ಮಂಗಳವಾರ, ಮೇ 11, 2021
25 °C

ಮುತ್ತಯ್ಯ ಮುರಳೀಧರನ್‌ಗೆ ಆ್ಯಂಜಿಯೊಪ್ಲಾಸ್ಟಿ

ಪಿಟಿಐ Updated:

ಅಕ್ಷರ ಗಾತ್ರ : | |

ಚೆನ್ನೈ: ಶ್ರೀಲಂಕಾ ಕ್ರಿಕೆಟ್‌ನ ಮಾಜಿ ಸ್ಪಿನ್ನರ್‌ ಮುತ್ತಯ್ಯ ಮುರಳೀಧರನ್ ಅವರಿಗೆ ಹೃದಯದಲ್ಲಿ ನೋವು ಕಾಣಿಸಿಕೊಂಡಿದ್ದು, ಭಾನುವಾರ ಇಲ್ಲಿಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಆ್ಯಂಜಿ ಯೊಪ್ಲಾಸ್ಟಿ ನಡೆಸಲಾಗಿದೆ.

ಮುರಳೀಧರನ್‌ ಐಪಿಎಲ್ ಫ್ರಾಂಚೈಸ್‌ ಸನ್‌ರೈಸರ್ಸ್‌ ಹೈದರಾ ಬಾದ್‌ಗೆ ಬೌಲಿಂಗ್ ಕೋಚ್ ಆಗಿದ್ದಾರೆ. ಸದ್ಯ ಅವರಿಗೆ ಸ್ಟೆಂಟ್‌ ಅಳವಡಿಸಲಾ ಗಿದ್ದು ಆಸ್ಪತ್ರೆಯಿಂದ ಮರಳಿದ ನಂತರ ತಂಡವನ್ನು
ಸೇರಿಕೊಳ್ಳಲಿದ್ದಾರೆ ಎಂದು ಇಎಸ್‌
ಪಿಎನ್‌ಕ್ರಿಕ್‌ ಇನ್ಫೊ ವರದಿ ಮಾಡಿದೆ. 43 ವರ್ಷದ ಮುರಳೀಧರನ್‌ ಶ್ರೀಲಂಕಾ ಪರ 133 ಟೆಸ್ಟ್ ಮತ್ತು 350 ಏಕದಿನ ಪಂದ್ಯಗಳನ್ನು ಆಡಿದ್ದಾರೆ.

ಟೆಸ್ಟ್‌ನಲ್ಲಿ 800 ಮತ್ತು ಏಕದಿನ ಪಂದ್ಯಗಳಲ್ಲಿ 534 ವಿಕೆಟ್ ಪಡೆದಿದ್ದಾರೆ. 12 ಟಿ20 ಪಂದ್ಯಗಳಿಂದ 13 ವಿಕೆಟ್‌ ಗಳಿಸಿದ್ದಾರೆ.

2015ರಿಂದ ಅವರು ಸನ್‌ರೈಸರ್ಸ್‌ ಹೈದರಾಬಾದ್ ತಂಡಕ್ಕೆ ಬೌಲಿಂಗ್‌ ಕೋಚ್ ಹಾಗೂ ಮೆಂಟರ್ ಆಗಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು