ಶುಕ್ರವಾರ, ಮೇ 14, 2021
27 °C

IPL 2021: ಸನ್‌ರೈಸರ್ಸ್ ಮತ್ತು ಕೋಲ್ಕತಾ ನಡುವೆ ಇಂದಿನ ಪಂದ್ಯ

ಪ್ರಜಾವಾಣಿ Updated:

ಅಕ್ಷರ ಗಾತ್ರ : | |

Credit: PTI Photos

ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯ ಮೊದಲ ಭಾನುವಾರದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಕೋಲ್ಕತಾ ನೈಟ್ ರೈಡರ್ಸ್ ಎದುರಿಸಲಿದೆ.

ಎಸ್‌ಆರ್‌ಎಚ್ ತಂಡದಲ್ಲಿ ಅಧಿಕ ಸಂಖ್ಯೆಯಲ್ಲಿ ವಿದೇಶಿ ಆಟಗಾರರಿದ್ದಾರೆ. ಡೇವಿಡ್ ವಾರ್ನರ್ ನಾಯಕತ್ವ, ಲೆಗ್ ಸ್ಪಿನ್ನರ್ ರಶೀದ್ ಖಾನ್, ಕೇನ್ ವಿಲಿಯಮ್‌ಸನ್, ಜಾನಿ ಬೇರ್‌ಸ್ಟೊ, ಜೇಸನ್ ರಾಯ್, ಮೊಹಮ್ಮದ್ ನಬಿ, ಮುಜೀಬ್ ಉರ್ ರೆಹಮಾನ್ ಬೆಂಬಲ ಹೈದರಾಬಾದ್ ತಂಡಕ್ಕಿದೆ.

ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ, ಪ್ಯಾಟ್ ಕಮ್ಮಿನ್ಸ್, ಲಾಕಿ ಫರ್ಗ್ಯುಸನ್, ಶಿವಂ ಮವಿ, ಪ್ರಸಿದ‌್ಧ ಕೃಷ್ಣ, ಆಂಡ್ರೆ ರಸೆಲ್ ಮತ್ತು ಬೆನ್ ಕಟಿಂಗ್ ಬೆಂಬಲ ಇದೆ.

ಒಟ್ಟು ಪಂದ್ಯಗಳ ಸಂಖ್ಯೆ

ಎಸ್‌ಆರ್‌ಎಚ್: 7

ಕೆಕೆಆರ್: 12

ಕಳೆದ ಐದು ಪಂದ್ಯಗಳಲ್ಲಿ ಎಸ್ಆರ್‌ಎಚ್, ಮೊದಲ ಒಂದು ಪಂದ್ಯ ಸೋತಿದ್ದು, ನಂತರದ ನಾಲ್ಕು ಪಂದ್ಯಗಳಲ್ಲಿ ಗೆಲುವು ಕಂಡಿದೆ. ಕೆಕೆಆರ್, ಮೊದಲ ಪಂದ್ಯ ಜಯಿಸಿದ್ದು, ನಂತರ ಎರಡು ಸೋಲು, ಮತ್ತೆ ಗೆಲುವು ಹಾಗೂ ಕೊನೆಯ ಪಂದ್ಯ ಸೋತಿದೆ.

ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಇಂದಿನ ಪಂದ್ಯ ನಡೆಯಲಿದ್ದು, ಸಂಜೆ 7:30ಕ್ಕೆ ಆರಂಭವಾಗಲಿದೆ. ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಡಿಸ್ನಿ+ಹಾಟ್‌ಸ್ಟಾರ್ ಮೂಲಕ ನೇರಪ್ರಸಾರ ವೀಕ್ಷಿಸಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು