ಗಾಲೆ, ಶ್ರೀಲಂಕಾ: ಬ್ಯಾಟಿಂಗ್ ಬಳಿಕ ಬೌಲಿಂಗ್ನಲ್ಲೂ ಅಮೋಘ ಆಟ ಪ್ರದರ್ಶಿಸಿದ ಆಸ್ಟ್ರೇಲಿಯಾ ತಂಡವು ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಇನಿಂಗ್ಸ್ ಮತ್ತು 242 ರನ್ಗಳಿಂದ ಗೆದ್ದುಕೊಂಡಿತು.

ಇದು ಶ್ರೀಲಂಕಾದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತಿ ದೊಡ್ಡ ರನ್ ಅಂತರದ ಸೋಲಾಗಿದೆ. 2017ರಲ್ಲಿ ನಾಗ್ಪುರದಲ್ಲಿ ನಡೆದ ಪಂದ್ಯದಲ್ಲಿ ಭಾರತ ವಿರುದ್ಧ ಲಂಕಾ ಪಡೆ ಇನಿಂಗ್ಸ್ ಮತ್ತು 239 ರನ್ಗಳ ಸೋಲು ಕಂಡಿದ್ದು, ಈವರೆಗಿನ ದಾಖಲೆಯಾಗಿತ್ತು.

ಉಸ್ಮಾನ್ ಖ್ವಾಜಾ ಅವರ ದ್ವಿಶತಕ ಮತ್ತು ಸ್ಟೀವ್ ಸ್ಮಿತ್ ಹಾಗೂ ಜೋಶ್ ಇಂಗ್ಲಿಸ್ ಅವರ ಶತಕಗಳ ಬಲದಿಂದ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ನಲ್ಲಿ 6 ವಿಕೆಟ್ಗೆ 654 ರನ್ ಗಳಿಸಿ ಡಿಕ್ಲೇರ್ಡ್ ಮಾಡಿಕೊಂಡಿತ್ತು. ಗುರಿಯನ್ನು ಬೆನ್ನಟ್ಟಿದ ಆತಿಥೇಯರು ಮೊದಲ ಇನಿಂಗ್ಸ್ನಲ್ಲಿ 165 ರನ್ಗೆ ಕುಸಿದಿದ್ದರು. ಫಾಲೋಆನ್ಗೆ ಒಳಗಾದ ಲಂಕಾ ಪಡೆ ಪಂದ್ಯದ ನಾಲ್ಕನೇ ದಿನವಾದ ಶನಿವಾರ ಎರಡನೇ ಇನಿಂಗ್ಸ್ನಲ್ಲಿ 247 ರನ್ ಗಳಿಸಿ ಹೋರಾಟ ಮುಗಿಸಿತು.

ಮೊದಲ ಇನಿಂಗ್ಸ್ನಲ್ಲಿ ಐದು ವಿಕೆಟ್ ಪಡೆದು ಮಿಂಚಿದ್ದ ಎಡಗೈ ಸ್ಪಿನ್ನರ್ ಮ್ಯಾಥ್ಯೂ ಕುಹ್ನೆಮನ್ ಅವರು ಎರಡನೇ ಇನಿಂಗ್ಸ್ನಲ್ಲೂ ಕೈಚಳಕ ತೋರಿ, ಒಟ್ಟು 9 ವಿಕೆಟ್ ಗಳಿಸಿದರು. ಅವರಿಗೆ ನೇಥಲ್ ಲಯನ್ ಸಾಥ್ ನೀಡಿದರು. ಅವರು ಒಟ್ಟು 7 ವಿಕೆಟ್ ಕಬಳಿಸಿದರು.

ಎರಡು ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ 1–0 ಮುನ್ನಡೆ ಪಡೆಯಿತು. ಎರಡನೇ ಪಂದ್ಯ ಇದೇ 6ರಿಂದ ಇದೇ ಕ್ರೀಡಾಂಗಣದಲ್ಲಿ ನಡೆಯಲಿದೆ.

ಸಂಕ್ಷಿಪ್ತ ಸ್ಕೋರ್:

ಮೊದಲ ಇನಿಂಗ್ಸ್:

ಆಸ್ಟ್ರೇಲಿಯಾ: 154 ಓವರ್ಗಳಲ್ಲಿ 6ಕ್ಕೆ 654 ಡಿಕ್ಲೇರ್ಡ್.

ಶ್ರೀಲಂಕಾ: 52.2 ಓವರ್ಗಳಲ್ಲಿ 165. ಎರಡನೇ ಇನಿಂಗ್ಸ್: 54.3 ಓವರ್ಗಳಲ್ಲಿ 247 (ಏಂಜಲೊ ಮ್ಯಾಥ್ಯೂಸ್ 41, ಧನಂಜಯ ಡಿಸಿಲ್ವ 39, ಜೆಫ್ರಿ ವಾಂಡರ್ಸೆ 53; ಮ್ಯಾಥ್ಯೂ ಕುಹ್ನೆಮನ್ 86ಕ್ಕೆ 4, ನೇಥನ್ ಲಯನ್ 78ಕ್ಕೆ 4).

ಫಲಿತಾಂಶ: ಆಸ್ಟ್ರೇಲಿಯಾ ತಂಡಕ್ಕೆ ಇನಿಂಗ್ಸ್ 242 ರನ್ಗಳ ಜಯ.

ಪಂದ್ಯದ ಆಟಗಾರ: ಉಸ್ಮಾನ್ ಖ್ವಾಜಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.