ಮುಂಬೈ: ಕ್ರಿಕೆಟ್ ಒಂದು ಧರ್ಮ ಎಂದೇ ಭಾವಿಸಿರುವ ಭಾರತದಲ್ಲಿ ಈ ಬಾರಿಯ ವಿಶ್ವಕಪ್ ಕ್ರಿಕೆಟ್ ಟೂರ್ನಿ ನಡೆಯುತ್ತಿದೆ. ಅದರಲ್ಲೂ ಲೀಗ್ ಹಂತದಿಂದ ಫೈನಲ್‌ವರೆಗೂ ಎಲ್ಲಾ ಪಂದ್ಯಗಳಲ್ಲೂ ಅದ್ಭುತ ಸಾಧನೆ ಮಾಡಿರುವ ಭಾರತ ತಂಡ ಕಪ್ ತನ್ನದಾಗಿಸಿಕೊಳ್ಳುವ ಮೂಲಕ ವಿಶ್ವವಿಜೇತ ಎಂದೆನಿಸಿಕೊಳ್ಳುವ ತವಕದಲ್ಲಿದೆ. ಇಂಥ ಸಂದರ್ಭದಲ್ಲಿ ಕ್ರಿಕೆಟ್ ಕುರಿತ ಬಾಲಿವುಡ್‌ನ ಹಲವು ಸಿನಿಮಾಗಳು ಈ ಅವಧಿಯಲ್ಲಿ ಸದ್ದು ಮಾಡುತ್ತಿವೆ.

ಕ್ರಿಕೆಟ್ ಹಾಗೂ ಬಾಲಿವುಡ್ ಸದಾ ಒಂದೊಕ್ಕೊಂದು ತಳಕುಹಾಕಿಕೊಂಡೇ ಸಾಗುತ್ತಿರುವ ಎರಡು ದೊಡ್ಡ ಮನರಂಜನಾ ಕ್ಷೇತ್ರಗಳು. ಕ್ರಿಕೆಟ್ ವಿಷಯವನ್ನೇ ಕಥಾವಸ್ತುವನ್ನಾಗಿಸಿಕೊಂಡ ಹಲವು ಸಿನಿಮಾಗಳು ಭಾರತೀಯ ಸಿನಿಮಾ ರಂಗದಲ್ಲಿ ಬಂದು ಹೋಗಿವೆ. ಇವುಗಳಲ್ಲಿ ಪ್ರಮುಖ 10 ಸಿನಿಮಾಗಳ ಪಟ್ಟಿ ಇಲ್ಲಿದೆ.

1. ಶಹಬ್ಬಾಷ್ ಮಿತ್ತು (2022)

ಭಾರತ ಮಹಿಳಾ ಕ್ರಿಕೆಟ್‌ನ ತಾರೆ ಮಿಥಾಲಿ ರಾಜ್ ಅವರ ಜೀವನಾಧಾರಿತ ಚಿತ್ರ ಇದಾಗಿದೆ. ಭಾರತ ಕ್ರಿಕೆಟ್ ತಂಡದ ನಾಯಕಿಯಾಗಿದ್ದ ಮಿಥಾಲಿ ಅವರು ಸಾಗಿದ ಕ್ರಿಕೆಟ್ ಯಾತ್ರೆ, ಸವಾಲುಗಳು ಹಾಗೂ ಅದನ್ನು ಮೆಟ್ಟಿನಿಂತ ಅವರ ಛಲ ಕುರಿತು ಹೆಣೆದ ಚಿತ್ರಕಥೆ ಇದಾಗಿತ್ತು.

ತಾರಾಗಣ: ತಾಪ್ಸಿ ಪನ್ನು, ವಿಜಯ ರಾಝಾ, ಬ್ರಿಜೇಂದ್ರ ಕಾಲಾ

ನಿರ್ದೇಶನ: ಶ್ರೀಜಿತ್ ಮುಖರ್ಜಿ

ಒಟಿಟಿ: ನೆಟ್‌ಫ್ಲಿಕ್ಸ್

ಐಎಂಡಿಬಿ ರೇಟಿಂಗ್: 5.6/10

2. ಜರ್ಸಿ (2022)

2019ರಲ್ಲಿ ತೆಲಗು ನಟ ನಾನಿ ನಟಿಸಿದ ಚಿತ್ರದ ಅವತರಣಿಕೆ. ಕ್ರಿಕೆಟ್ ಆಟಗಾರನೊಬ್ಬ ನಿವೃತ್ತಿಯ ನಂತರ ಆರ್ಥಿಕ ಮುಗ್ಗಟ್ಟಿಗೆ ಸಿಲುಕುವ ಕಥಾ ಹಂದರವನ್ನು ಇದು ಹೊಂದಿದೆ. ಮಗನ ಕನಸಾದ ಕ್ರಿಕೆಟ್ ಜರ್ಸಿ ಕೊಡಿಸುವ ನಾಯಕನ ಪಯಣ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಕನಸಿನ ಬೆನ್ನು ಹತ್ತಿ ಸಾಗುವ ಕಥೆ ಮತ್ತು ಅದನ್ನು ಪಡೆಯುವಾಗ ಸಿಗುವ ಸಂತಸದ ಕ್ಷಣಗಳು ಕಣ್ಣಾಲಿಗಳನ್ನು ತೇವಗೊಳಿಸುವಂತಿವೆ.

ತಾರಾಗಣ: ಶಾಹೀದ್ ಕಪೂರ್, ಮೃಣಾಲ್ ಠಾಕೂರ್

ನಿರ್ದೇಶಕ: ಗೌತಮ್ ನಾಯ್ಡು ತಿನ್ನಾನೂರಿ

ಒಟಿಟಿ: ಸೋನಿ ಲೈವ್

ಐಎಂಡಿಬಿ ರೇಟಿಂಗ್: 7.3/10

3. ಕೌನ್ ಪ್ರವೀಣ್ ತಾಂಬೇ (2022)

ಲೆಗ್ ಸ್ಪಿನ್ನರ್ ಪ್ರವೀಣ್ ತಾಂಬೆ ಅವರ ಜೀವನಾಧಾರಿತ ಚಿತ್ರ ಇದಾಗಿದೆ. ತಮ್ಮ 41ನೇ ವಯಸ್ಸಿನಲ್ಲಿ ಐಪಿಎಲ್ ಪ್ರವೇಶಿಸಿ ಪ್ರವೀಣ್ ಅವರ ಸಾಧನೆಗೆ ವಯಸ್ಸು ಅಡ್ಡಿಯಲ್ಲ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಸ್ಪಷ್ಟ ಗುರಿ ಹಾಗೂ ಬದ್ಧತೆ ಇರುವವರಿಗೆ ವಯಸ್ಸು ಎಂದಿಗೂ ಮಿತಿ ಹೇರದು ಎಂಬುದನ್ನು ನಿರ್ದೇಶಕರು ಕಟ್ಟಿಕೊಟ್ಟಿದ್ದಾರೆ.

ತಾರಾಗಣ: ಶ್ರೇಯಸ್ ತಲ್ಪಾಡೆ, ಆಶೀಶ್ ವಿದ್ಯಾರ್ಥಿ, ಆರೀಫ್ ಝಾಕರಿಯಾ, ಪರಂಬ್ರಾತಾ ಚಟರ್ಜಿ, ಅಂಜಲಿ ಪಾಟೀಲ

ನಿರ್ದೇಶಕ: ಜಯಪ್ರದಾ ದೇಸಾಯಿ

ಒಟಿಟಿ: ಡಿಸ್ನಿ ಪ್ಲಸ್ ಹಾಟ್‌ಸ್ಟಾರ್

ಐಎಂಡಿಬಿ ರೇಟಿಂಗ್: 8.3/10

4. 83 (2021)

1983ರ ವಿಶ್ವಕಪ್ ಅನ್ನು ಮೊದಲ ಬಾರಿಗೆ ಭಾರತ ಜಯಿಸಿದ ರೋಚಕ ಸನ್ನಿವೇಶದ ಕಥಾ ಹಂದರ ಹೊಂದಿರುವ 83. ಭಾರತ ತಂಡದ ಮೇಲೆ ಭರವಸೆಯನ್ನೇ ಹೊಂದಿರದ ಜಗತ್ತಿಗೆ ತನ್ನ ಶಕ್ತಿಯನ್ನು ಸಾರಿ ಹೇಳಿದ 83ರ ತಂಡದ ರೋಚಕ ಕ್ರಿಕೆಟ್ ಮೇಲೆ ಈ ಚಿತ್ರ ಬೆಳಕು ಚೆಲ್ಲಿದೆ.

ತಾರಾಗಣ: ರಣವೀರ್ ಸಿಂಗ್, ದೀಪಿಕಾ ಪಡುಕೋಣೆ, ಪಂಕಜ್ ತ್ರಿಪಾಠಿ, ಹಾರ್ಡಿ ಸಂಧು, ತಾಹಿರ್ ರಾಜಾ ಭಾಸಿನ್, ಜೀವಾ, ಸಾಖೀಬ್ ಸಲೀಂ

ನಿರ್ದೇಶಕ: ಕಬೀರ್ ಖಾನ್

ಒಟಿಟಿ: ನೆಟ್‌ಫ್ಲಿಕ್ಸ್ / ಹಾಟ್‌ಸ್ಟಾರ್

ಎಂಡಿಬಿ ರೇಟಿಂಗ್: 7.5/10

5. ಸಚಿನ್: ಎ ಬಿಲಿಯನ್ ಡ್ರೀಮ್ಸ್ (2017)

ಈ ಚಿತ್ರ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಜೀವನ ಕುರಿತ ಡಾಕ್ಯು ಸಿನಿಮಾ. ಸಚಿನ್ ಈ ಚಿತ್ರವನ್ನು ನಿರೂಪಿಸಿದ್ದಾರೆ. ಬ್ಯಾಟ್ ಹಿಡಿದು ಸದ್ದು ಮಾಡಿದ ಪುಟ್ಟ ಬಾಲಕನಿಂದ ಹಿಡಿದು ಶತಕಗಳ ಶತಕ ಸಿಡಿಸಿದ ಸಚಿನ್‌ವರೆಗೂ ಚಿತ್ರಕಥೆ ಸಾಗುತ್ತದೆ.

ತಾರಾಗಣ: ಸಚಿನ್ ತೆಂಡೂಲ್ಕರ್, ಎಂ.ಎಸ್.ಧೋನಿ, ಮಯೂರೇಶ್ ಪ್ರೇಮ್, ಅಂಜಲಿ ತೆಂಡೂಲ್ಕರ್, ಅರ್ಜುನ್ ತೆಂಡೂಲ್ಕರ್

ನಿರ್ದೇಶಕ: ಜೇಮ್ಸ್ ಎರ್ಸ್ಕಿನ್

ಒಟಿಟಿ: ಸೋನಿ ಲೈವ್

ಐಎಂಡಿಬಿ ರೇಟಿಂಗ್: 8.5/10

6. ಎಂ.ಎಸ್.ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಅವರ ಜೀವನಾಧಾರಿತ ಚಿತ್ರ ಇದು. ಸುಶಾಂತ್ ಸಿಂಗ್ ಈ ಚಿತ್ರದಲ್ಲಿ ಧೋನಿಯಾಗಿ ನಟಿಸಿದ್ದರು. ಫುಟ್‌ಬಾಲ್ ಆಟಗಾರನನ್ನು ಕ್ರಿಕೆಟ್‌ಗೆ ಕರೆತರುವ ಕೋಚ್, ಭಾರತೀಯ ರೇಲ್ವೆಯಲ್ಲಿ ಟಿಟಿ ಹುದ್ದೆ ಸಿಕ್ಕರೂ ಕ್ರಿಕೆಟ್‌ಗಾಗಿ ಕೆಲಸಕ್ಕೆ ರಾಜೀನಾಮೆ ನೀಡುವುದರಿಂದ ಹಿಡಿದು, ವಿಶ್ವಕಪ್ ಎತ್ತಿ ಹಿಡಿಯುವವರೆಗಿನ ರೋಚಕ ಕಥೆ ಇದಾಗಿದೆ.

ತಾರಾಗಣ: ಸುಶಾಂತ್ ಸಿಂಗ ರಜಪೂತ್, ಕಿಯಾರಾ ಅಡ್ವಾನಿ, ದಿಶಾ ಪಟಾನಿ, ಅನುಪಮ್ ಖೇರ್, ಭೂಮಿಕಾ ಚಾವ್ಲಾ

ನಿರ್ದೇಶನ: ನೀರಜ್ ಪಾಂಡೇ

ಒಟಿಟಿ: ಡಿಸ್ನಿ ಪ್ಲಸ್ ಹಾಟ್‌ಸ್ಟಾರ್

ಐಎಂಡಿಬಿ ರೇಟಿಂಗ್: 8/10

7. ಅಜರ್ (2016)

ಭಾರತದ ತಂಡದ ಮಾಜಿ ನಾಯಕ ಮಹಮ್ಮದ್ ಅಜರುದ್ದೀನ್ ಅವರ ಜೀವನ ಆಧಾರಿತ ಚಿತ್ರ ಅಜರ್. ವೃತ್ತಿಪರ ಕ್ರಿಕೆಟಿಗನ ಬದುಕನ್ನು ಈ ಚಿತ್ರ ಕಟ್ಟಿಕೊಟ್ಟಿದೆ. ಈ ಪ್ರಯಾಣದಲ್ಲಿನ ಜಟಿಲತೆ ಹಾಗೂ ಸವಾಲುಗಳ ಮೇಲೂ ಚಿತ್ರ ಬೆಳಕು ಚೆಲ್ಲಿದೆ.

ತಾರಾಗಣ: ಇಮ್ರಾನ್ ಹಷ್ಮಿ, ಪ್ರಾಚಿ ದೇಸಾಯಿ, ನರ್ಗಿಸ್ ಫಖ್ರಿ, ಲಾರಾ ದತ್ತ

ನಿರ್ದೇಶನ: ಟೋನಿ ಡಿಸೋಜಾ

ಒಟಿಟಿ: ಸೋನಿ ಲೈವ್

ಐಎಂಡಿಬಿ ರೇಟಿಂಗ್: 5.7/10

8. ಕಾಯ್ ಪೊ ಚೆ (2013)

ಲೇಖಕ ಚೇತನ್ ಭಗತ್ ಅವರ ‘3 ಮಿಸ್ಟೇಕ್ಸ್ ಆಫ್ ಮೈ ಲೈಫ್‘ ಕಾದರಂಬರಿ ಆಧಾರಿತ ಚಿತ್ರ ‘ಕಾಯ್ ಪೊ ಛೆ’. ಕ್ರಿಕೆಟ್ ಆಟಗಾರರಾಗುವ ಕನಸು ಹೊತ್ತು ಅಕಾಡೆಮಿ ಸೇರಿದ ಮೂವರು ಸ್ನೇಹಿತರು, ನಂತರ ಭೂಕಂಪದ ಸಂಕಷ್ಟ, ರಾಜಕೀಯದ ಬಿರುಗಾಳಿ, ಕೋಮು ಗಲಬೆಯ ಕಷ್ಟದ ನಡುವೆಯೂ ತಮ್ಮ ಮಹತ್ವಾಕಾಂಕ್ಷೆ ತಲುಪುವ ಅವರ ಛಲವನ್ನು ಚಿತ್ರ ಹಿಡಿದಿಟ್ಟಿದೆ. ಸ್ನೇಹ, ದ್ರೋಹ, ಮಹತ್ವಾಕಾಂಕ್ಷೆಯನ್ನು ಚಿತ್ರದಲ್ಲಿ ತೋರಿಸಿದ್ದಾರೆ.

ತಾರಾಗಣ: ಸುಶಾಂತ್ ರಜಪೂತ್, ರಾಜ್‌ಕುಮಾರ್ ರಾವ್, ಅಮಿತ್ ಸಾಧ್, ಅಮೃತಾ ಪುರಿ, ಮಾನವ್ ಕೌಲ್

ನಿರ್ದೇಶನ: ಅಭಿಷೇಕ್ ಕಪೂರ್

ಒಟಿಟಿ: ನೆಟ್‌ಫ್ಲಿಕ್ಸ್

ಐಎಂಡಿಬಿ ರೇಟಿಂಗ್: 7.8/10

9. ಫೆರಾರಿ ಕಿ ಸವಾರಿ (2012)

ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ಆಡಬೇಕೆಂಬ ಮಗನ ಬಯಕೆಯನ್ನು ಈಡೇರಿಸುವ ಕಥಾ ಹಂದರವುಳ್ಳ ಚಿತ್ರ ಇದು. ಅದಕ್ಕಾಗಿ ಫೆರಾರಿ ಕದಿಯುವ ಸನ್ನಿವೇಶ ಚಿತ್ರದ ಶೀರ್ಷಿಕೆಯಾಗಿದೆ. ಕದ್ದ ಕಾರು ಸಚಿನ್ ತೆಂಡೂಲ್ಕರ್ ಅವರದ್ದು ಎಂದು ತಿಳಿದ ನಂತರ ಕಥೆ ಪಡೆಯುವ ತಿರುವು ಚಿತ್ರದ ರೋಚಕ ಭಾಗ.

ತಾರಾಗಣ: ಶರ್ಮನ್ ಜೋಶಿ, ಬೊಮನ್ ಇರಾನಿ, ಋತ್ವಿಕ್ ಸಾಹೋರ್, ಸತ್ಯದೀಪ್ ಮಿಶ್ರಾ

ನಿರ್ದೇಶನ: ರಾಜೇಶ್ ಮಾಪುಸ್ಕರ್

ಒಟಿಟಿ: ಡಿಸ್ನಿ ಪ್ಲಸ್ ಹಾಟ್‌ಸ್ಟಾರ್/ ಅಮೆಜಾನ್ ಪ್ರೈಂ

ಐಎಂಡಿಬಿ ರೇಟಿಂಗ್: 6.4/10

10. ಪಟಿಯಾಲ ಹೌಸ್ (2011)

ಕ್ರಿಕೆಟ್ ಬಗ್ಗೆ ತಂದೆಯ ತಿರಸ್ಕಾರದ ನಡುವೆಯೂ ಮಗ ಅದನ್ನು ಅಪ್ಪಿಕೊಳ್ಳುವ ಚಿತ್ರವಿದು. ಚಿತ್ರದ ಒಂದು ಹಂತದಲ್ಲಿ ತಂದೆಯ ಆಸೆ ಈಡೇರಿಸುವುದು ಹಾಗೂ ತನ್ನ ನೆಚ್ಚಿನ ಕ್ರಿಕೆಟ್ ಮುಂದುವರಿಸುವ ಕವಲು ದಾರಿಯಲ್ಲಿ ಗುಟ್ಟು ನಿಲ್ಲುವುದು ಚಿತ್ರದ ರೋಚಕ ಕ್ಷಣ.

ತಾರಾಗಣ: ಅಕ್ಷಯ್ ಕುಮಾರ್, ಅನುಷ್ಕಾ ಶರ್ಮಾ, ರಿಷಿ ಕಪೂರ್, ಡಿಂಪಲ್ ಕಪಾಡಿಯಾ

ನಿರ್ದೇಶಕ: ನಿಖಿಲ್ ಅಡ್ವಾನಿ

ಒಟಿಟಿ: ಡಿಸ್ನಿ ಪ್ಲಸ್ ಹಾಟ್‌ಸ್ಟಾರ್

ಐಎಂಡಿಬಿ ರೇಟಿಂಗ್: 5.6/10

ಇವುಗಳೊಂದಿಗೆ ಇಕ್ಬಾಲ್ (2005), ಲಗಾನ್ (2001), ದಿಲ್ ಬೋಲೆ ಹಡಿಪಾ (2009), ವಿಕ್ಟರಿ (2009), ಚೈನ್ ಕುಲಿ ಕಿ ಮೇ ಕುಲಿ (2007) ಹಿಂದಿ ಚಿತ್ರಗಳಿವೆ. ಕನ್ನಡದಲ್ಲಿ ಇತ್ತೀಚೆಗೆ ತೆರೆಕಂಡ ‘ಡೇರ್ ಡೆವಿಲ್ ಮುಸ್ತಫಾ’ ಕೂಡಾ ಕ್ರಿಕೆಟ್ ಕಥೆ ವಸ್ತುವನ್ನೇ ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.