ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ವಕಪ್‌ ಗೆದ್ದ ಬಳಿಕ ಕೊಹ್ಲಿಯ ಇನ್‌ಸ್ಟಾಗ್ರಾಮ್ ಪೋಸ್ಟ್‌ ಸೃಷ್ಟಿಸಿತು ದಾಖಲೆ!

Published 30 ಜೂನ್ 2024, 16:22 IST
Last Updated 30 ಜೂನ್ 2024, 16:22 IST
ಅಕ್ಷರ ಗಾತ್ರ

ಬೆಂಗಳೂರು: ಟಿ–20 ವಿಶ್ವಕಪ್‌ ಗೆದ್ದ ಬಳಿಕ ಭಾರತ ಕ್ರಿಕೆಟ್ ತಂಡದ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ ಪೋಸ್ಟ್ ದಾಖಲೆ ಸೃಷ್ಟಿಸಿದೆ. ಭಾರತದಲ್ಲಿ ಅತಿ ಹೆಚ್ಚು ಲೈಕ್ ಪಡೆದ ಪೋಸ್ಟ್ ಎನ್ನುವ ಅಗ್ಗಳಿಕೆಗೆ ಅದು ಪಾತ್ರವಾಗಿದೆ.

ಅಪ್ಲೋಡ್ ಮಾಡಿದ ಬಳಿಕ ಈವರೆಗೂ 17 ಮಿಲಿಯನ್‌ಗೂ (1.7 ಕೋಟಿ) ಅಧಿಕ ಲೈಕ್‌ಗಳನ್ನು ಪಡೆದಿದೆ. ಆ ಮೂಲಕ ಮೈದಾನದ ಹೊರಗೆಯೂ ಹೊಸತೊಂದು ದಾಖಲೆಯನ್ನು ವಿರಾಟ್ ಸೃಜಿಸಿದ್ದಾರೆ.

ತಂಡದ ಸದಸ್ಯರೊಂದಿಗೆ ನಾಯಕ ರೋಹಿತ್ ಶರ್ಮಾ ಅವರು ಟ್ರೋಫಿ ಎತ್ತಿ ಹಿಡಿಯುವ ಚಿತ್ರವನ್ನು ಅವರು ಹಂಚಿಕೊಂಡಿದ್ದಾರೆ. ‘ಇದಕ್ಕಿಂತ ಒಳ್ಳೆಯ ದಿನದ ಕನಸು ಕಾಣಲು ಸಾಧ್ಯವಿರಲಿಲ್ಲ. ದೇವರು ದೊಡ್ಡವನು. ನಾನು ಕೃತಜ್ಞತೆಯಿಂದ ತಲೆ ಬಾಗಿಸುತ್ತೇನೆ. ನಾವು ಅಂತಿಮವಾಗಿ ಗೆದ್ದೆವು. ಜೈ ಹಿಂದ್’ ಎಂದು ಬರೆದುಕೊಂಡಿದ್ದಾರೆ.

ಕೊಹ್ಲಿ ಅವರು ಈ ಚಿತ್ರ ಪೋಸ್ಟ್ ಮಾಡಿದ ಬೆನಲ್ಲೇ, ಲೈಕ್, ಕಮೆಂಟ್‌ಗಳ ಮಹಾಪೂರವೇ ಹರಿದುಬಂದಿದೆ. ವಿವಿಧ ಕ್ಷೇತ್ರದ ದಿಗ್ಗಜರು ಕಮೆಂಟ್‌ನಲ್ಲಿ ಶುಭಹಾರೈಸಿದ್ದಾರೆ. ಕೇವಲ 15 ಗಂಟೆಯಲ್ಲಿ 6.74 ಲಕ್ಷ ಕಮೆಂಟ್‌ಗಳು ಬಂದಿವೆ.

ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಫೈನಲ್ ಪಂದ್ಯ 76 ರನ್ ಕಲೆ ಹಾಕುವ ಮೂಲಕ ಭಾರತದ ಗೆಲುವಿನಲ್ಲಿ ಪ್ರಮುಖ ಕಾಣಿಗೆ ನೀಡಿದ್ದರು. ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದರು.

ಗೆಲುವಿನ ಬಳಿಕ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT