ನವದೆಹಲಿ: ಭಾರತದ ಜಾವೆಲಿನ್ ಥ್ರೊ ತಾರೆ ನೀರಜ್ ಚೋಪ್ರಾ ಅವರು ಪೋಲೆಂಡ್ನ ಕಾರ್ಝುಫ್ ನಗರದಲ್ಲಿ ಮೇ 23 ರಂದು ನಡೆಯಲಿರುವ 71ನೇ ಯಾನುಷ್ ಕುಸೊಸಿನ್ಸ್ಕಿ ಮೆಮೋರಿಯಲ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಬೆಂಗಳೂರಿನಲ್ಲಿ ಮೇ 24ರಂದು ನಡೆಯಬೇಕಾಗಿದ್ದ ಎನ್ಸಿ ಕ್ಲಾಸಿಕ್ ಟೂರ್ನಿ ಮುಂದೂಡಿಕೆಯಾಗಿರುವ ಕಾರಣ ಚೋಪ್ರಾ ಇಲ್ಲಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಭಾರತ– ಪಾಕಿಸ್ತಾನ ಗಡಿಯಲ್ಲಿ ಸೇನಾ ಘರ್ಷಣೆಯ ಕಾರಣ ಅವರು ತಮ್ಮದೇ ಆಯೋಜನೆಯ ಈ ಟೂರ್ನಿಯನ್ನು ಮುಂದಕ್ಕೆ ಹಾಕಿದ್ದರು.

ಕಾರ್ಝಫ್ನಲ್ಲಿ ಚೋಪ್ರಾ ಅವರಿಗೆ ಎರಡು ಬಾರಿಯ ವಿಶ್ವ ಚಾಂಪಿಯನ್ ಹಾಗೂ ಪ್ಯಾರಿಸ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಆ್ಯಂಡರ್ಸನ್ ಪೀಟರ್ಸ್ (ಗ್ರೆನೇಡಾ), ಜರ್ಮನಿಯ ಜೂಲಿಯನ್ ವೇಬರ್ ಮತ್ತು ಪೋಲೆಂಡ್ನ ಮರ್ಸಿನ್ ಕ್ರುಕೋವ್ಸ್ಕಿ ಮತ್ತಿತರರ ಸವಾಲು ಎದುರಾಗಲಿದೆ.

ಇದು ಚೋಪ್ರಾ ಅವರಿಗೆ ವರ್ಷದ ಮೂರನೇ ಸ್ಪರ್ಧೆಯಾಗಿದೆ. ಅವರು ಏಪ್ರಿಲ್ 16ರಂದು ದಕ್ಷಿಣ ಆಫ್ರಿಕಾದಲ್ಲಿ ಮೊದಲು ಕಣಕ್ಕಿಳಿದಿದ್ದರು. ಪೋಲೆಂಡ್ನಲ್ಲಿ ಕಣಕ್ಕಿಳಿಯುವ ಮುನ್ನ ಮೇ 16ರಂದು ಅವರು ದೋಹಾದ ಡೈಮಂಡ್ ಲೀಗ್ನಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲಿ 84.52 ಮೀ. ದಾಖಲಿಸಿದ್ದರು. 2023ರಲ್ಲಿ ಇದೇ ಡೈಮಂಡ್ ಲೀಗ್ನಲ್ಲಿ ಅವರು 88.67 ಮೀ. ಎಸೆತದೊಡನೆ ಪ್ರಶಸ್ತಿ ಗೆದ್ದಿದ್ದರು. ಹೋದ ವರ್ಷ (2024) 88.36 ಮೀ. ಎಸೆತದೊಡನೆ ಎರಡನೇ ಸ್ಥಾನ ಗಳಿಸಿದ್ದರು.

ಆರ್ಲೆನ್ ಯಾನುಷ್ ಕುಸೊಸಿನ್ಸ್ಕಿ ಮೆಮೋರಿಯಲ್ ಟೂರ್ನಿಯು ವಿಶ್ವ ಅಥ್ಲೆಟಿಕ್ಸ್ ಟೂರ್ ಸಿಲ್ವರ್ ಮಟ್ಟದ ಸ್ಪರ್ಧೆಯಾಗಿದೆ. ಪೋಲೆಂಡ್ನ ಅತಿ ಹಳೆಯ ಅಥ್ಲೆಟಿಕ್ ಕೂಟವಾಗಿದೆ. ಯುರೋಪಿನ ಹಳೆಯ ಕೂಟಗಳಲ್ಲಿ ಒಂದಾಗಿದೆ. 1932ರ ಲಾಸ್ ಏಂಜಲಿಸ್ ಒಲಿಂಪಿಕ್ಸ್ನ 10,000 ಮೀ. ಓಟದಲ್ಲಿ ಚಾಂಪಿಯನ್ ಆಗಿದ್ದ ಯಾನುಷ್ ಕುಸೊಸಿನ್ಸ್ಕಿ ಹೆಸರಿನಲ್ಲಿ ಅವರ ಸ್ನೇಹಿತರು 1954ರಿಂದ ಈ ಕೂಟವನ್ನು ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.