ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

T20 World Cup: ಬಾಂಗ್ಲಾ ವಿರುದ್ಧ ಅಫ್ಗಾನಿಸ್ತಾನಕ್ಕೆ ಜಯ, ಸೆಮಿಫೈನಲ್‌ಗೆ ಲಗ್ಗೆ

Published 25 ಜೂನ್ 2024, 5:34 IST
Last Updated 25 ಜೂನ್ 2024, 5:34 IST
ಅಕ್ಷರ ಗಾತ್ರ

ವಿನ್ಸೆಂಟ್‌: ಬಾಂಗ್ಲಾದೇಶವನ್ನು ಸೋಲಿಸುವ ಮೂಲಕ ಅಫ್ಗಾನಿಸ್ತಾನ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು.

ವಿಶ್ವಕಪ್‌ ಟೂರ್ನಿಯಲ್ಲಿ ಅಫ್ಗಾನಿಸ್ತಾನ ಮೊದಲ ಬಾರಿಗೆ ಸೆಮಿಫೈನಲ್‌ ಪ್ರವೇಶ ಪಡೆಯಿತು. ಅಫ್ಗಾನಿಸ್ತಾನ ಆಟಗಾರರ ವಿರೋಚಿತ ಆಟದ ಫಲವಾಗಿ ಅಫ್ಗನ್‌ ಪಡೆ ಹೊಸ ವಿಕ್ರಮ ಬರೆಯಿತು. 

ಮೊದಲು ಬ್ಯಾಟ್‌ ಮಾಡಿದ ಅಫ್ಗಾನಿಸ್ತಾನ 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 115 ರನ್‌ ಪೇರಿಸಿತು. ಈ ಗುರಿಯನ್ನು ಬೆನ್ನತ್ತಿದ ಬಾಂಗ್ಲಾದೇಶ 105 ರನ್‌ಗಳಿಗೆ ಸರ್ವಪತನವಾಯಿತು. 

ಅಫ್ಗಾನಿಸ್ತಾನ ಪರ ಗುರ್ಬಜ್‌ 43 ರನ್‌ ಹೊಡೆದು ಗಮನ ಸೆಳೆದರು. ರಶೀದ್‌ ಖಾನ್‌ 19 ರನ್‌ ಹೊಡೆದರು. ಉಳಿದ ಆಟಗಾರರು ಅಲ್ಪ ಮೊತ್ತಕೆ ಔಟ್‌ ಆದರು. ಬಾಂಗ್ಲಾದೇಶದ ಪರ ರಶೀದ್‌ ಹೊಸೇನ್‌ 3 ವಿಕೆಟ್‌ ಪಡೆದರು.

ಅಫ್ಗಾನಿಸ್ತಾನದ ಬೌಲಿಂಗ್‌ ದಾಳಿಗೆ ತತ್ತರಿಸಿದ ಬಾಂಗ್ಲಾ ಪಡೆ 105 ರನ್‌ ಪೇರಿಸಲು ಪರದಾಡಿತು. ಲಿಟನ್‌ ದಾಸ್‌ ಮಾತ್ರ 54 ರನ್‌ ಹೊಡೆದು ಗಮನ ಸೆಳೆದರು. ಅಫ್ಗನ್‌ ಪಡೆಯ ನವೀನ್‌, ರಶೀದ್‌ ಖಾನ್‌ ತಲಾ 4 ವಿಕೆಟ್‌ ಪಡೆದರು.

ಮಳೆಯ ಕಾಟದ ನಡುವೆಯೂ ಅಫ್ಗಾನಿಸ್ತಾನ ರೋಚಕ ಜಯ ದಾಖಲಿಸಿತು. ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ಸೆಣಸಲಿದೆ.

ಸ್ಕೋರ್‌...

ಅಫ್ಗಾನಿಸ್ತಾನ: 115/5 ( 20 ಓವರ್‌)

 ಬಾಂಗ್ಲಾದೇಶ: 105/10 (17. 5 ಓವರ್‌)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT