ಬುಧವಾರ, ಮಾರ್ಚ್ 29, 2023
24 °C

ಐಪಿಎಲ್‌ ಮಿನಿ ಹರಾಜು: ಆರ್‌ಸಿಬಿಯಲ್ಲಿರುವ ಎಲ್ಲ ಆಟಗಾರರ ಪಟ್ಟಿ ಇಲ್ಲಿದೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಕೊಚ್ಚಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಆಟಗಾರರ ಮಿನಿ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದೆ. ಕಣದಲ್ಲಿದ್ದ 405 ಆಟಗಾರರ ಪೈಕಿ 80 ಆಟಗಾರರನ್ನು 10 ಪ್ರಾಂಚೈಸಿಗಳು ಕೋಟಿ ಕೋಟಿ ಹಣ ಸುರಿದು ಖರೀದಿಸಿವೆ.

ಕೊಚ್ಚಿಯಲ್ಲಿ ಶುಕ್ರವಾರ (ಡಿಸೆಂಬರ್‌ 23 ರಂದು) ನಡೆದ ಹರಾಜಿನಲ್ಲಿ ಕರ್ನಾಟಕದ ಮನೋಜ್ ಬಾಂಢಗೆ, ಇಂಗ್ಲೆಂಡ್‌ನವರಾದ ರೀಸ್‌ ಟಾಪ್ಲೇ, ವಿಲ್‌ ಜಾಕ್ಸ್‌ ಸೇರಿದಂತೆ ಒಟ್ಟು 7 ಆಟಗಾರರನ್ನು ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಸೇರಿಸಿಕೊಂಡಿದೆ.

ಹರಾಜಿಗೂ ಮುನ್ನ ₹8.75 ಕೋಟಿ ಹೊಂದಿದ್ದ ಆರ್‌ಸಿಬಿ ಖಾತೆಯಲ್ಲಿ ಇನ್ನೂ ₹ 1.75 ಕೋಟಿ ಬಾಕಿ ಇದೆ.

ಹರಾಜು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಆರ್‌ಸಿಬಿಯಲ್ಲಿರುವ ಆಟಗಾರರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. ಮುಂಬರುವ (2023ರ) ಐಪಿಎಲ್‌ ಆವೃತ್ತಿಯಲ್ಲಿ ಆರ್‌ಸಿಬಿ ಪರ ಕಾಣಿಸಿಕೊಳ್ಳಲಿರುವ ಆಟಗಾರರ ಪಟ್ಟಿ ಇಲ್ಲಿದೆ.

ಹರಾಜಿಗೂ ಮುನ್ನ ಆರ್‌ಸಿಬಿ ಉಳಿಸಿಕೊಂಡಿದ್ದ ಆಟಗಾರರು
ಬ್ಯಾಟರ್‌ಗಳು
* ಫಾಪ್‌ ಡು ಪ್ಲೆಸಿಸ್ (ನಾಯಕ)
* ವಿರಾಟ್‌ ಕೊಹ್ಲಿ
* ಸುಯಾಶ್‌ ಪ್ರಭುದೇಸಾಯಿ
* ರಜತ್‌ ಪಾಟಿದಾರ್‌

ವಿಕೆಟ್‌ ಕೀಪರ್‌/ಬ್ಯಾಟರ್‌
* ದಿನೇಶ್ ಕಾರ್ತಿಕ್‌
* ಅನೂಜ್‌ ರಾವತ್‌
* ಫಿನ್‌ ಅಲೆನ್‌

ಆಲ್‌ರೌಂಡರ್‌
* ಗ್ಲೆನ್‌ ಮ್ಯಾಕ್ಸ್‌ವೆಲ್‌
* ವನಿಂದು ಹಸರಂಗ
* ಶಹಬಾಜ್‌ ಅಹಮದ್
* ಮಹಿಪಾಲ್‌ ಲಾಮ್ರೋರ್‌

ಬೌಲರ್‌
* ಹರ್ಷಲ್‌ ಪಟೇಲ್‌
* ಡೇವಿಡ್‌ ವಿಲ್ಲಿ
* ಕರಣ್‌ ಶರ್ಮಾ
* ಮೊಹಮ್ಮದ್‌ ಸಿರಾಜ್‌
* ಜೋಶ್‌ ಹ್ಯಾಜಲ್‌ವುಡ್‌
* ಸಿದ್ದಾರ್ಥ್‌ ಕೌಲ್‌
* ಆಕಾಶ್‌ ದೀಪ್‌

ಹೊಸದಾಗಿ ಖರೀದಿಸಿದವರು
ಆಲ್‌ರೌಂಡರ್‌
* ವಿಲ್‌ ಜಾಕ್ಸ್‌ (₹ 3.2 ಕೋಟಿ)
* ಮನೋಜ್ ಬಾಂಢಗೆ  (₹ 20 ಲಕ್ಷ )
* ಸೋನು ಯಾದವ್‌  (₹ 20 ಲಕ್ಷ )

ಬೌಲರ್‌
* ರೀಸ್‌  ಟಾಪ್ಲಿ (₹ 1.2 ಕೋಟಿ)
* ಹಿಮಾಂಶು ಶರ್ಮಾ (₹ 20 ಲಕ್ಷ)
* ರಾಜನ್ ಕುಮಾರ್‌ (₹ 70 ಲಕ್ಷ)
* ಅವಿನಾಶ್‌ ಸಿಂಗ್‌ (₹ 60 ಲಕ್ಷ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು