ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಲ್ಯಾಟ್‌ ಖಾಲಿ ಮಾಡಲು ಸೂಚನೆ: ಸಂಕಷ್ಟದಲ್ಲಿ ಫುಟ್‌ಬಾಲ್‌ ಆಟಗಾರರು

Last Updated 19 ಮೇ 2020, 19:45 IST
ಅಕ್ಷರ ಗಾತ್ರ

ಕೋಲ್ಕತ್ತ : ದೇಶದಾದ್ಯಂತ ಜಾರಿಯಲ್ಲಿರುವ ಲಾಕ್‌ಡೌನ್‌ನಿಂದಾಗಿ ಈಸ್ಟ್‌ ಬೆಂಗಾಲ್‌ ಫುಟ್‌ಬಾಲ್‌ ಕ್ಲಬ್‌ನ ಆಟಗಾರರು ಹಾಗೂ ದೈಹಿಕ ತರಬೇತುದಾರ ಕಾರ್ಲೊಸ್‌ ನೊಡಾರ್‌ ಅವರು ನಗರದ ಫ್ಯಾಟ್‌ ಒಂದರಲ್ಲಿ ‘ಬಂದಿ’ಯಾಗಿದ್ದಾರೆ. ಅವರಿಗೆ ಫ್ಲ್ಯಾಟ್‌ ವ್ಯವಸ್ಥೆ ಮಾಡಿರುವ ಕ್ವೆಸ್‌ ಕಾರ್ಪ್‌ ಎಂಬ ಕಂಪೆನಿಯು ಖಾಲಿ ಮಾಡಲು ಹೇಳಿದ್ದು, ಅವರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ತಂಡದ ಬಹುತೇಕ ವಿದೇಶಿ ಆಟಗಾರರು ತಮ್ಮ ತವರು ದೇಶಗಳಿಗೆ ತೆರಳಿದ್ದಾರೆ. ಸ್ಪೇನ್‌ನ ನೊಡಾರ್‌ ಸೇರಿದಂತೆ ಕೆಲವು ಆಟಗಾರರು ಮಾತ್ರ ಇಲ್ಲಿಯೇ ಉಳಿದುಕೊಂಡಿದ್ದರು.

‘ಇದೊಂದು ಕೆಟ್ಟ ಗಳಿಗೆ. ದೇಶದಾದ್ಯಂತ ಲಾಕ್‌ಡೌನ್‌ ಜಾರಿಯಲ್ಲಿರುವ ಸಂದರ್ಭದಲ್ಲಿ ನಾವು ಎಲ್ಲಿಗೆ ಹೋಗುವುದು?. ಯಾವುದೇ ಮಾರ್ಗವಿಲ್ಲದಿದ್ದರೆ ನಾವು ಫ್ಲ್ಯಾಟ್‌ ಖಾಲಿ ಮಾಡಲೇಬೇಕು. ಆದರೆ ಆಡಳಿತ ಮಂಡಳಿಯೂ ನಮ್ಮ ಕರೆಗಳನ್ನು ಸ್ವೀಕರಿಸುತ್ತಿಲ್ಲ ’ ಎಂದು ಆಟಗಾರನೋರ್ವ ಅಲವತ್ತುಕೊಂಡಿದ್ದಾರೆ.

ಬೆಂಗಳೂರು ಮೂಲದ ಕ್ವೆಸ್‌ ಗ್ರೂಪ್‌, ಕೋವಿಡ್‌–19 ಪಿಡುಗು ಉಲ್ಲೇಖಿಸಿ, ಹೋದ ತಿಂಗಳು ಮೇ 1ರಿಂದ ಜಾರಿಗೆ ಬರುವಂತೆ ಕ್ಲಬ್‌ ಜೊತೆಗಿನ ತನ್ನ ಒಪ್ಪಂದವನ್ನು ರದ್ದುಗೊಳಿಸಿತ್ತು. ಇದೇ31ರಿಂದ ಈಸ್ಟ್‌ ಬೆಂಗಾಲ್‌ ಕ್ಲಬ್‌ಅನ್ನು ತೊರೆಯಲಿದೆ. ಈ ಕುರಿತು ಆಟಗಾರರು ಭಾರತ ಫುಟ್‌ಬಾಲ್‌ ಆಟಗಾರರ ಅಸೋಸಿಯೇಷನ್‌ಅನ್ನು ಸಂಪರ್ಕಿಸಿದ್ದರು.

ಈ ಕುರಿತು ಪ್ರತಿಕ್ರಿಯಿಸಲು ಕ್ವೆಸ್‌ ಗ್ರೂಪ್‌ ಪ್ರಮುಖ ಅಧಿಕಾರಿಗಳು ಸಂಪರ್ಕಕ್ಕೆ ಸಿಕ್ಕಿಲ್ಲ. ಆದರೆ ‘ಕ್ವೆಸ್‌ ಈಸ್ಟ್ ಬೆಂಗಾಲ್‌ ಫುಟ್‌ಬಾಲ್‌ ಕ್ಲಬ್‌ ಅಡ್ಮಿನ್‌ ತಂಡ’ದಿಂದ ತಮಗೆ ಸಂದೇಶ ಬಂದಿರುವುದಾಗಿ ಆಟಗಾರರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT