ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನದ ಹಿಂದೂಗಳ ಬಗ್ಗೆಯೂ ಮಾತನಾಡಿ: ಇರ್ಫಾನ್‌ಗೆ ಕನೇರಿಯಾ ಮನವಿ

Published 4 ನವೆಂಬರ್ 2023, 9:10 IST
Last Updated 4 ನವೆಂಬರ್ 2023, 9:10 IST
ಅಕ್ಷರ ಗಾತ್ರ

ನವದೆಹಲಿ: ಗಾಜಾದಲ್ಲಿ ಮುಗ್ಧ ಮಕ್ಕಳು ಸಾವಿಗೀಡಾಗುತ್ತಿದ್ದು ಈ ನಿಟ್ಟಿನಲ್ಲಿ ಯುದ್ಧ ತಕ್ಷಣ ಕೊನೆಗಾಣಿಸಲು ವಿಶ್ವ ನಾಯಕರು ಮುಂದಾಗಬೇಕು ಎಂದು ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಮನವಿ ಮಾಡಿದ್ದರು.

ಇದನ್ನು ಸ್ವಾಗತ ಮಾಡಿರುವ ಪಾಕಿಸ್ತಾನದ ಮಾಜಿ ಸ್ಪಿನ್ನರ್ ದಾನಿಶ್ ಕನೇರಿಯಾ, ಪಾಕಿಸ್ತಾನದ ಹಿಂದೂಗಳ ಪರವಾಗಿಯೂ ಧ್ವನಿ ಎತ್ತಿ ಎಂದು ಮನವಿ ಮಾಡಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಇರ್ಫಾನ್‌ ಅವರ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ಕನೇರಿಯಾ, ನಿಮಗೆ ಮಕ್ಕಳ ನೋವು ಅರ್ಥವಾಗಿದೆ ಎಂಬುದರಲ್ಲಿ ನನಗೆ ಖುಷಿಯಿದೆ. ನಿಮ್ಮ ನಿಲುವಿನ ಪರ ನಾನು ನಿಲ್ಲುತ್ತೇನೆ. ಆದರೆ ದಯವಿಟ್ಟು, ಪಾಕಿಸ್ತಾನದ ಹಿಂದೂಗಳ ಬಗ್ಗೆಯೂ ಮಾತನಾಡಿ. ಇಲ್ಲೂ (ಪಾಕಿಸ್ತಾನ) ಪರಿಸ್ಥಿತಿ ಭಿನ್ನವಾಗಿಲ್ಲ ಎಂದು ಹೇಳಿದ್ದಾರೆ.

ಇದಕ್ಕೆ ಉತ್ತರಿಸಿರುವ ಇರ್ಫಾನ್, ಖಂಡಿತವಾಗಿಯೂ ಸಹೋದರ, ಈ ವಿಷಯದಲ್ಲಿ ನೀವು ನನ್ನೊಂದಿಗೆ ನಿಂತಿರುವುದಕ್ಕೆ ಸಂತೋಷವಿದೆ. ಜಗತ್ತಿನ ಎಲ್ಲ ದುಷ್ಕೃತ್ಯಗಳ ಬಗ್ಗೆ ಮಾತನಾಡೋಣ. ಯಾವ ನಂಬಿಕೆಯಾದರೂ ಸರಿ, ತಪ್ಪು ಕೃತ್ಯಗಳನ್ನು ನಿರ್ಮೂಲನೆ ಮಾಡಬಹುದು ಎಂಬ ನಂಬಿಕೆ ಇದೆ ಎಂದು ಹೇಳಿದ್ದಾರೆ.

ಈ ಮೊದಲು ಇರ್ಫಾನ್ ತಮ್ಮ ಪೋಸ್ಟ್‌ನಲ್ಲಿ ಪ್ರತಿದಿನ, ಗಾಜಾದಲ್ಲಿ 0-10 ವರ್ಷ ವಯಸ್ಸಿನ ಮುಗ್ಧ ಮಕ್ಕಳು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದರೆ ಇಡೀ ಜಗತ್ತೇ ಮೌನವಾಗಿದೆ. ಒಬ್ಬ ಕ್ರೀಡಾಪಟುವಾಗಿ ನನಗೆ ನನ್ನ ಅಭಿಪ್ರಾಯ ಮಂಡಿಸಲು ಮಾತ್ರ ಸಾಧ್ಯ. ಆದರೆ ವಿಶ್ವ ನಾಯಕರು ಒಂದಾಗಿ ಈ ಪ್ರಜ್ಞಾಹೀನ ಹತ್ಯೆಯನ್ನು ತಕ್ಷಣ ಕೊನೆಗಾಣಿಸಬೇಕಿದೆ ಎಂದು ಮನವಿ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT