ಶುಕ್ರವಾರ, ಆಗಸ್ಟ್ 6, 2021
25 °C

ಸಾಮಾಜಿಕ ಅಸಮಾನತೆ ವಿರುದ್ಧ ಧ್ವನಿಯೆತ್ತಿ: ಆರ್ಚರ್‌

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ಲಂಡನ್‌: ತಾವು ಅನುಭವಿಸಿದ ಜನಾಂಗೀಯ ತಾರತಮ್ಯದ ವಿರುದ್ಧ ವ್ಯಕ್ತಿಗಳು ಮುಕ್ತವಾಗಿ ಮಾತನಾಡಬೇಕು ಎಂದು ಇಂಗ್ಲೆಂಡ್‌ ಕ್ರಿಕೆಟ್ ತಂಡದ ವೇಗದ ಬೌಲರ್ ಜೋಫ್ರಾ ಆರ್ಚರ್‌ ಕರೆ ನೀಡಿದ್ದಾರೆ.

ಅಮೆರಿಕದಲ್ಲಿ ನಡೆದ ಕಪ್ಪು ಜನಾಂಗದ ವ್ಯಕ್ತಿ ಜಾರ್ಜ್‌ ಫ್ಲಾಯ್ಡ್‌ ಸಾವು ಖಂಡಿಸಿ ವಿಶ್ವದಾದ್ಯಂತ ನಡೆಯುತ್ತಿರುವ ‘ಬ್ಲ್ಯಾಕ್‌ ಲೈವ್ಸ್‌ ಮ್ಯಾಟರ್‌’ ಅಭಿಯಾನಕ್ಕೆ ಆರ್ಚರ್‌ ಬೆಂಬಲ ವ್ಯಕ್ತಪಡಿಸಿದ್ದಾರೆ.

‘ಬ್ಲ್ಯಾಕ್‌ ಲೈವ್ಸ್‌ ಮ್ಯಾಟರ್‌ ಅಭಿಯಾನ ತೀವ್ರತೆ ಪಡೆದುದಕ್ಕೆ ಖುಷಿಯಾಗಿದೆ. ನಾನು ಯಾವುದಾದರೂ ವಿಷಯ ಕುರಿತು ಚಿಂತಿತನಾಗಿದ್ದರೆ ಅದರ ಬಗ್ಗೆ ಮುಕ್ತವಾಗಿ ಹೇಳಿಕೊಳ್ಳುತ್ತೇನೆ. ವರ್ಣಭೇದ ನೀತಿಯು ಸರಿಯಲ್ಲ. ನಿಮಗೆ ಅನಿಸಿದ್ದನ್ನು ಹೇಳಿಬಿಡಬೇಕು. ಮನಸಲ್ಲಿಟ್ಟುಕೊಂಡು ಅದು ಬೆಳೆಯಲು ಬಿಡಬಾರದು’ ಎಂದು ಡೇಲಿ ಮೇಲ್‌ಗೆ ಬರೆದಿರುವ ಅಂಕಣದಲ್ಲಿ ಆರ್ಚರ್‌ ಹೇಳಿದ್ದಾರೆ.

ಹೋದ ವರ್ಷದ ನವಂಬರ್‌ನಲ್ಲಿ ನ್ಯೂಜಿಲೆಂಡ್‌ ಎದುರು ನಡೆದಿದ್ದ ಟೆಸ್ಟ್‌ ಪಂದ್ಯವೊಂದರ ವೇಳೆ ಪ್ರೇಕ್ಷಕನೊಬ್ಬ ಆರ್ಚರ್‌ಗೆ ಜನಾಂಗೀಯವಾಗಿ ನಿಂದಿಸಿದ್ದ ವರದಿಯಾಗಿತ್ತು.

ಇಂಗ್ಲೆಂಡ್‌ ಪರ ಏಳು ಟೆಸ್ಟ್‌ ಹಾಗೂ 14 ಏಕದಿನ ಪಂದ್ಯಗಳನ್ನಾಡಿರುವ ಆರ್ಚರ್‌, ತಮ್ಮ ತಂಡದಲ್ಲಿರುವ ವೈವಿಧ್ಯದ ಕುರಿತು ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು