ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

19 ವರ್ಷದೊಳಗಿನವರ ವಿಶ್ವಕಪ್: 16ರ ವೇಗಿ ನಸೀಂ ಶಾರನ್ನು ಕಳುಹಿಸಬೇಡಿ ಎಂದ ಹಫೀಜ್

Last Updated 1 ಜನವರಿ 2020, 10:31 IST
ಅಕ್ಷರ ಗಾತ್ರ

ಪಾಕಿಸ್ತಾನ ಕ್ರಿಕೆಟ್ ತಂಡದ 16 ವರ್ಷದವೇಗಿ ನಸೀಂ ಶಾ ಅವರನ್ನು 19 ವರ್ಷದೊಳಗಿನವರ ವಿಶ್ವಕಪ್‌ಗೆ ಕಳುಹಿಸಬೇಡಿ ಎಂದು ಮಾಜಿ ಆಲ್ರೌಂಡರ್‌ ಮೊಹಮದ್‌ ಹಫೀಜ್‌ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಮನವಿ ಮಾಡಿದ್ದಾರೆ. ಶಾ ಈಗಾಗಲೇ ಅಂತರರಾಷ್ಟ್ರೀಯ ಕ್ರಿಕೆಟ್‌ ಆಡಿದ್ದು, ಮತ್ತಷ್ಟು ಸುಧಾರಣೆಗೊಳ್ಳಲಿ ಎಂದು ಹಫೀಜ್ ಹೇಳಿದ್ದಾರೆ.

ಶಾ ಅವರನ್ನು ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ 19 ವರ್ಷದೊಳಗಿನವರ ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಆದರೆ, ಅವರಿಗೆ ವಿಶ್ರಾಂತಿ ನೀಡುವಂತೆ ಮತ್ತು ಅವರ ಬದಲು ಮತ್ತೊಬ್ಬ ವೇಗಿಯನ್ನು ಆಯ್ಕೆ ಮಾಡುವಂತೆ ಹಫೀಜ್‌ ಕೋರಿದ್ದಾರೆ.

‘19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಆಡಲು ನಸೀಂ ಶಾ ಅವರನ್ನು ಕಳುಹಿಸಬೇಡಿ ಎಂಬುದು ಕಿರಿಯರ ಆಯ್ಕೆ ಸಮಿತಿಗೆ ನಾನು ನೀಡುವ ವಿನಮ್ರ ಸಲಹೆ. ಆತ (ಶಾ) ಈಗಾಗಲೇ ಅಂತರರಾಷ್ಟ್ರೀಯ ಕ್ರಿಕೆಟ್‌ ಆಡಿದ್ದಾನೆ. ತಾಂತ್ರಿಕವಾಗಿ ಮತ್ತು ದೈಹಿಕವಾಗಿ ಮತ್ತಷ್ಟು ಸುದಾರಣೆಗಳನ್ನು ತಂದುಕೊಳ್ಳಲು ಕಠಿಣವಾಗಿ ಶ್ರಮ ಹಾಕಬೇಕಾದ ಹಂತದಲ್ಲಿದ್ದಾನೆ. ಹಾಗಾಗಿ ಮತ್ತೊಬ್ಬ ವೇಗಿಯನ್ನು ವಿಶ್ವಕಪ್‌ಗೆ ಕಳುಹಿಸಿಕೊಡಲು ಈ ಸದಾವಕಾಶವನ್ನು ಬಳಸಿಕೊಳ್ಳಬೇಕು’ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಹಫೀಜ್‌ ಟ್ವೀಟ್‌ಗೆ ಪಾಕಿಸ್ತಾನದಲ್ಲಿ ಪರವಿರೋಧದ ಚರ್ಚೆಗಳು ನಡೆಯುತ್ತಿವೆ. ಕೆಲವರು ಹಫೀಜ್‌ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರೆ, ಹೆಚ್ಚಿನವರು ವಿರೋಧಿಸಿದ್ದಾರೆ.

‍ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್‌ ಸರಣಿಗೆ ಪದಾರ್ಪಣೆ ಮಾಡಿದ್ದ ನಸೀಂ, 145–150 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಬಲ್ಲರು. ಇತ್ತೀಚೆಗೆ ಪಾಕಿಸ್ತಾನದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಐದು ವಿಕೆಟ್‌ ಗೊಂಚಲು ಪಡೆದು ಮಿಂಚಿದ್ದರು. ಆ ಮೂಲಕ ಇನಿಂಗ್ಸ್‌ವೊಂದರಲ್ಲಿ ಐದು ವಿಕೆಟ್‌ ಪಡೆದ ಎರಡನೇ ಅತಿ ಕಿರಿಯ ಬೌಲರ್‌ ಎನಿಸಿದರು.

ಶಾ ಬೌಲಿಂಗ್‌ ನೆರವಿನಿಂದ ಪಾಕಿಸ್ತಾನ ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯವನ್ನು 263 ರನ್‌ಗಳಿಂದ ಗೆದ್ದುಕೊಂಡಿತ್ತು.

ಇನಿಂಗ್ಸ್‌ವೊಂದರಲ್ಲಿ ಐದು ವಿಕೆಟ್‌ ಪಡೆದ ಅತ್ಯಂತ ಕಿರಿಯ ಬೌಲರ್‌ ಎಂಬ ಶ್ರೇಯಪಾಕಿಸ್ತಾನದವರೇ ಆದ ಎಡಗೈ ಸ್ಪಿನ್ನರ್‌ ನಸೀಮ್‌ ಉಲ್‌ ಘನಿ ಅವರದ್ದು. ಘನಿ 1958ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಜಾರ್ಜ್‌ಟೌನ್‌ನಲ್ಲಿ 116 ರನ್ನಿಗೆ 5 ವಿಕೆಟ್‌ ಪಡೆದಿದ್ದರು. ಆಗ ಅವರ ವಯಸ್ಸು 16 ವರ್ಷ 303 ದಿನ. ನಸೀಮ್‌ ವಯಸ್ಸು 16 ವರ್ಷ 307 ದಿನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT