ಸೋಮವಾರ, ಜೂಲೈ 13, 2020
25 °C

ಕಪಿಲ್‌ಗೆ ಸಮನಲ್ಲ ಹಾರ್ದಿಕ್ ಪಾಂಡ್ಯ: ಅಬ್ದುಲ್ ರಜಾಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಕಪಿಲ್ ದೇವ್ ಅವರಂತಾಗಲೂ ಇನ್ನೂ ಬಹಳಷ್ಟು ಶ್ರಮಪಡಬೇಕು.  ಸದ್ಯ ಅವರು ಕಪಿಲ್‌ ಅವರಿಗೆ ಯಾವ ತರಹದಿಂದಲೂ ಹೋಲಿಕೆ ಅಲ್ಲ. ಆದರೆ ಜಸ್‌ಪ್ರೀತ್ ಬೂಮ್ರಾ ಅವರು ವಿಶ್ವದರ್ಜೆಯ ಬೌಲರ್‌ ಆಗುವ ಹಾದಿಯಲ್ಲಿದ್ದಾರೆ ಎಂದು ಪಾಕಿಸ್ತಾನದ ಹಿರಿಯ ಕ್ರಿಕೆಟಿಗ ಅಬ್ದುಲ್ ರಜಾಕ್ ಹೇಳಿದ್ದಾರೆ.

ಈಚೆಗೆ ತಾವು ಬೂಮ್ರಾ ಅವರನ್ನು ‘ಬೇಬಿ ಬೌಲರ್‌’ ಎಂದು ಕರೆದಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನನ್ನ ಹೇಳಿಕೆಯನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ’ ಎಂದಿದ್ದಾರೆ.

‘ಪಾಂಡ್ಯ ಉತ್ತಮ ಆಟಗಾರ. ಅವರು ಇನ್ನೂ ಒಳ್ಳೆಯ ಆಲ್‌ರೌಂಡರ್ ಆಗುವ ಸಾಮರ್ಥ್ಯ ಹೊಂದಿದ್ದಾರೆ. ಅವರು ಕಠಿಣ ಶ್ರಮಪಡಬೇಕು. ಆಟಕ್ಕಾಗಿ ಹೆಚ್ಚು ಸಮಯ ಮೀಸಲಿಡಬೇಕು. ಇಲ್ಲದಿದ್ದರೆ ಲಯ ಕಂಡುಕೊಳ್ಳುವುದು ಅಸಾಧ್ಯ. ಆಗ ಎಲ್ಲವೂ ಕೈತಪ್ಪಿ ಹೋಗುತ್ತವೆ’ ಎಂದು ರಜಾಕ್ ಹೇಳಿದ್ದಾರೆ.

‘ಪಾಂಡ್ಯ ಮಾನಸಿಕವಾಗಿ ಮತ್ತು ದೈಹಿಕವಾಗಿ ಇನ್ನಷ್ಟು ಫಿಟ್‌ನೆಸ್‌ ಸಾಧಿಸಬೇಕು. ತಮ್ಮ ವೃತ್ತಿಯ ಆರಂಭದ ವರ್ಷಗಳಲ್ಲಿಯೇ ಅವರು ದೊಡ್ಡಮಟ್ಟದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಇಂತಹದನ್ನು ತಪ್ಪಿಸಬೇಕು. ಕೆಲವೊಮ್ಮ ಮನುಷ್ಯನಿಗೆ ಬಹಳಷ್ಟು ಹಣ ಲಭಿಸಿದಾಗ ಆರಾಮವಾಗಿರುವುದರೆಡೆಗೆ ಮನಸ್ಸು ಎಳೆಯುತ್ತದೆ. ಇದು ಎಲ್ಲ ಆಟಗಾರರಿಗೂ ಅನ್ವಯಿಸುತ್ತದೆ. ಮೊಹಮ್ಮದ್ ಆಮೀರ್ ಕಠಿಣ ಶ್ರಮ ಪಡಲಿಲ್ಲ. ಆದ್ದರಿಂದ  ಅವರ ಆಟವು ಕಳೆಗುಂದಿತು’ ಎಂದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು