ಅಕ್ಟೋಬರ್ 15ಕ್ಕೆ ಭಾರತ–ಪಾಕಿಸ್ತಾನ ಸೆಣಸಾಟ
ಸಾಂಪ್ರದಾಯಿಕ ಎದುರಾಳಿಗಳೆನಿಸಿರುವ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳು ಅಕ್ಟೋಬರ್ 15 ರಂದು ಮುಖಾಮುಖಿಯಾಗಲಿವೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ವೇದಿಕೆಯಾಗಲಿದೆ. ಭಾರತ ತಂಡವನ್ನು ರೋಹಿತ್ ಶರ್ಮ ಮತ್ತು ಪಾಕಿಸ್ತಾನ ಪಡೆಯನ್ನು ಬಾಬರ್ ಅಜಂ ಮುನ್ನಡೆಸಲಿದ್ದಾರೆ.