ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜೀಪ್ ರ‍್ಯಾಲಿ: ಚೇತನ್‌, ಮಯೂರ್‌ಗೆ ಪ್ರಶಸ್ತಿ

ಮೀನಾ ಜೋಡಿ ಮಹಿಳಾ ವಿಭಾಗದ ಚಾಂಪಿಯನ್ಸ್‌
Published 15 ಜೂನ್ 2024, 15:52 IST
Last Updated 15 ಜೂನ್ 2024, 15:52 IST
ಅಕ್ಷರ ಗಾತ್ರ

ನರಸಿಂಹರಾಜಪುರ (ಚಿಕ್ಕಮಗಳೂರು ಜಿಲ್ಲೆ): ಕೊಡಗಿನ ಚೇತನ್ ಚೆಂಗಪ್ಪ ಮತ್ತು ಮಯೂರ್ ಬೋಪಯ್ಯ ಅವರು ಇಲ್ಲಿ ಶನಿವಾರ ನಡೆದ ಮಡ್ ಟಸ್ಕರ್ಸ್ ಜೀಪ್ ರ‍್ಯಾಲಿಯ ಮುಕ್ತ ವಿಭಾಗದ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಎನ್.ಆರ್.ಪುರ ಅಡ್ವೆಂಚರ್ ಆ್ಯಂಡ್ ಮೋಟರ್‌ ಸ್ಪೋರ್ಟ್ಸ್ ಕ್ಲಬ್ ಹಾಗೂ ಇಂಡಿಯನ್ ಮೋಟರ್‌ ಸ್ಪೋರ್ಟ್ಸ್ ಕ್ಲಬ್ (ಐಎಂಎಸ್‌ಸಿ) ಸೀಗುವಾನಿ ಗ್ರಾಮದ ಭದ್ರಾ ಹಿನ್ನೀರು ಪ್ರದೇಶದಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಅವರು ₹ 1 ಲಕ್ಷ ನಗದು ಮತ್ತು ಟ್ರೋಫಿಯೊಂದಿಗೆ ಸಂಭ್ರಮಿಸಿದರು.

ಕೇರಳದ ಮಹಮ್ಮದ್ ಫಹಾದ್ ಮತ್ತು ರಾಜೀವ್ ಲಾಲ್‌ ರನ್ನರ್ ಅಪ್‌ ಆದರು. ಅವರಿಗೆ ₹ 50 ಸಾವಿರ ನಗದು ಮತ್ತು ಟ್ರೋಫಿ ಲಭಿಸಿತು. ಮೂರನೇ ಸ್ಥಾನ ಗಳಿಸಿದ ಕೇರಳದ ಮೆಹಬೂಬ್ ಕೆ ₹ 30 ಸಾವಿರ ನಗದು ಗೆದ್ದರು.

ಮಹಿಳೆಯರ ಮುಕ್ತ ವಿಭಾಗದಲ್ಲಿ ಬೆಂಗಳೂರಿನ ಮೀನಾ ಶ್ರೀಕಾಂತ್ ಮತ್ತು ಅಭಿನಂದನ್ ಮೊದಲಿಗರಾದರು. ಅವರಿಗೆ ₹ 15 ಸಾವಿರ ನಗದು ಮತ್ತು ಟ್ರೋಫಿ ಲಭಿಸಿತು. ಬೆಂಗಳೂರಿನ ಸಹನಾ ಶೆಟ್ಟಿ ಮತ್ತು ಸವನ್ ಸತ್ಯನಾರಾಯಣ ರನ್ನರ್ ಅಪ್‌ ಸ್ಥಾನದೊಂದಿಗೆ ₹ 10 ಸಾವಿರ ನಗದು ತಮ್ಮದಾಗಿಸಿಕೊಂಡರು.

ಸ್ಟಾಕ್ ಡೀಸೆಲ್ ವಿಭಾಗದಲ್ಲಿ ಹಾಸನದ ವಿನಯಕುಮಾರ್‌, ವಿಕ್ರಮ ಪ್ರಥಮ, ಕೊಡಗಿನ ಅಭಿಷೇಕ್ ಉತ್ತಪ್ಪ, ಸೋನು ಪೊನ್ನಣ್ಣ ದ್ವಿತೀಯ, ಕೊಡಗಿನ ಅಪ್ಪಣ್ಣ ಬಿ.ಕೆ, ಶಮಂತ್ ಜೈನ್ ತೃತೀಯ ಬಹುಮಾನ ಗೆದ್ದುಕೊಂಡರು. ಇವರಿಗೆ ಕ್ರಮವಾಗಿ ₹ 50 ಸಾವಿರ, ₹ 25 ಸಾವಿರ ಮತ್ತು ₹ 15 ಸಾವಿರ ಲಭಿಸಿತು. ಸ್ಟಾಕ್ ಪೆಟ್ರೋಲ್ ವಿಭಾಗದಲ್ಲಿ ಕೇರಳದ ಮಹಮ್ಮದ್, ಜಾಫಾಜ್‌ ಪ್ರಥಮ, ಕೇರಳದ ಶಬಿಲ್, ಜಮ್ಶದ್‌ ದ್ವಿತೀಯರಾದರು. ಇವರಿಗೆ ಕ್ರಮವಾಗಿ ₹ 50 ಸಾವಿರ, ₹ 25 ಸಾವಿರ ನಗದು ನೀಡಲಾಯಿತು.

ದುರ್ಗಮ ಹಾದಿಯಲ್ಲಿ ಮುಂದೆ ಸಾಗುವ ಪ್ರಯತ್ನ
ದುರ್ಗಮ ಹಾದಿಯಲ್ಲಿ ಮುಂದೆ ಸಾಗುವ ಪ್ರಯತ್ನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT