ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಪುರುಷರ ಹಾಕಿ: ಭಾರತ ಜೂನಿಯರ್ ತಂಡಕ್ಕೂ ಸೋಲು

Published 24 ಮೇ 2024, 15:33 IST
Last Updated 24 ಮೇ 2024, 15:33 IST
ಅಕ್ಷರ ಗಾತ್ರ

ಬ್ರೆಡಾ (ನೆದರ್ಲೆಂಡ್ಸ್‌),: ಭಾರತ ಜೂನಿಯರ್ ಪುರುಷರ ಹಾಕಿ ತಂಡ, ಯುರೋಪ್ ಪ್ರವಾಸದ ಮೂರನೇ ಪಂದ್ಯದಲ್ಲಿ ನಿಧಾನಗತಿಯ ಆರಂಭದ ನಂತರ ಹೋರಾಟ ನಡೆಸಿದರೂ, ಸ್ಥಳೀಯ ಡಚ್‌ ಕ್ಲಬ್‌ ಬ್ರೆಡೇಸ್‌ ಹಾಕಿ ವೆರೆನಿಜಿಂಗ್‌ ಪುಷ್‌ ಎದುರು 4–5 ಗೋಲುಗಳ ಸೋಲು ಕಂಡಿತು.

ಗುರುವಾರ ನಡೆದ ಈ ಪಂದ್ಯದಲ್ಲಿ ಭಾರತ ಜೂನಿಯರ್ಸ್‌ ಪರ ನಾಯಕ ರೋಹಿತ್‌ (18ನೇ ನಿಮಿಷ), ಸೌರಬ್ ಆನಂದ್ ಕುಶ್ವಾಹ (24ನೇ), ಅಂಕಿತ್ ಪಾಲ್ (32ನೇ) ಮತ್ತು ಅರ್ಷದೀಪ್ ಸಿಂಗ್ (58ನೇ) ಗೋಲು ಗಳಿಸಿದರು. 

ಇದು ಭಾರತ ತಂಡಕ್ಕೆ ಪ್ರವಾಸದ ಮೂರನೇ ಪಂದ್ಯವಾಗಿತ್ತು. ಮೊದಲ ಪಂದ್ಯವನ್ನು ಶೂಟೌಟ್‌ ಮೂಲಕ ಗೆದ್ದುಕೊಂಡಿದ್ದ ಭಾರತ, ಎರಡನೇ ಪಂದ್ಯದಲ್ಲಿ ಬೆಲ್ಜಿಯಂ ಜೂನಿಯರ್ ತಂಡಕ್ಕೆ 2–3 ಗೋಲುಗಳಿಂದ ಸೋತಿತ್ತು.

ಭಾರತ ಜೂನಿಯರ್ ತಂಡ ತನ್ನ ಮುಂದಿನ ಪಂದ್ಯವನ್ನು ಮೇ 28ರಂದು ಜರ್ಮನಿ ಎದುರು ಮಾಂಚೆಂಗ್‌ಲಾಡ್ಬಾಕ್‌ನಲ್ಲಿ  ಆಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT