ಐಪಿಎಲ್ ಮಿನಿ ಹರಾಜು: ಕರ್ನಾಟಕದ ಮನೋಜ್ ಬಾಂಢಗೆ ಆರ್‌ಸಿಬಿಗೆ

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇಂಗ್ಲೆಂಡ್‌ನ ರೀಸ್ ಟಾಪ್ಲಿ ಮತ್ತು ವಿಲ್ ಜ್ಯಾಕ್ಸ್ ಅವರನ್ನು ಖರೀದಿಸಿತು.
ಅಲ್ಲದೇ ಕರ್ನಾಟಕದ ಆಟಗಾರ ಮನೋಜ್ ಬಾಂಢಗೆ ಅವರನ್ನೂ ಸೇರ್ಪಡೆ ಮಾಡಿಕೊಂಡಿತು.
ವಿಲ್ ಜ್ಯಾಕ್ಸ್ ಅವರಿಗೆ ₹ 3.2 ಕೋಟಿ, ಟಾಪ್ಲಿಗೆ ₹ 1.2 ಕೋಟಿ ಮೌಲ್ಯ ನೀಡಿತು. ವಿಲ್ ಜ್ಯಾಕ್ಸ್ ಅವರ ಮೂಲಬೆಲೆ ₹ 1.5 ಕೋಟಿಯಾಗಿತ್ತು. ಟಾಪ್ಲಿ ಅವರಿಗೆ ₹ 75 ಲಕ್ಷ ಮೂಲಬೆಲೆ ನಿಗದಿ ಮಾಡಲಾಗಿತ್ತು.
ರಾಜನ್ ಕುಮಾರ್ (₹ 70 ಲಕ್ಷ), ಅವಿನಾಶ್ ಸಿಂಗ್ (₹ 60 ಲಕ್ಷ), ಮನೋಜ್ ಬಾಂಢಗೆ (₹ 20 ಲಕ್ಷ ) ಮತ್ತು ಹಿಮಾಂಶು ಶರ್ಮಾ (₹ 20 ಲಕ್ಷ) ಅವರನ್ನು ಸೇರ್ಪಡೆ ಮಾಡಿಕೊಂಡಿತು.
ಹರಾಜು ಪ್ರಕ್ರಿಯೆಯ ಆರಂಭದಿಂದಲೂ ಆರ್‌ಸಿಬಿ ತಂಡವು ಬಹಳ ಎಚ್ಚರಿಕೆಯಿಂದ ಹಣ ಖರ್ಚು ಮಾಡಿತು. ದೊಡ್ಡಮಟ್ಟದ ಹೂಡಿಕೆಗೆ ಮುಂದಾಗಲಿಲ್ಲ.
ಕರ್ನಾಟಕದ ಮನೀಷ್ ಪಾಂಡೆ ಅಥವಾ ಮಯಂಕ್ ಅಗರವಾಲ್ ಅವರ ಖರೀದಿಯಲ್ಲಿಯೂ ಹೆಚ್ಚು ಹಣ ಹೂಡಲು ಮುಂದಾಗಲಿಲ್ಲ. ಇದರಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಆರ್‌ಸಿಬಿ ಕುರಿತ ವ್ಯಂಗ್ಯ ಟ್ವೀಟ್‌ಗಳು ಮತ್ತು ಮಿಮ್‌ಗಳು ಹರಿದಾಡಿದವು.
#PlayBold #WeAreChallengers #IPL2023 #IPL2023Auction pic.twitter.com/iCDxQr1Tk1
— Royal Challengers Bangalore (@RCBTweets) December 23, 2022
𝗦𝘁𝗿𝗼𝗻𝗴 𝗰𝗼𝗿𝗲 𝗮𝗻𝗱 𝘁𝗵𝗲𝗻 𝘀𝗼𝗺𝗲 𝗺𝗼𝗿𝗲. 💪
Pretty much sums up our Class of 2023. We’re summer ready! Aren’t we, 12th Man Army? 😍#PlayBold #WeAreChallengers #IPL2023 #ClassOf2023 pic.twitter.com/JhPKnldrP6
— Royal Challengers Bangalore (@RCBTweets) December 24, 2022
Joining RCB’s #ClassOf2023:
Name: Manoj Bhandage
Price: 20LWelcome to the RCB family! ❤️#PlayBold #WeAreChallengers #IPL2023 #IPL2023Auction pic.twitter.com/EUciqVripw
— Royal Challengers Bangalore (@RCBTweets) December 23, 2022
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.