ಪುಣೆ: ಹಿನ್ನಡೆಯಿದ ಚೇತರಿಸಿಕೊಂಡ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ, 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಶುಕ್ರವಾರ ಬೆಂಗಾಲ್ ವಾರಿಯರ್ಸ್ ತಂಡವನ್ನು 31–28 ಅಂಕಗಳಿಂದ ಸೋಲಿಸಿತು. ಈ ಗೆಲುವಿನೊಡನೆ ಜೈಪುರ ತಂಡ ಐದನೇ ಸ್ಥಾನಕ್ಕೇರಿತು.

12 ತಂಡಗಳ ಲೀಗ್ನಲ್ಲಿ ಮೊದಲ ಆರು ಸ್ಥಾನ ತಂಡಗಳು ಪ್ಲೇಆಫ್ ಹಂತಕ್ಕೇರುತ್ತವೆ. ಬಾಲೇವಾಡಿ ಕ್ರೀಡಾ ಕಾಂಪ್ಲೆಕ್ಸ್ನಲ್ಲಿ ನಡೆಯುತ್ತಿರುವ ಕೊನೆಯ ಹಂತದ ಲೀಗ್ನ ಈ ಪಂದ್ಯದಲ್ಲಿ ವಿರಾಮದ ವೇಳೆ ವಾರಿಯರ್ಸ್ ತಂಡ 19–9ರಲ್ಲಿ ಹತ್ತು ಪಾಯಿಂಟ್ಗಳ ಮುನ್ನಡೆ ಸಾಧಿಸಿತ್ತು. ವಿರಾಮದ ನಂತರ ಜೈಪುರ ತಂಡ ಪುನರಾಗಮನ ಮಾಡಿತು. ಮುಕ್ತಾಯಕ್ಕೆ 9 ನಿಮಿಷಗಳಿರುವಾಗ ಎದುರಾಳಿ ತಂಡವನ್ನು ಆಲೌಟ್ ಮಾಡಿದ ಜೈಪುರ ಮೊದಲ ಬಾರಿ ಮುನ್ನಡೆ ಗಳಿಸಿತು. ಅಂತಿಮವಾಗಿ ಮೂರು ಅಂಕಗಳಿಂದ ಜಯ ಸಾಧಿಸಿತು.

ದಿನದ ಎರಡನೇ ಪಂದ್ಯದಲ್ಲಿ ತೆಲುಗು ಟೈಟನ್ಸ್ ತಂಡ 48–36 ಪಾಯಿಂಟ್ಗಳಿಂದ ಪುಣೇರಿ ಪಲ್ಟನ್ ವಿರುದ್ಧ ಜಯಗಳಿಸಿತು. ಟೈಟನ್ಸ್ 22 ಪಂದ್ಯಗಳಿಂದ 66 ಅಂಕ ಸಂಗ್ರಹಿಸಿ ಪ್ಲೇಆಫ್ನಿಂದ ಹೊರಬಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.