಕೆ ಮಾಡಿರುವ ಬಿಸಿಸಿಐ ನಿರ್ಧಾರವನ್ನು ಕ್ರಿಕೆಟ್‌ ಕಾಮೆಂಟೇಟರ್‌ ಸಂಜಯ್‌ ಮಂಜ್ರೇಕರ್‌ ವಿಮರ್ಶೆಗೊಳಪಡಿಸಿದ್ದಾರೆ.

ಈ ಬಗ್ಗೆ ಅವರು ಮಂಗಳವಾರ ಬೆಳಗ್ಗೆ ಟ್ವೀಟ್‌ ಮಾಡಿದ್ದಾರೆ. ಕಳೆದ 5 ಟೆಸ್ಟ್‌ ಸರಣಿಗಳಲ್ಲಿನ ಕೆ.ಎಲ್‌ ರಾಹುಲ್‌ ಅವರ ಸಾಧನೆಯನ್ನು ಅವರು ತಮ್ಮ ಟ್ವೀಟ್‌ನಲ್ಲಿ ಒರೆಗೆ ಹಚ್ಚಿದ್ದಾರೆ.

ಇದನ್ನೂ ಓದಿ: ಆಸ್ಟ್ರೇಲಿಯಾ ಸರಣಿಗೆ ಟೀಂ ಇಂಡಿಯಾ ಪ್ರಕಟ: ರೋಹಿತ್‌ ಹೊರಕ್ಕೆ, ರಾಹುಲ್‌ ಉಪನಾಯಕ

'ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ 7.1ರ ಸರಾಸರಿ, ಇಂಗ್ಲೆಂಡ್‌ ವಿರುದ್ಧದ 29ರ ಸರಾಸರಿ, ವೆಸ್ಟ್‌ಇಂಡಿಸ್‌ ವಿರುದ್ಧ 18ರ ಸರಾಸರಿ, ಆಸ್ಟ್ರೇಲಿಯಾ ವಿರುದ್ದ 10.7ರ ಸರಾಸರಿ, ವೆಸ್ಟ್‌ ಇಂಡಿಸ್‌ ವಿರುದ್ಧ 25.4ರ ಸರಾಸರಿಯಲ್ಲಿ ಕೆ.ಎಲ್‌ ರಾಹುಲ್‌ ಆಡಿದ್ದಾರೆ. ಆದರೂ ಐಪಿಎಲ್‌ ಮತ್ತು ವೈಟ್‌ಬಾಲ್‌ನಲ್ಲಿನ ಸಾಧನೆಯ ಆಧಾರದಲ್ಲಿ ಮರಳಿ ಟೆಸ್ಟ್‌ ತಂಡದಲ್ಲಿ ಸ್ಥಾನಪಡೆಯುವುದು ಅದೃಷ್ಟವೇ ಸರಿ. ಅವರು ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳುತ್ತಾರೆಂದು ನಾವು ಭಾವಿಸಬೇಕಷ್ಟೆ. ರಾಹುಲ್‌ಗೆ ಶುಭವಾಗಲಿ,' ಎಂದು ಅವರು ವ್ಯಂಗ್ಯದ ಧಾಟಿಯಲ್ಲಿ ಟೀಕೆ ಮಾಡಿದ್ದಾರೆ.

ಆಸ್ಟ್ರೇಲಿಯ ವಿರುದ್ಧ ಇದೇ ನವೆಂಬರ್‌ 27ರಿಂದ ಆರಂಭವಾಗಲಿರುವ ಮೂರು ಟಿ20, ಮೂರು ಏಕದಿನ, ನಾಲ್ಕು ಟೆಸ್ಟ್‌ ಪಂದ್ಯಗಳ ಸರಣಿಗೆ ಸೋಮವಾರ ಭಾರತ ತಂಡವನ್ನು ಘೋಷಣೆ ಮಾಡಲಾಗಿದೆ. ಇದರಲ್ಲಿ ಕೆ.ಎಲ್‌ ರಾಹುಲ್‌ ಎಲ್ಲ ಪ್ರಕಾರಗಳಿಗೂ ಆಯ್ಕೆಯಾಗಿದ್ದಾರೆ. ಅಷ್ಟೇ ಅಲ್ಲ, ಟಿ20 ಮತ್ತು ಏಕದಿನ ಸರಣಿಗೆ ಅವರನ್ನು ಉಪ ನಾಯಕನನ್ನಾಗಿಯೂ ಮಾಡಲಾಗಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು