ಬೆಂಗಳೂರು: ಗೋವಾದ ಮಡಗಾಂವ್ನಲ್ಲಿ ಮಂಗಳವಾರ ಮುಕ್ತಾಯಗೊಂಡ ರಾಷ್ಟ್ರೀಯ 13 ವರ್ಷದೊಳಗಿನವರ ಚೆಸ್ ಚಾಂಪಿಯನ್ಷಿಪ್ನಲ್ಲಿ ಕರ್ನಾಟಕದ ಸಿದ್ಧಾಂತ್ ಪೂಂಜಾ 11 ಸುತ್ತುಗಳಲ್ಲಿ 9 ಅಂಕ ಸಂಗ್ರಹಿಸಿ ರನ್ನರ್ ಅಪ್ ಆಗಿದ್ದಾರೆ.

ಒಂಬತ್ತನೇ ಶ್ರೇಯಾಂಕ ಪಡೆದಿದ್ದ ಮಹಾರಾಷ್ಟ್ರದ ನಾಗ್ಪುರದ ಶೌನಕ್ ಬಡೋಲೆ (10 ಅಂಕ) ಚಾಂಪಿಯನ್ ಕಿರೀಟ ಧರಿಸಿದರು. ಟ್ರೋಫಿ ಮತ್ತು ₹80,000 ನಗದು ಬಹುಮಾನ ಅವರ ಪಾಲಾಯಿತು.

ಹೆಬ್ಬಾಳದ ಸಿಂಧಿ ಹೈಸ್ಕೂಲ್ ಎಂಟನೇ ತರಗತಿ ವಿದ್ಯಾರ್ಥಿಯಾಗಿರುವ ಸಿದ್ಧಾಂತ್, ಟ್ರೋಫಿ ಜೊತೆ ₹60,000 ನಗದು ಬಹುಮಾನ ಪಡೆದರು. ಸಿದ್ಧಾಂತ್ ಟೂರ್ನಿಯಲ್ಲಿ ಅಗ್ರ ಶ್ರೇಯಾಂಕ ಪಡೆದಿದ್ದರು. ಮುಂಬರುವ ಏಷ್ಯನ್ ಮತ್ತು ವಿಶ್ವ ಕೆಡೆಟ್ ಚಾಂಪಿಯನ್ಷಿಪ್ನಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶವನ್ನು ಸಿದ್ಧಾಂತ್ ಗಳಿಸಿದ್ದಾರೆ.

ಡಿಪಿಎಸ್ ನಾರ್ತ್ ಶಾಲೆಯ ಆರವ್ ಸಾಯಿಶ್ ಅಮೋಣಕರ್ 9ನೇ ಸ್ಥಾನ ಗಳಿಸಿ ₹14000 ನಗದು ಬಹುಮಾನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.