ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಬೇಗ ಓಡಿ', ಬ್ರಿಟಿಷ್ ಹೈಕಮಿಷನರ್‌ಗೆ ಕನ್ನಡ ಕಲಿಸಿದ ರಾಹುಲ್ ದ್ರಾವಿಡ್

Last Updated 9 ಆಗಸ್ಟ್ 2021, 7:16 IST
ಅಕ್ಷರ ಗಾತ್ರ

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್, ಭಾರತದ ಬ್ರಿಟಿಷ್ ಹೈಕಮಿಷನರ್ ಅಲೆಕ್ಸ್ ಎಲ್ಲಿಸ್ ಅವರಿಗೆ ಕನ್ನಡ ಕಲಿಸುವ ಮೂಲಕ ಗಮನ ಸೆಳೆದಿದ್ದಾರೆ.

ಈ ವಿಚಾರವನ್ನು ಸ್ವತ: ಅಲೆಕ್ಸ್ ಎಲ್ಲಿಸ್ ಟ್ವಿಟರ್ ಮೂಲಕ ಬಹಿರಂಗಪಡಿಸಿದ್ದಾರೆ. ಕ್ರಿಕೆಟ್‌ಗೆ ಸಂಬಂಧಿಸಿದ ಕೆಲವೊಂದು ಪದ ಬಳಕೆಯನ್ನು ತಾವು ದ್ರಾವಿಡ್ ಅವರಿಂದ ಕಲಿತುಕೊಳ್ಳಲು ಬಯಸುತ್ತಿರುವುದಾಗಿ ಹೇಳಿದ್ದಾರೆ.

ಬೆಂಗಳೂರಿಗೆ ಆಗಮಿಸಿದ ಅಲೆಕ್ಸ್ ಎಲ್ಲಿಸ್, ದ್ರಾವಿಡ್ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಈ ಕುತೂಹಲಕಾರಿ ಸಂವಾದ ನಡೆದಿದೆ. ಈ ಕುರಿತು ವಿಡಿಯೊವನ್ನು ಹಂಚಿದ್ದಾರೆ.

'ಇಂಗ್ಲೆಂಡ್ ಹಾಗೂ ಭಾರತ ತಂಡಗಳು ಪರಸ್ಪರ ಮುಖಾಮುಖಿಯಾಗುತ್ತಿದೆ. ಈ ಸಂದರ್ಭದಲ್ಲಿ ಭಾರತೀಯ ಕ್ರಿಕೆಟ್‌ನ ಪದಗಳ ಹುಡುಕಾಟದಲ್ಲಿದ್ದೇನೆ. ನಾವು ಬೆಂಗಳೂರಿಗೆ ಆಗಮಿಸಿದ್ದು, ನಮ್ಮೊಂದಿಗಿರುವ ಶ್ರೇಷ್ಠ ಆಟಗಾರ ಇಲ್ಲಿನ ಸ್ಥಳೀಯ ಭಾಷೆ ಕನ್ನಡದಲ್ಲಿ ಕ್ರಿಕೆಟ್ ಪದಗಳನ್ನು ಕಲಿಸಲಿದ್ದಾರೆ' ಎಂದಿದ್ದಾರೆ.

ಈ ಸಂದರ್ಭದಲ್ಲಿ ರಾಹುಲ್ ದ್ರಾವಿಡ್ 'ಬೇಗ ಓಡಿ' ಎಂದು ಹೇಳುತ್ತಾರೆ. ತಕ್ಷಣ ಬ್ರಿಟಿಷ್ ಹೈಕಮಿಷನರ್ ನಗುತ್ತಲೇ 'ಒನ್ ರನ್' ಎಂದು ಉತ್ತರಿಸುತ್ತಾರೆ.

ಸರಣಿ ವಿಡಿಯೊಗಳ ಮೂಲಕ ಭಾರತದ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿರುವ ಕ್ರಿಕೆಟ್ ಪದ ಬಳಕೆಯನ್ನು ಜಗತ್ತಿಗೆ ಪರಿಚಯಿಸುವ ಪ್ರಯತ್ನವನ್ನು ಅಲೆಕ್ಸ್ ಎಲ್ಲಿಸ್ ಮಾಡುತ್ತಿದ್ದಾರೆ. ಮೊದಲ ಭಾಗದಲ್ಲಿ ಹಿಂದಿ ಹಾಗೂ ತಮಿಳು ಭಾಷೆಯ ಪದ ಬಳಕೆಯನ್ನು ಪರಿಚಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT