ಬುಧವಾರ, ಜನವರಿ 22, 2020
25 °C

ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ವಿಂಡೀಸ್; ಭಾರತಕ್ಕೆ ಆರಂಭಿಕ ಆಘಾತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

KL Rahul

 ತಿರುವನಂತಪುರ: ಇಲ್ಲಿನ  ಗ್ರೀನ್‌ಫೀಲ್ಡ್‌ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ  ವೆಸ್ಟ್ ಇಂಡೀಸ್ ಮತ್ತು ಭಾರತ ನಡುವಿನ ಟಿ20 ಏಕದಿನ ಅಂತರರಾಷ್ಟ್ರೀಯ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. 

 ಆರಂಭಿಕ ದಾಂಡಿಗರಾಗಿ ರೋಹಿತ್ ಶರ್ಮಾ ಮತ್ತು ಕೆ.ಎಲ್ ರಾಹುಲ್ ಕ್ರೀಸ್‌ಗಿಳಿದಿದ್ದು, 3ನೇ ಓವರ್‌ನಲ್ಲಿ ಪರೇರಾ ಎಸೆತಕ್ಕೆ ರಾಹುಲ್ (11 ರನ್)  ಔಟಾಗಿದ್ದಾರೆ. 

ಇದನ್ನೂ ಓದಿ: IND vs WI ಟಿ20 ಪಂದ್ಯ ಇಂದು: ಸರಣಿ ಕೈವಶಕ್ಕೆ ಕೊಹ್ಲಿ ಬಳಗದ ಚಿತ್ತ

 ರೋಹಿತ್ ಶರ್ಮಾ ಮತ್ತು ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಶಿವಂ  ದುಬೆ ಉತ್ತಮ ಜತೆಯಾಟ ಪ್ರದರ್ಶಿಸಿದ್ದರೂ 8ನೇ ಓವರ್‌ನಲ್ಲಿ ರೋಹಿತ್  (15 ರನ್) ಜೇಸನ್ ಹೋಲ್ಡರ್‌ಗೆ ವಿಕೆಟ್ ಒಪ್ಪಿಸಿದರು.

ಶಿವಂ ದುಬೆ ಅರ್ಧ ಶತಕ ಸಿಡಿಸಿ ಟೀಂ ಇಂಡಿಯಾದ ರನ್ ಏರಿಸುವಲ್ಲಿ ನೆರವಾದರು. ಆದರೆ  11ನೇ ಓವರ್‌ನಲ್ಲಿ ವಾಲ್ಶ್ ಎಸೆತಕ್ಕೆ ಶಿಮ್ರೊನ್ ಹೆಟ್ಮೆಯರ್‌ಗೆ ಕ್ಯಾಚಿತ್ತು ದುಬೆ ಔಟಾದರು.

ವಿರಾಟ್ ಕೊಹ್ಲಿ ಮತ್ತು ಪಂತ್ ಕ್ರೀಸ್‌ನಲ್ಲಿದ್ದು  ಭಾರತ ಮೂರು ವಿಕೆಟ್ ನಷ್ಟಕ್ಕೆ  106ರನ್ ಗಳಿಸಿದೆ.

 

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು