ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀಗಿತ್ತು ಸೂಪರ್ ಓವರ್!: ರೋಹಿತ್ ಸಿಕ್ಸರ್ ಎದುರು ಮಂಕಾದ ವಿಲಿಯಮ್ಸನ್ ಆಟ

ನ್ಯೂಜಿಲೆಂಡ್‌ ವಿರುದ್ಧ ಐದು ಪಂದ್ಯಗಳ ಟಿ20 ಸರಣಿ
Last Updated 31 ಜನವರಿ 2020, 14:16 IST
ಅಕ್ಷರ ಗಾತ್ರ

ಹ್ಯಾಮಿಲ್ಟನ್:ರೋಚಕ ಹೋರಾಟಕ್ಕೆ ಸಾಕ್ಷಿಯಾದ ನ್ಯೂಜಿಲೆಂಡ್‌ ವಿರುದ್ಧದ ಮೂರನೇ ಟಿ20 ಪಂದ್ಯವನ್ನು ಭಾರತ ಸೂಪರ್‌ ಓವರ್‌ನಲ್ಲಿ ಗೆದ್ದುಕೊಂಡಿತು. ಇದರೊಂದಿಗೆ ವಿರಾಟ್ ಕೊಹ್ಲಿ ಬಳಗವುಸರಣಿಯನ್ನು 3–0 ಅಂತರದಿಂದ ಗೆದ್ದುಕೊಂಡಿತು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ರೋಹಿತ್‌ ಶರ್ಮಾ ಅವರ ಬಿರುಸಿನ ಅರ್ಧಶತಕ (40 ಎಸೆತಗಳಲ್ಲಿ 65 ರನ್‌) ಮತ್ತು ನಾಯಕ ವಿರಾಟ್‌ ಕೊಹ್ಲಿ (38) ಜವಾಬ್ದಾರಿಯುತ ಬ್ಯಾಟಿಂಗ್‌ ನೆರವಿನಿಂದ 179 ರನ್‌ ಗಳಿಸಿತ್ತು. ಈ ಸವಾಲಿನ ಗುರಿ ಎದುರು ನ್ಯೂಜಿಲೆಂಡ್‌ ನಾಯಕ ಕೇನ್‌ ವಿಲಿಯಮ್ಸನ್‌ ದಿಟ್ಟ ಹೋರಾಟ ನಡೆಸಿದರು.

ಆದರೆ, ಅವರ ಆಟ ತಮ್ಮ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ.

ನ್ಯೂಜಿಲೆಂಡ್‌ ಗೆಲುವಿಗೆ ಕೊನೆಯ ಓವರ್‌ನಲ್ಲಿ 9 ರನ್‌ ಬೇಕಿತ್ತು. ವಿಲಿಯಮ್ಸನ್‌ ಮತ್ತು ಅನುಭವಿ ರಾಸ್‌ ಟೇಲರ್ (17) ಕ್ರೀಸ್‌ನಲ್ಲಿದ್ದರು. ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಚೆಂಡನ್ನು ಮೊಹಮದ್ ಶಮಿಗೆ ನೀಡಿದರು. ಮೊದಲ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದ ಟೇಲರ್‌ ಎರಡನೇ ಎಸೆತದಲ್ಲಿ 1 ರನ್‌ ಗಳಿಸಿದರು. ಕೊನೆಯ ನಾಲ್ಕು ಎಸೆತಗಳಲ್ಲಿ ಕೇವಲ ಎರಡು ರನ್‌ ಬೇಕಿದ್ದರಿಂದ, ಕಿವೀಸ್‌ ಪಡೆಗೆ ಗೆಲುವು ನಿಶ್ಚಿತ ಎನ್ನಲಾಗಿತ್ತು.

ಆದರೆ,95 ರನ್ ಗಳಿಸಿ ಶತಕದ ಸನಿಹವಿದ್ದ ವಿಲಿಯಮ್ಸನ್‌ ಮೂರನೇ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದರು. ನಾಲ್ಕನೇ ಎಸೆತದಲ್ಲಿ ರನ್‌ ಕದಿಯಲು ವಿಫಲವಾದ ಟಿಮ್ ಸೀಫರ್ಟ್‌ ನಂತರ ಒಂದು ರನ್‌ ಗಳಿಸಿದರು.ಕೊನೆ ಎಸೆತದಲ್ಲಿ ಟೇಲರ್‌ ವಿಕೆಟ್‌ ಒಪ್ಪಿಸಿದ್ದರಿಂದ ಟೈ ಆದ ಪಂದ್ಯದ ಫಲಿತಾಂಶ ನಿರ್ಧರಿಸಲು ಸೂಪರ್‌ ಓವರ್‌ ಮೊರೆ ಹೋಗಲಾಯಿತು.

ಸೂಪರ್‌ ಓವರ್‌ ಡ್ರಾಮಾ
ಟಿ20ಯಲ್ಲಿ ಕೇವಲ 6.79 ಎಕಾನಮಿಯಲ್ಲಿ ಬೌಲ್‌ ಮಾಡುವ ಬೂಮ್ರಾ,ಈ ಪಂದ್ಯದಲ್ಲಿ ಎಸೆದ 4 ಓವರ್‌ಗಳಿಂದ 11.25ರ ಸರಾಸರಿಯಲ್ಲಿ 45 ರನ್‌ ಬಿಟ್ಟುಕೊಟ್ಟಿದ್ದರು. ಹೀಗಿದ್ದರೂ ಅವರನ್ನು ಕಡೆಗಣಿಸದ ಕೊಹ್ಲಿ, ಸೂಪರ್‌ ಓವರ್‌ ಹಾಕುವ ಅವಕಾಶ ನೀಡಿದರು. ಆದರೆ, ಮತ್ತೆ ವಿಫಲವಾದ ಬೂಮ್ರಾ ಬರೋಬ್ಬರಿ 17 ರನ್‌ಗಳನ್ನು ಬಿಟ್ಟುಕೊಟ್ಟರು.

ಈ ಓವರ್‌ನಲ್ಲಿ 4 ಎಸೆತ ಎದುರಿಸಿದ ಕೇನ್‌ ವಿಲಿಯಮ್ಸನ್‌ 11 ರನ್‌ ಗಳಿಸಿದರೆ, ಉಳಿದೆರಡು ಎಸೆತಗಳಲ್ಲಿ ಮಾರ್ಟಿನ್‌ ಗಪ್ಟಿಲ್‌ 5 ರನ್‌ ಬಾರಿಸಿದರು.

1ನೇ ಎಸೆತ: ವಿಲಿಯಮ್ಸನ್‌ ಡೀಪ್‌ ಸ್ಕೇರ್‌ ಲೆಗ್‌ನಲ್ಲಿ1 ರನ್‌ ಗಳಿಸಿದರು

2ನೇ ಎಸೆತ: ಗಪ್ಟಿಲ್‌ ಲಾಂಗ್‌ ಆಫ್‌ನಲ್ಲಿ1 ರನ್‌ ಪಡೆದರು

3ನೇ ಎಸೆತ:ವಿಲಿಯಮ್ಸನ್‌ ಶಾರ್ಟ್‌ ಫೈನ್‌ಲೆಗ್‌ನಲ್ಲಿಸಿಕ್ಸರ್‌ ಬಾರಿಸಿದರು

4ನೇ ಎಸೆತ: ವಿಲಿಯಮ್ಸನ್‌ ಲಾಂಗ್‌ ಆಫ್‌ನಲ್ಲಿಬೌಂಡರಿ ಗಳಿಸಿಕೊಂಡರು

5ನೇ ಎಸೆತ:ಬೈಸ್‌– 1 ಇತರೆ ರನ್‌

6ನೇ ಎಸೆತ:ಗಪ್ಟಿಲ್‌ ಲಾಂಗ್ ಆನ್‌ನಲ್ಲಿಬೌಂಡರಿ ಬಾರಿಸಿದರು

ಈ ಗುರಿಯನ್ನು ಕಾಪಾಡಿಕೊಳ್ಳಲು ನ್ಯೂಜಿಲೆಂಡ್‌ ಪರ ಟಿಮ್‌ ಸೌಥಿ ಬೌಲಿಂಗ್ ಮಾಡಿದರು. ಈ ಓವರ್‌ನಲ್ಲಿ ನಾಲ್ಕು ಎಸೆತಗಳನ್ನು ಎದುರಿಸಿದ ರೋಹಿತ್‌ ಶರ್ಮಾ 2 ಸಿಕ್ಸರ್ ಸಹಿತ 15 ರನ್‌ ಚಚ್ಚಿದರು. ಎರಡು ಎಸೆತಗಳನ್ನು ಆಡಿದ ಕೆ.ಎಲ್‌. ರಾಹುಲ್‌ 5 ರನ್‌ಗಳಿಸಿದರು.

1ನೇ ಎಸೆತ:ರೋಹಿತ್‌ ಮಿಡ್‌ ವಿಕೆಟ್‌ನಲ್ಲಿ2 ರನ್‌ ಗಳಿಸಿದರು. ಈ ವೇಳೆ ರೋಹಿತ್‌ರನ್ನು ರನೌಟ್‌ ಮಾಡುವ ಅವಕಾಶವನ್ನು ವಿಕೆಟ್‌ಕೀಪರ್‌ ಟಿಮ್ ಸೀಫರ್ಟ್‌ ಹಾಳು ಮಾಡಿದರು.

2ನೇ ಎಸೆತ: ರೋಹಿತ್‌1 ರನ್ ಗಳಿಸಿದರು

3ನೇ ಎಸೆತ:ರಾಹುಲ್‌ ಬೌಂಡರಿಗಳಿಸಿದರು

4ನೇ ಎಸೆತ: ರಾಹುಲ್‌ ಲಾಂಗ್‌ ಆನ್‌ನತ್ತ1 ರನ್ ಓಡಿದರು

5ನೇ ಎಸೆತ: ಡೀಪ್‌ ಸ್ಕ್ವೇರ್ ಲೆಗ್‌ನಲ್ಲಿಸಿಕ್ಸರ್‌ ಸಿಡಿಸಿದರೋಹಿತ್‌

6ನೇ ಎಸೆತ: ರೋಹಿತ್‌ಲಾಂಗ್‌ ಆಫ್‌ನಲ್ಲಿ ಮತ್ತೊಂದುಸಿಕ್ಸರ್‌ ಬಾರಿಸಿದರು

ಸರಣಿಯ ಮೊದಲೆರಡು ಪಂದ್ಯಗಳನ್ನು ಭಾರತ ಅಧಿಕಾರಯುತವಾಗಿ ಗೆದ್ದುಕೊಂಡಿತ್ತು. ಆಕ್ಲೆಂಡ್‌ನಲ್ಲಿ ನಡೆದಿದ್ದ ಆ ಎರಡೂ ಪಂದ್ಯಗಳನ್ನು ವಿರಾಟ್‌ ಕೊಹ್ಲಿ ಬಳಗ ಕ್ರಮವಾಗಿ 6 ಮತ್ತು ಏಳು ವಿಕೆಟ್‌ ಅಂತರದ ಜಯ ಸಾಧಿಸಿತ್ತು. ಇದರೊಂದಿಗೆ ಕೊಹ್ಲಿ ಪಡೆ ಇದೇ ಮೊದಲ ಸಲ ಕಿವೀಸ್‌ ನೆಲದಲ್ಲಿ ಸರಣಿ ಗೆದ್ದ ಸಾಧನೆ ಮಾಡಿತು.

ಸ್ಕೋರ್‌ ವಿವರ
ಭಾರತ: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 179
ರೋಹಿತ್‌ ಶರ್ಮಾ65,ವಿರಾಟ್‌ ಕೊಹ್ಲಿ 38
ಹಮೀಷ್ ಬೆನೆಟ್ 54 ರನ್‌ಗೆ 3 ವಿಕೆಟ್‌
ಮಿಚೆಲ್ ಸ್ಯಾಂಟನರ್ 37 ರನ್‌ಗೆ 1 ವಿಕೆಟ್‌
ಕಾಲಿನ್ ಡಿ ಗ್ರ್ಯಾಂಡ್‌ಹೋಮ್ 13ರನ್‌ಗೆ 1 ವಿಕೆಟ್‌

ನ್ಯೂಜಿಲೆಂಡ್‌: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 179
ಕೇನ್‌ ವಿಲಿಯಮ್ಸನ್‌ 95, ಮಾರ್ಟಿನ್‌ ಗಪ್ಟಿಲ್‌ 31
ಶಾರ್ದೂಲ್‌ ಠಾಕೂರ್‌ 21ಕ್ಕೆ 2 ವಿಕೆಟ್‌
ಯಜವೇಂದ್ರ ಚಾಹಲ್‌ 36ಕ್ಕೆ 1 ವಿಕೆಟ್‌
ರವೀಂದ್ರ ಜಡೇಜಾ 23ಕ್ಕೆ 1 ವಿಕೆಟ್‌

ಪಂದ್ಯ ಶ್ರೇಷ್ಠ: ರೋಹಿತ್ ಶರ್ಮಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT