ಭಾರತಕ್ಕೆ ಧೋನಿ ಇದ್ದಂತೆ ಇಂಗ್ಲೆಂಡ್‌ಗೆ ಮಾರ್ಗನ್: ದಿನೇಶ್ ಕಾರ್ತಿಕ್

ನವದೆಹಲಿ: ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 43ನೇ ಜಯ ಸಾಧಿಸಿ ಅತಿಹೆಚ್ಚು ಪಂದ್ಯಗಳನ್ನು ಗೆದ್ದ ನಾಯಕ ಎನಿಸಿರುವ ಇಂಗ್ಲೆಂಡ್‌ನ ಎಯಾನ್ ಮಾರ್ಗನ್ ನಾಯಕತ್ವದ ಬಗ್ಗೆ ಭಾರತದ ಕ್ರಿಕೆಟಿಗ ಮತ್ತು ವೀಕ್ಷಕ ವಿವರಣೆಗಾರ ದಿನೇಶ್ ಕಾರ್ತಿಕ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದುವರೆಗೆ ಈ ದಾಖಲೆ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಹೆಸರಿನಲ್ಲಿತ್ತು. ಧೋನಿ, ಚುಟುಕು ಕ್ರಿಕೆಟ್‌ನಲ್ಲಿ 42 ಗೆಲುವುಗಳನ್ನು ಕಂಡಿದ್ದಾರೆ.
ಸೋಮವಾರ ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ 26 ರನ್ ಜಯ ಸಾಧಿಸಿತು. ಇದರೊಂದಿಗೆ ಮಾರ್ಗನ್ ಹೊಸ ದಾಖಲೆ ಬರೆದರು.
ಮಾರ್ಗನ್ ಸಾಧನೆ ಬಗ್ಗೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಕಾರ್ತಿಕ್, ಭಾರತಕ್ಕೆ ಎಂಎಸ್ ಧೋನಿ ಇದ್ದಂತೆ ಇಂಗ್ಲೆಂಡ್‌ಗೆ ಎಯಾನ್ ಮಾರ್ಗನ್. ತುಂಬಾ ಚೆನ್ನಾಗಿ ಮುನ್ನಡೆಸಿದ್ದಾರೆ. ಇಂಗ್ಲೆಂಡ್ ತಂಡ ವಿಶ್ವಕಪ್‌ನಲ್ಲಿ ಬಲಿಷ್ಠವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
M S DHONI is to India what EOIN MORGAN is to England
Well led @Eoin16 . Brilliant yesterday . The team to beat this World T20 is @ECB_cricket #WorldT20 #CricketTwitter
— DK (@DineshKarthik) November 2, 2021
ಟಿ20 ವಿಶ್ವಕಪ್‌ನಲ್ಲಿ ಮೊದಲ ಗುಂಪಿನಲ್ಲಿರುವ ಇಂಗ್ಲೆಂಡ್ ತಂಡ ಆಡಿರುವ ನಾಲ್ಕೂ ಪಂದ್ಯಗಳಲ್ಲಿ ಗೆದ್ದು ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಕಳೆದ ಬಾರಿಯ (2019) ಏಕದಿನ ಕ್ರಿಕೆಟ್ ವಿಶ್ವಕಪ್ ಮುಡಿಗೇರಿಸಿಕೊಂಡಿರುವ ಮಾರ್ಗನ್ ಪಡೆ, ಈ ಬಾರಿ ಚುಟುಕು ವಿಶ್ವಕಪ್ ಎತ್ತಿಹಿಡಿಯುವ ನೆಚ್ಚಿನ ತಂಡವೆನಿಸಿದೆ.
ಇಂಗ್ಲೆಂಡ್ ಗುಂಪು ಹಂತದ ತನ್ನ ಕೊನೆಯ ಪಂದ್ಯದಲ್ಲಿ (ನವೆಂಬರ್ 6ರಂದು) ದಕ್ಷಿಣ ಆಫ್ರಿಕಾ ವಿರುದ್ಧ ಕಣಕ್ಕಿಳಿಯಲಿದೆ.
With 43 wins, Morgs becomes the most successful men's captain in IT20 cricket.
Our captain ❤️#T20WorldCup #EnglandCricket pic.twitter.com/1wXYKUoHJi
— England Cricket (@englandcricket) November 1, 2021
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.