ಗುರುವಾರ, 8 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಳಿಕೆಯಲ್ಲಿ ರೊನಾಲ್ಡೊ ಹಿಂದಿಕ್ಕಿದ ಮೆಸ್ಸಿ

Last Updated 15 ಸೆಪ್ಟೆಂಬರ್ 2020, 17:59 IST
ಅಕ್ಷರ ಗಾತ್ರ

ಪ್ಯಾರಿಸ್: ಲಯೊನೆಲ್ ಮೆಸ್ಟಿ 2020ರಲ್ಲಿ ಅತಿ ಹೆಚ್ಚು ಹಣ ಗಳಿಸಿದ ಫುಟ್‌ಬಾಲ್ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ಈ ಹಾದಿಯಲ್ಲಿ ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಅವರನ್ನೂ ಹಿಂದಿಕ್ಕಿದ್ದಾರೆ.

ಫೋರ್ಬ್ಸ್‌ ನಿಯತಕಾಲಿಕೆಯು ಮಂಗಳವಾರ ಪ್ರಕಟಿಸಿರುವ ವರ್ಷದ ಅತಿ ಹೆಚ್ಚು ಆದಾಯ ಗಳಿಸಿದ ಹತ್ತು ಫುಟ್‌ಬಾಲ್ ಆಟಗಾರರ ಪಟ್ಟಿಯಲ್ಲಿ ಮೆಸ್ಸಿ ಅಗ್ರಸ್ಥಾನದಲ್ಲಿದ್ದಾರೆ. ಕ್ಲಬ್‌ಗಳ ಆಟಗಾರರಲ್ಲಿ ಹೆಚ್ಚು ಆದಾಯ ಗಳಿಸುತ್ತಿರುವವರನ್ನು ಪಟ್ಟಿ ಮಾಡಲಾಗಿದೆ. ಬಾರ್ಸಿಲೋನಾ ಎಫ್‌ಸಿ ಗೆ ಆಡುವ ಮೆಸ್ಸಿ ₹ 927 ಕೋಟಿ ಆದಾಯ ಗಳಿಸಿದ್ದಾರೆ. ಯುವೆಂಟಿಸ್‌ಗೆ ಆಡುವ ರೊನಾಲ್ಡೊ ₹ 862 ಕೋಟಿ ಆದಾಯ ಪಡೆಯುತ್ತಿದ್ದಾರೆ. ಪಿಎಸ್‌ಜಿಗೆ ಆಡುವ ನೇಮರ್ (₹ 706 ಕೋಟಿ) ಮತ್ತು ಕೈಲಿಯನ್ ಎಂಬಾಪೆ (₹ 309 ಕೋಟಿ) ಅವರು ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ.

ಲಿವರ್‌ಪೂಲ್‌ನ ಮೊಹಮ್ಮದ್ ಸಲ್ಹಾ (₹ 272 ಕೋಟಿ), ಮ್ಯಾನ್‌ ಯುನೈಟೆಡ್‌ ಪಾಲ್ ಪೊಗ್ಬಾ (₹ 250 ಕೋಟಿ), ಬಾರ್ಸಿಲೋನಾದ ಆ್ಯಂಟಿಯೊನ್ ಗ್ರೀಜ್‌ಮನ್ (₹ 243 ಕೋಟಿ), ರಿಯಲ್ ಮ್ಯಾಡ್ರಿಡ್‌ ಕ್ಲಬ್‌ನ ಗೆರೆತ್ ಬಾಲೆ (₹ 213 ಕೋಟಿ), ಬೇರನ್‌ನ ರಾಬರ್ಟ್‌ ಲೆವಾಂಡೊವಸ್ಕಿ (₹ 206 ಕೋಟಿ) ಮತ್ತು ಮ್ಯಾನ್‌ ಯುನೈಟೆಡ್‌ನ ಡೇವಿಡ್ ಡಿ ಗಿಯಾ (₹ 198 ಕೋಟಿ) ಅವರು ಕ್ರಮವಾಗಿ ನಾಲ್ಕರಿಂದ ಹತ್ತರವರೆಗಿನ ಸ್ಥಾನದಲ್ಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT